ದಾವಣಗೆರೆ :ದೇವದಾಸಿ ಮಹಿಳೆಯರ ಜಡ್ಡುಗಟ್ಟಿದ ಜಡೆಯನ್ನು ಸಾಂಕೇತಿಕವಾಗಿ ಕತ್ತರಿಸುವ ಮೂಲಕ ಮೌಢ್ಯ ನಿವಾರಣೆಗೆ ಚಿತ್ರದುರ್ಗದ ಡಾ.ಶಿವಮೂರ್ತಿ ಮುರುಘಾ ಶರಣರು ದಿಟ್ಟ ಹೆಜ್ಜೆ ಇಟ್ಟಿದ್ದಾರೆ.
ದೇವದಾಸಿ ಮಹಿಳೆಯರ ಜಡೆ ಕತ್ತರಿಸಿ ಮೌಢ್ಯ ನಿವಾರಣೆಗೆ ದಿಟ್ಟ ಹೆಜ್ಜೆ ಇಟ್ಟ ಮುರುಘಾ ಶರಣರು - ದಾವಣಗೆರೆ ಲೆಟೆಸ್ಟ್ ನ್ಯೂಸ್
ಇಂದು ಚಿತ್ರದುರ್ಗದ ಡಾ.ಶಿವಮೂರ್ತಿ ಮುರುಘಾ ಶರಣರು ದೇವದಾಸಿ ಮಹಿಳೆಯರ ಜಡ್ಡುಗಟ್ಟಿದ ಜಡೆಯನ್ನು ಸಾಂಕೇತಿಕವಾಗಿ ಕತ್ತರಿಸುವ ಮೂಲಕ ಮೌಢ್ಯ ನಿವಾರಣೆಗೆ ದಿಟ್ಟ ಹೆಜ್ಜೆ ಇಟ್ಟಿದ್ದಾರೆ.
![ದೇವದಾಸಿ ಮಹಿಳೆಯರ ಜಡೆ ಕತ್ತರಿಸಿ ಮೌಢ್ಯ ನಿವಾರಣೆಗೆ ದಿಟ್ಟ ಹೆಜ್ಜೆ ಇಟ್ಟ ಮುರುಘಾ ಶರಣರು ದೇವದಾಸಿ ಮಹಿಳೆಯರ ಜಡೆ ಕತ್ತರಿಸಿದ ಮುರುಘಾ ಶರಣರು](https://etvbharatimages.akamaized.net/etvbharat/prod-images/768-512-5689472-thumbnail-3x2-mghnd.jpg)
ನಗರದ ಶಿವಯೋಗಿ ಮಂದಿರದ ಆಯೋಜಿಸಿದ್ದ ಸಹಜ ಶಿವಯೋಗ ಹಾಗೂ ಶರಣ ಸಾಂಸ್ಕೃತಿಕ ಉತ್ಸವದಲ್ಲಿ ಮೌಢ್ಯಕ್ಕೆ ತಿಲಾಂಜಲಿ ಹೇಳುವ ಕೆಲಸ ನಡೆಯಿತು. ಮಹಿಳೆಯರ ಜಡ್ಡುಟ್ಟಿದ ಜಡೆಯನ್ನು ಸಾಂಕೇತಿಕವಾಗಿ ಕತ್ತರಿಸುವ ವಿನೂತನ ಕಾರ್ಯದ ಮೂಲಕ ಶರಣರು ದಿಟ್ಟತನ ಮೆರೆದಿದ್ದಾರೆ. ಮಣಭಾರದ ಜಡ್ಡುಗಟ್ಟಿ ಜಡೆ ಹೊಂದಿದ್ದ ಮಹಿಳೆಯರಿಗೆ ಒಂದು ರೀತಿಯ ಮುಕ್ತಿ ದೊರೆತಂತಾಗಿದೆ.
ಸಾಂಕೇತಿಕವಾಗಿ ಕೂದಲನ್ನು ಕತ್ತರಿಸಿದ ಶರಣರು, ಕೂದಲನ್ನು ಸಂಪೂರ್ಣವಾಗಿ ತೆಗೆಸಿ ಸ್ನಾನ ಮಾಡಿರಿ, ನಿಮಗೆಲ್ಲ ಒಳ್ಳೆಯದಾಗುತ್ತದೆ. ಮೂಢ ನಂಬಿಕೆಗಳಿಂದ ಮುಕ್ತವಾಗಿ ಉತ್ತಮವಾದ ಜೀವನ ನಡೆಸಿ ಎಂದು ಹಾರೈಸಿದರು. ದೇವದಾಸಿ ನಿರ್ಮೂಲನಾ ಸಂಘ ಅಧ್ಯಕ್ಷೆ ಪ್ರಜ್ಞಾ ಪಾಟೀಲ್ ಹಾಗೂ ಮಹಿಳೆ ಮತ್ತು ಮಕ್ಕಳ ಇಲಾಖೆಯ ಅಧಿಕಾರಿಗಳು ಸಾಥ್ ನೀಡಿದರು.