ಕರ್ನಾಟಕ

karnataka

ETV Bharat / state

ಮಹಾರಾಷ್ಟ್ರದಂತೆ ರಾಜ್ಯದ ಲಿಂಗಾಯತರಿಗೂ ಶೇ.16 ರಷ್ಟು ಮೀಸಲಾತಿ ನೀಡಿ: ವಚನಾನಂದ ಶ್ರೀ

ಜನವರಿ 15 ಹಾಗು 16 ರಂದು‌ ಜರುಗುವ ಜಾತ್ರಾ ಮಹೋತ್ಸವಕ್ಕೆ ಆಗಮಿಸಲಿರುವ ಕೇಂದ್ರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ತಾವಾರ್ ಚಂದ್ ಗೆಹ್ಲೋಟ್ ಜೊತೆ ಮೀಸಲಾತಿ ಬಗ್ಗೆ ಚರ್ಚಿಸಲಾಗುವುದು ಎಂದು ಹರಿಹರ ಪಂಚಮಸಾಲಿ ಪೀಠದ ವಚನಾನಂದ ಶ್ರೀ ತಿಳಿಸಿದ್ದಾರೆ.

Mr. Vachananand swamiji
ವಚನಾನಂದ ಶ್ರೀ

By

Published : Dec 20, 2020, 9:35 PM IST

ದಾವಣಗೆರೆ: ಮಹಾರಾಷ್ಟ್ರದಂತೆ ನಮ್ಮ ರಾಜ್ಯದಲ್ಲಿ ಎಲ್ಲ ರೀತಿಯ ಲಿಂಗಾಯತರಿಗೆ ಶೇ. 16 ರಷ್ಟು ಮೀಸಲಾತಿ ನೀಡಬೇಕೆಂದು ಹರಿಹರ ಪಂಚಮಸಾಲಿ ಪೀಠದ ವಚನಾನಂದ ಶ್ರೀ ಬೇಡಿಕೆ ಇಟ್ಟಿದ್ದಾರೆ.

ಹರಿಹರ ಪಂಚಮಸಾಲಿ ಪೀಠದ ವಚನಾನಂದ ಶ್ರೀ

ಹರಿಹರದಲ್ಲಿರುವ ಪಂಚಮಸಾಲಿ ಮಠದಲ್ಲಿ ಮಾತನಾಡಿದ‌ ಅವರು, ಹಿಂದುಳಿದ‌ ವರ್ಗಗಳ ಆಯೋಗದ ಅಧ್ಯಕ್ಷರಾದ ಜಯಪ್ರಕಾಶ್ ಹೆಗ್ಡೆ ಅವರ ಬಳಿ ಮೀಸಲಾತಿ ನೀಡುವ ಬಗ್ಗೆ ಮಾತನಾಡಿದ್ದೇವೆ. 2003ರಲ್ಲೇ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ನೀಡುವ ಬಗ್ಗೆ ಸುಮಾರು 80 ಜನ ಹಿರಿಯರು ಅಟಲ್ ಜೀ ಹಾಗು ಅಡ್ವಾಣಿಯವರನ್ನು ಭೇಟಿಯಾಗಿ ಮನವಿ ಮಾಡಿಕೊಂಡಿದ್ದರು. ಇಂದಿನ ದಿನಗಳಲ್ಲಿ ಮೀಸಲಾತಿ ನೀಡಿ ಎಂದು ಹೇಳುತ್ತಿದ್ದೀರಿ. ಆದ್ರೆ 2003 ರಲ್ಲೇ ನಾವು ವಿವಿಧ ನಾಯಕರು ಮೀಸಲಾತಿಗಾಗಿ ನಿಯೋಗ ತೆರಳಿದ್ದೆವು ಎಂದು ಇಂದು ಮೀಸಲಾತಿಗೆ ಹೋರಾಟ ನಡೆಸುತ್ತಿರುವ ಕೆಲ ನಾಯಕರಿಗೆ ಟಾಂಗ್ ನೀಡಿದರು.

ಓದಿ:ಪಕ್ಷ ಸಂಘಟನೆಗೆ ಪಣ: ಭಾನುವಾರವೂ ಚಟುವಟಿಕೆ ಕೇಂದ್ರವಾದ ಡಿಕೆಶಿ ನಿವಾಸ

ಅಂದು ಹರಿಹರ ಪಂಚಮಸಾಲಿ ಪೀಠ ಹೋರಾಟ ನಡೆಸಿದ ಫಲವಾಗಿ‌ 2009 ರಲ್ಲಿ ಜನರಲ್‌ ಕೆಟಗರಿಯಲ್ಲಿದ್ದ ಪಂಚಮಸಾಲಿ ಸಮಾಜವನ್ನು 3ಬಿಗೆ ತಂದ್ರು. ಅಂದೇ 2ಎ ಮೀಸಲಾತಿ ನೀಡ್ಬೇಕಾಗಿತ್ತು. ಅದಕ್ಕೆ ಒಂದು ಉಪ‌ ಸಮಿತಿಯನ್ನು ಮಾಡಿದ್ದರು. ಆದ್ರೆ ಅದು ಆಗಲಿಲ್ಲ.‌ ಇದೀಗ‌ ಹೋರಾಟ ನಡೆಯುತ್ತಿದೆ.‌ ಕೇಂದ್ರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ತಾವಾರ್ ಚಂದ್ ಗೆಹ್ಲೋಟ್ ಹರಿಹರ ಪಂಚಮಸಾಲಿ ಪೀಠದಲ್ಲಿ ಬರುವ ಜನವರಿ 15 ಹಾಗು 16 ರಂದು‌ ಜರುಗುವ ಜಾತ್ರಾ ಮಹೋತ್ಸಕ್ಕೆ ಆಗಮಿಸಲಿದ್ದು, ಅವರ ಬಳಿ ಕೂಡ ಮೀಸಲಾತಿ ಬಗ್ಗೆ ಚರ್ಚಿಸಲಾಗುವುದು. ಜಾತ್ರಾ ಮಹೋತ್ಸವದ ಉದ್ಘಾಟನೆಗೆ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಆಗಮಿಸುತ್ತಿದ್ದಾರೆ ಎಂದರು.

ABOUT THE AUTHOR

...view details