ಕರ್ನಾಟಕ

karnataka

ETV Bharat / state

ಬಡವರಿಗೆ ಆಹಾರ ಪದಾರ್ಥಗಳ ಕಿಟ್ ವಿತರಿಸಿದ ಸಂಸದ ಸಿದ್ದೇಶ್ವರ್ - MP Siddheshwar news

ನಗರದ 19ನೇ ವಾರ್ಡ್​ನ ಶೇಖರಪ್ಪ ನಗರದಲ್ಲಿ ಬಿಜೆಪಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್ ನೇತೃತ್ವದಲ್ಲಿ ಆಹಾರ ಧಾನ್ಯದ ಕಿಟ್​ ವಿತರಣೆ ಮಾಡಲಾಯಿತು.

MP Siddheshwar
ಬಡವರಿಗೆ ಆಹಾರ ಕಿಟ್ ವಿತರಿಸಿದ ಸಂಸದ ಸಿದ್ದೇಶ್ವರ್

By

Published : Apr 25, 2020, 4:14 PM IST

Updated : Apr 25, 2020, 5:28 PM IST

ದಾವಣಗೆರೆ: ಲಾಕ್​ಡೌನ್ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿರುವ ಬಡವರು, ನಿರ್ಗತಿಕರು ಹಾಗೂ ಕಾರ್ಮಿಕರಿಗೆ ಸಂಸದ ಜಿ.ಎಂ.ಸಿದ್ದೇಶ್ವರ್ ಆಹಾರ ಪದಾರ್ಥಗಳ ಕಿಟ್​​ಗಳನ್ನು ವಿತರಣೆ ಮಾಡಿದರು.

ಬಡವರಿಗೆ ಆಹಾರ ಪದಾರ್ಥಗಳ ಕಿಟ್ ವಿತರಿಸಿದ ಸಂಸದ ಸಿದ್ದೇಶ್ವರ್

ನಗರದ 19ನೇ ವಾರ್ಡ್​ನ ಶೇಖರಪ್ಪ ನಗರದಲ್ಲಿ ಬಿಜೆಪಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್ ನೇತೃತ್ವದಲ್ಲಿ ಆಹಾರ ಧಾನ್ಯದ ಕಿಟ್​ಗಳನ್ನು ಜಗಳೂರು ಶಾಸಕ ಎಸ್.ವಿ.ರಾಮಚಂದ್ರ, ದಾವಣಗೆರೆ ಉತ್ತರ ಕ್ಷೇತ್ರದ ಶಾಸಕ ಎಸ್.ಎ.ರವೀಂದ್ರನಾಥ್, ದೂಡಾ ಅಧ್ಯಕ್ಷ ಶಿವಕುಮಾರ್ ವಿತರಿಸಿದರು.

ಕಿಟ್ ಪಡೆಯಲು ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ದೌಡಾಯಿಸಿದ್ದರು. ಈ ವೇಳೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಪೊಲೀಸರು ಮನವಿ ಮಾಡಿದರು‌. ಆದರೂ ಕೇಳಲಿಲ್ಲ. ಬಳಿಕ ಮನೆ ಮನೆಗೆ ತಲುಪಿಸುವುದಾಗಿ ಹೇಳಿದ ಮೇಲೆ ಮಹಿಳೆಯರು ತೆರಳಿದರು.

Last Updated : Apr 25, 2020, 5:28 PM IST

For All Latest Updates

ABOUT THE AUTHOR

...view details