ಕರ್ನಾಟಕ

karnataka

ETV Bharat / state

ದಾವಣಗೆರೆ: ಹೊತ್ತಿನ ತುತ್ತಿಗೂ ಬಿತ್ತು ಕಲ್ಲು.. ಕಾರಣ ಹೇಳದೇ ಐವರ ವಜಾಮಾಡಿದ ಮಹಾನಗರ ಪಾಲಿಕೆ: ಆರೋಪ - ದಾವಣಗೆರೆ ಸುದ್ದಿ

ಇವರು ಕೆಲಸ ಮಾಡುತ್ತಿದ್ದ ಜಾಗಕ್ಕೆ ಬೇರೆಯವರನ್ನು ಪಾಲಿಕೆ ನೇಮಿಸಿಕೊಂಡಿದೆ ಎಂದು ಆರೋಪಿಸಲಾಗಿದೆ. ಈ ಮೊದಲು ಕೆಲಸ ಮಾಡುತ್ತಿದ್ದ ಐವರನ್ನು ಕೆಲಸದಿಂದ ವಜಾ ಮಾಡಿದ್ದಾರೆ ಎಂಬ ಆರೋಪ ಪಾಲಿಕೆ ಕಮಿಷನರ್ ವಿರುದ್ಧ ಕೇಳಿ ಬಂದಿದೆ.

mahanagara-palike-dismissed-5-workers-without-giving-proper-reason
ಕಾರಣ ಹೇಳದೆ ಐವರ ವಜಾಮಾಡಿದ ಮಹಾನಗರ ಪಾಲಿಕೆ

By

Published : Nov 13, 2021, 10:22 AM IST

ದಾವಣಗೆರೆ: ಮಹಾನಗರ ಪಾಲಿಕೆ (Davanagere municipal corporation)ಯಲ್ಲಿ ಕೆಲಸ ಮಾಡಿಕೊಂಡಿದ್ದ ಐವರನ್ನು ವಿನಾಕಾರಣ ಕೆಲಸದಿಂದ ವಜಾ ಮಾಡಲಾಗಿದ್ದು, ಕೆಲಸ ಕಳೆದುಕೊಂಡವರ ಬದುಕು ಬೀದಿಗೆ ಬಿದ್ದಿದೆ. ಪಾಲಿಕೆ ಕಮಿಷನರ್ (Davanagere commissioner) ಯಾವುದೇ ಕಾರಣ ಇಲ್ಲದೇ ಐವರನ್ನು ಕೆಲಸದಿಂದ ವಜಾ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಕಳೆದು ಹತ್ತು ವರ್ಷಗಳಿಂದ ಕೆಲಸ ಮಾಡುತ್ತಿದ್ದ ಕಸದ ವಾಹನ ಚಾಲನೆ ಮಾಡುವವರು ಹಾಗೂ ಉದ್ಯಾನವನ ನೋಡಿಕೊಳ್ಳುತ್ತಿದ್ದವರನ್ನು ಕೆಲಸದಿಂದ ಕಾರಣ ನೀಡದೇ ವಜಾ ಮಾಡಲಾಗಿದೆ. ಯಮುನಮ್ಮ, ಮಹಾಂತೇಶ್ ಸೇರಿ ಒಟ್ಟು ಐವರನ್ನು ಪಾಲಿಕೆ ಕಮಿಷನರ್ ವಿಶ್ವನಾಥ್ ಮುದ್ದಜ್ಜಿ (municipal corporation Commissioner Vishwanath Muddajji) ಕೆಲಸದಿಂದ ತೆಗೆದು ಹಾಕಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ.

ಕಾರಣ ಹೇಳದೆ ಐವರ ವಜಾಮಾಡಿದ ಮಹಾನಗರ ಪಾಲಿಕೆ

ಕೆಲಸ ಕಳೆದುಕೊಂಡವರು ಕಮಿಷನರ್​ ಮುದ್ದಜ್ಜಿಯವರ ಭೇಟಿ ಮಾಡಿ ಮಾತುಕತೆಗೆ ಮುಂದಾದರೂ ಯಾವುದೇ ಉಪಯೋಗವಾಗಿಲ್ಲ ಎಂದು ಕೆಲಸ ಕಳೆದುಕೊಂಡವರು ಅಳಲು ತೋಡಿಕೊಂಡಿದ್ದಾರೆ.

ಇತ್ತೀಚಿಗಷ್ಟೇ ಯಮುನಮ್ಮ, ಮಗಳ ವಿವಾಹಕ್ಕಾಗಿ ಸಾಲ ಮಾಡಿಕೊಂಡಿದ್ದಾರೆ. ಆದರೆ, ಈಗ ಅವರಿಗೆ ಇದ್ದ ಕೆಲಸವೂ ಕೈತಪ್ಪಿದ್ದು, ದಿಕ್ಕು ತೋಚದಂತಾಗಿದೆ. ಜೊತೆಗೆ ಇವರು ಕೆಲಸ ಮಾಡುತ್ತಿದ್ದ ಜಾಗಕ್ಕೆ ಬೇರೆಯವರನ್ನು ಪಾಲಿಕೆ ನೇಮಿಸಿಕೊಂಡಿದೆ ಎಂದು ಆರೋಪಿಸಿದ್ದಾರೆ. ಇದೆಲ್ಲದರ ಬಗ್ಗೆ ಪಾಲಿಕೆ ಕಮಿಷನರ್ ಬಳಿ ಕೇಳಿದರೆ ಇದ್ಯಾವುದೂ ನನ್ನ ಗಮನಕ್ಕೆ ಬಂದಿಲ್ಲ ಎಂಬ ಹಾರಿಕೆ ಉತ್ತರ ನೀಡುತ್ತಿದ್ದಾರೆ ಎಂದೂ ಅವರು ಆರೋಪಿಸಿದ್ದಾರೆ.

ಇದನ್ನೂ ಓದಿ:ಶೌಚಾಲಯದಲ್ಲಿ ಮೃತ ನವಜಾತ ಶಿಶು ಪತ್ತೆ ಪ್ರಕರಣ: ಅತ್ಯಾಚಾರ ಆರೋಪಿ ಅರೆಸ್ಟ್​

ABOUT THE AUTHOR

...view details