ದಾವಣಗೆರೆ :ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ. ಸೂರ್ಯ, ಚಂದ್ರ ಇರುವುದು ಎಷ್ಟು ಸತ್ಯವೋ.. ಯಡಿಯೂರಪ್ಪ ಸಿಎಂ ಆಗಿ ಮುಂದುವರಿಯುವುದು ಅಷ್ಟೇ ಸತ್ಯ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ ಪಿ ರೇಣುಕಾಚಾರ್ಯ ಹೇಳಿದ್ದಾರೆ.
ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ.. ಎಂ ಪಿ ರೇಣುಕಾಚಾರ್ಯ - Davangere news
ಲಕ್ಷ್ಮಣ ಸವದಿ, ಶಶಿಕಲಾ ಜೊಲ್ಲೆ ದೆಹಲಿ ಭೇಟಿಗೆ ವಿಶೇಷ ಅರ್ಥ ಬೇಡ. ಅವರು ವೈಯಕ್ತಿಕ ಕೆಲಸಕ್ಕೆ ಹೋಗಿರಬಹುದು ಅಷ್ಟೇ.. ಎಂದ ಅವರು, ನಾನು ಸಚಿವ ಸ್ಥಾನ ನೀಡಿ ಎಂದು ಕೇಳಿಲ್ಲ. ಕೋವಿಡ್ ಸಂದರ್ಭದಲ್ಲಿ ಸಚಿವ ಸ್ಥಾನ ಕೇಳುವುದು ತಪ್ಪು..
ಹೊನ್ನಾಳಿಯ ಹೊಸಮಳಲಿ ಗ್ರಾಮದ ಕಂಟೇನ್ಮೆಂಟ್ ಝೋನ್ಗೆ ಭೇಟಿ ನೀಡಿ 24 ಕುಟುಂಬಗಳಿಗೆ ಫುಡ್ ಕಿಟ್ ನೀಡಿದ ಬಳಿಕ ಮಾತನಾಡಿದ ಅವರು, ಯಡಿಯೂರಪ್ಪ ಏಕಾಂಗಿ ಅಲ್ಲ. ಬಿಜೆಪಿಯ ಸಂಸದರು, ಸಚಿವರು ಹಾಗೂ ಶಾಸಕರು ಜೊತೆಗಿದ್ದೇವೆ. ಪ್ರಧಾನಿ ನರೇಂದ್ರ ಮೋದಿ ಸೇರಿ ಪಕ್ಷದ ವರಿಷ್ಠರು ಆಡಳಿತ ಶ್ಲಾಘಿಸಿದ್ದಾರೆ. ನಾಯಕತ್ವ ಬದಲಾವಣೆ ವಿಚಾರ ಸಂಬಂಧ ಮಾಧ್ಯಮಗಳಲ್ಲಿ ಬರುತ್ತಿರುವುದು ಊಹಾಪೋಹ. ನಾವೆಲ್ಲಾ ಒಟ್ಟಾಗಿದ್ದೇವೆ, ಇದೆಲ್ಲ ಗಾಳಿ ಸುದ್ದಿ ಎಂದರು.
ಲಕ್ಷ್ಮಣ ಸವದಿ, ಶಶಿಕಲಾ ಜೊಲ್ಲೆ ದೆಹಲಿ ಭೇಟಿಗೆ ವಿಶೇಷ ಅರ್ಥ ಬೇಡ. ಅವರು ವೈಯಕ್ತಿಕ ಕೆಲಸಕ್ಕೆ ಹೋಗಿರಬಹುದು ಅಷ್ಟೇ.. ಎಂದ ಅವರು, ನಾನು ಸಚಿವ ಸ್ಥಾನ ನೀಡಿ ಎಂದು ಕೇಳಿಲ್ಲ. ಕೋವಿಡ್ ಸಂದರ್ಭದಲ್ಲಿ ಸಚಿವ ಸ್ಥಾನ ಕೇಳುವುದು ತಪ್ಪು. ಹಾದಿ ಬೀದಿಯಲ್ಲಿ ನಾನು ಸಚಿವ ಸ್ಥಾನ ನೀಡಿ ಎಂದು ಕೇಳುವುದಿಲ್ಲ. ನಿಗಮ ಮಂಡಳಿ ವಾಪಸ್ ವಿಚಾರ ಸಂಬಂಧ ಯಡಿಯೂರಪ್ಪ ಎಲ್ಲರನ್ನೂ ಸಮನಾಗಿ ನೋಡಿ ಹಂಚಿಕೆ ಮಾಡಿದ್ದಾರೆ. ಲೋಪವಾಗಿದ್ದರೆ ಅದನ್ನು ಸರಿ ಪಡಿಸಲಾಗುವುದು. ಒಂದು ವರ್ಷ ಯಡಿಯೂರಪ್ಪ ಸಮರ್ಥವಾಗಿ ಆಡಳಿತ ನಡೆಸಿದ್ದಾರೆ. ಮುಂದೆಯೂ ಅವರೇ ನಮ್ಮ ನಾಯಕರು, ಇದರಲ್ಲಿ ಸಂಶಯ ಬೇಡ ಎಂದರು.