ದಾವಣಗೆರೆ:ಆರ್ಎಸ್ ಎಸ್ ಅಂದ್ರೆ ಅದು ಬಾಂಬ್ ಸ್ಫೋಟ ಮಾಡುವ ಅಥವಾ ತಾಲಿಬಾನ್ ಥರ ಚಟುವಟಿಕೆ ನಡೆಸುವ ಸಂಸ್ಥೆಯಲ್ಲ. ಇದೊಂದು ಸೇವಾ ಸಂಸ್ಥೆಯಾಗಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಬಿಜೆಪಿ ಸಂಸದ ಜಿ.ಎಂ.ಸಿದ್ದೇಶ್ವರ್ ವಾಗ್ದಾಳಿ ನಡೆಸಿದರು.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆರ್ಎಸ್ಎಸ್ನವರು ಎಲ್ಲಿಯೂ ಹೋಗಿ ಬಾಂಬ್ ಸ್ಫೋಟ ಮಾಡಿಲ್ಲ. ಪ್ರಕೃತಿ ವಿಕೋಪ ದಂತಹ ಘಟನೆ ನಡೆದರೆ ಆರ್ಎಸ್ಎಸ್ ಕಾರ್ಯಕರ್ತರು ಹೋಗಿ ಸಂಕಷ್ಟದಲ್ಲಿದ್ದ ಜನರ ಸೇವೆ ಮಾಡುತ್ತಾರೆ. ಇಂತಹ ಸಂಸ್ಥೆ ಬಗ್ಗೆ ತಿಳಿವಳಿಕೆ ಇಲ್ಲದೇ ಮಾತಾಡುವುದು ಸರಿಯಲ್ಲ ಎಂದು ಗುಡುಗಿದರು.
ಕೆಲವರು ಆರ್ಎಸ್ಎಸ್ ಸಿದ್ಧಾಂತವನ್ನು ಮೆಚ್ಚಿಕೊಂಡಿದ್ದಾರೆ. ಅವರು ಕಷ್ಟಪಟ್ಟು ಓದಿ ಐಎಎಸ್, ಐಪಿಎಸ್ ಸೇರಿದಂತೆ ನಾನಾ ಹುದ್ದೆಗೆ ಹೋಗುತ್ತಾರೆ. ಅಂತವರನ್ನು ಆರ್ಎಸ್ಎಸ್ ನವರ ಎನ್ನವುದು ತಪ್ಪು ಎಂದರು.