ಕರ್ನಾಟಕ

karnataka

ETV Bharat / state

ದಾವಣಗೆರೆ ವೃದ್ಧ ದಂಪತಿಯ ಹತ್ಯೆ ಪ್ರಕರಣ: ಮೂವರು ಆರೋಪಿಗಳು ಅರೆಸ್ಟ್​ - ದಾವಣೆಗೆರೆಯ ಮೂವರು ಆರೋಪಿಗಳನ್ನು ಬಂಧಿಸಿದ ಪೊಲೀಸರು

ದಾವಣಗೆರೆ ತಾಲೂಕಿನ ಎಲೇಬೇತೂರಿನಲ್ಲಿ ನಡೆದಿದ್ದ ಜೋಡಿ ಕೊಲೆಯ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಎಲೆಬೇತೂರು ಗ್ರಾಮದ ಮಠದ ಗುರುಸಿದ್ದಯ್ಯ (80) ಸರೋಜಮ್ಮ (75) ಎಂಬ ವೃದ್ಧ ದಂಪತಿಯನ್ನು ಕಳೆದ ಜ. 24 ರ ರಾತ್ರಿ ಹತ್ಯೆ ಮಾಡಲಾಗಿತ್ತು.

ವೃದ್ಧ ದಂಪತಿಯ ಹತ್ಯೆ ಪ್ರಕರಣ: ಮೂವರು ಆರೋಪಿಗಳನ್ನು ಬಂಧಿಸಿದ ಪೊಲೀಸರು
ವೃದ್ಧ ದಂಪತಿಯ ಹತ್ಯೆ ಪ್ರಕರಣ: ಮೂವರು ಆರೋಪಿಗಳನ್ನು ಬಂಧಿಸಿದ ಪೊಲೀಸರು

By

Published : Feb 3, 2022, 8:49 PM IST

Updated : Feb 3, 2022, 8:56 PM IST

ದಾವಣಗೆರೆ: ರಾತ್ರಿ ವೇಳೆ ವೃದ್ಧ ದಂಪತಿಯ ಕತ್ತು ಸೀಳಿ ಹತ್ಯೆಗೈದಿದ್ದ ಮೂರು‌ ಜನ ಆರೋಪಿಗಳು ಅಪಾರ ಪ್ರಮಾಣದ ಹಣ, ಚಿನ್ನಾಭರಣವನ್ನು ದೋಚಿ ಪರಾರಿಯಾಗಿದ್ದರು. ಜೋಡಿ ಕೊಲೆಯಾದ ಒಂದೇ ವಾರದಲ್ಲಿ ಮೂರು ಜನ ಖದೀಮರನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

ದಾವಣಗೆರೆ ತಾಲೂಕಿನ ಎಲೇಬೇತೂರಿನಲ್ಲಿ ನಡೆದಿದ್ದ ಜೋಡಿ ಕೊಲೆಯ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಎಲೆಬೇತೂರು ಗ್ರಾಮದ ಮಠದ ಗುರುಸಿದ್ದಯ್ಯ (80) ಸರೋಜಮ್ಮ (75) ಎಂಬ ವೃದ್ಧ ದಂಪತಿಯನ್ನು ಕಳೆದ ತಿಂಗಳು 24 ರ ರಾತ್ರಿ ಹತ್ಯೆ ಮಾಡಿದ್ದ ದುಷ್ಕರ್ಮಿಗಳು, ಹಣ-ಬಂಗಾರ ದೋಚಿ ಪರಾರಿಯಾಗಿದ್ದರು.

ದಾವಣಗೆರೆ ವೃದ್ಧ ದಂಪತಿಯ ಹತ್ಯೆ ಪ್ರಕರಣ

ಪ್ರಕರಣದ ಬೆನ್ನು ಹತ್ತಿದ ದಾವಣಗೆರೆ ಗ್ರಾಮಾಂತರ ಪೊಲೀಸರು ಎಲೇಬೇತೂರು ಗ್ರಾಮ ನಿವಾಸಿಯಾದ ಓರ್ವ ಹಾಗು ಹರಪನಹಳ್ಳಿ ಹಾಗು ಕೂಡ್ಲಿಗಿ ಪಟ್ಟಣದ ಇಬ್ಬರು ಆರೋಪಿಗಳನ್ನು (ಆರೋಪಿಗಳ ಹೆಸರನ್ನು ಎಸ್ಪಿ ಹೇಳಲು ನಿರಾಕರಿಸಿದರು) ಬಂಧಿಸಿ ಜೈಲಿಗಟ್ಟಿದ್ದಾರೆ. ಮೃತ ವೃದ್ಧ ದಂಪತಿಯ ಮೊಮ್ಮಗನ ಮೇಲೆ ಗುಮಾನಿ ವ್ಯಕ್ತವಾಗಿತ್ತು. ಅದ್ರೇ ಮೊಮ್ಮಗ ಮನೋಜ್ ಇದರಲ್ಲಿ ಭಾಗಿಯಾಗಿಲ್ಲ ಎಂದು ಎಸ್ಪಿ ಸಿಬಿ ರಿಷ್ಯಂತ್ ಸ್ಪಷ್ಟಪಡಿಸಿದ್ದಾರೆ.‌

ಅಡವಿಟ್ಟಿದ್ದ ಆಭರಣಕ್ಕಾಗಿ ವೃದ್ಧ ದಂಪತಿಯ ಕೊಲೆ..ಬಂಧನವಾಗಿರುವ ಮೂರು‌ ಜನ ಆರೋಪಿಗಳು ಮೃತ ವೃದ್ಧ ದಂಪತಿ ಬಳಿ ಹಣದ ವ್ಯವಹಾರ ಇಟ್ಟುಕೊಂಡಿದ್ದರಂತೆ. ಪತ್ನಿಯ ಒಡವೆಗಳನ್ನು ಅಡವಿಟ್ಟಿದ್ದು, ಅವುಗಳನ್ನು ಬಿಡಿಸಿಕೊಳ್ಳಲು ವೃದ್ಧ ದಂಪತಿಯನ್ನು ಈ ಮೂರು ಜನ ದುಷ್ಟರು ಕೊಂದಿದ್ದಾರೆ. ಆರೋಪಿಗಳಿಂದ 1.75 ಲಕ್ಷ ರೂಪಾಯಿ ನಗದು, 188ಗ್ರಾಂ ಚಿನ್ನ ಸೇರಿ 9.27 ಲಕ್ಷ ರೂಪಾಯಿ ನಗ ನಾಣ್ಯವನ್ನು ವಶಕ್ಕೆ ಪಡೆಯಲಾಗಿದೆ.

ಮೃತ ವೃದ್ಧ ದಂಪತಿಯಾದ ಮಠದ ಗುರುಸಿದ್ದಯ್ಯ (80), ಸರೋಜಮ್ಮ (75) ಅವರ ಬಳಿ ಈ ಮೂವರು ಪತ್ನಿಯರ ಒಡವೆಯನ್ನು ಮೂರು ಲಕ್ಷಕ್ಕೆ ಅಡವಿಟ್ಟಿದ್ದರಂತೆ. ಒಡವೆ ಅಡವಿಟ್ಟಿದ್ದರಿಂದ‌ ಬಂದ ಮೂರು ಲಕ್ಷ ಹಣವನ್ನು ಪಡೆದ ಮೂರು ಜನ ಆರೋಪಿಗಳು ವಿಜಯನಗರ ಜಿಲ್ಲೆಯ ಹರಪ್ಪನಹಳ್ಳಿ ತಾಲೂಕಿನ ಉಚ್ಚಂಗಿದುರ್ಗ ಗ್ರಾಮದ ಆಜುಬಾಜು ಜೂಜಾಟವಾಡಿ ಹಣ ಕಳೆದುಕೊಂಡಿದ್ದರು.

ಇದರ ಬೆನ್ನಲ್ಲೇ ಅಡವಿಟ್ಟ ಚಿನ್ನ ಬಿಡಿಸಿಕೊಳ್ಳಲು ಪ್ಲಾನ್​ ಮಾಡಿದ್ದಾರೆ. ಈ ವೇಳೆ ವೃದ್ಧ ದಂಪತಿಯ ಮನೆಯಲ್ಲಿ ಹಣ ಇರುವುದನ್ನು ಮೊದಲೇ ತಿಳಿದಿದ್ದ ಕಿರಾತಕರು, ಅವರನ್ನು ಕೊಲೆ‌ ಮಾಡಿ ಚಿನ್ನ ಹಾಗೂ ಹಣವನ್ನು ತೆಗೆದುಕೊಂಡು ಪರಾರಿಯಾಗಿದ್ದರು. ಘಟನೆ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Last Updated : Feb 3, 2022, 8:56 PM IST

ABOUT THE AUTHOR

...view details