ದಾವಣಗೆರೆ :ಆ ಮನುಷ್ಯ ಮೂಲತಃ ಬಿಜೆಪಿಗನಲ್ಲ. ಕಾಂಗ್ರೆಸ್‌ನಿಂದ ಬಿಜೆಪಿಗೆ ಬಂದವರು. ಉಂಡು ಹೋದ ಕೊಂಡು ಹೋದ ಎಂಬಂತಾಗಿದೆ ಎಂದು ಸಚಿವ ಸಿ ಪಿ ಯೋಗೇಶ್ವರ್ ವಿರುದ್ಧ ಶಾಸಕ ಎಂಪಿ ರೇಣುಕಾಚಾರ್ಯ ಹರಿಹಾಯ್ದರು.
ನಗರದಲ್ಲಿ ಮಾತನಾಡಿದ ಅವರು, ಬಿಜೆಪಿಯಲ್ಲಿದ್ದಾಗ ಅರಣ್ಯ ಇಲಾಖೆ ಸಚಿವನಾಗಿ ಲೂಟಿ ಹೊಡೆದ್ರು. ಮೆಗಾಸಿಟಿ ಅತಿ ದೊಡ್ಡ ಹಗರಣ. ಆರಂಭದಲ್ಲಿ ಕಾಂಗ್ರೆಸ್ ಸೇರಿದ್ರು, ಸೈಕಲ್ ಹತ್ತಿದ್ರು, ನಂತರ ಬಿಜೆಪಿಗೆ ಬಂದ್ರು.
ರಾಮನಗರ ಜಿಲ್ಲೆಯ ಸುತ್ತಮುತ್ತ ಗೆಲ್ಲಿಸಿಕೊಂಡು ಬರುವೆ ಎಂದು ಬಿಜೆಪಿಯಿಂದ 18 ಜನರಿಗೆ ಬಿ ಫಾರಂ ಕೊಡಿಸಿದ್ರು. ಅವರನ್ನು ಗೆಲ್ಲಿಸಿಕೊಂಡು ಬರುವುದಿರಲಿ ತಾವೂ ಸಹ ಚುನಾವಣೆಯಲ್ಲಿ ಗೆಲ್ಲಲಿಲ್ಲ ಎಂದ್ರು.
ರಮೇಶ್ ಜಾರಕಿಹೊಳಿ ಸ್ವಯಂ ಪ್ರೇರಣೆಯಿಂದ ಬಿಜೆಪಿಗೆ ಬಂದಿದ್ದು, ಅದರಲ್ಲಿ ಸಿಪಿವೈ ಅವರದ್ದು ಯಾವುದೇ ಪಾತ್ರವಿಲ್ಲ. ಅವರು ತಮ್ಮ ಹೆಸರಲ್ಲಿ ಮೂರು ಡಿನ್ ನಂಬರ್ ಪಡೆದಿದ್ದಾರೆ.
ಅವನೊಬ್ಬ ದೊಡ್ಡ ಫ್ರಾಡ್, ಅವನು ಐರನ್‌ಲೆಗ್ ಮನುಷ್ಯ, ಚುನಾವಣೆಯಲ್ಲಿ ಸೋತರೂ ಅವರನ್ನು ಎಂಎಲ್ಸಿ ಮಾಡಿ ಸಚಿವರನ್ನಾಗಿ ಮಾಡಿದ್ರೂ, ಸಿಎಂ ಬದಲಾವಣೆಯ ಊಹಾಪೋಹ ಹರಡುತ್ತಿದ್ದಾರೆ. ಸಿಎಂ ಬದಲಾವಣೆಯ ಪುಕಾರು ಹಬ್ಬಿಸುತ್ತಿದ್ದಾರೆ.
ಇವನೊಬ್ಬ 420, ಸಚಿವರನ್ನಾಗಿ ಮಾಡುವುದು ಬೇಡ ಎಂದು ನಾನು, ಶಾಸಕ ರಾಜೀವ್ ಇಬ್ಬರೂ ಮೊದಲೇ ಹೇಳಿದ್ವಿ. ಆದ್ರೂ ಅವನನ್ನು ಸಚಿವರನ್ನಾಗಿ ಮಾಡಿದ್ದೇ ತಪ್ಪಾಯ್ತು. ರಾಮನಗರದ ಉಸ್ತುವಾರಿ, ಬೃಹತ್ ನೀರಾವರಿ ಹಾಗೂ ಇಂಧನ ಖಾತೆ ಮೇಲೆ ಕಣ್ಣಿಟ್ಟಿದ್ದಾನೆ. ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡಲು 65 ಶಾಸಕರು ಸಹಿ ಮಾಡಿಕೊಟ್ಟಿರುವ ಪತ್ರ ನನ್ನ ಬಳಿ ಇದೆ. ಅವನ ವಿರುದ್ಧ ಕ್ರಮಕ್ಕೆ ಸಿಎಂ ಯಡಿಯೂರಪ್ಪ ಅವರಿಗೆ ಆಗ್ರಹಿಸಿದ್ದೇವೆ ಎಂದರು.
ಯಡಿಯೂರಪ್ಪ ಹೋರಾಟದಿಂದ ಮುನ್ನೆಲೆಗೆ ಬಂದ ಮಹಾನ್ ನಾಯಕ :ಬಿಎಸ್‌ವೈ ಬೆನ್ನಿಗೆ ಚಾಕೂ ಹಾಕಲು ಬಂದ್ರೆ ನಾವು ಬಿಡ್ತೀವಾ, ಅವರು ಆಲದ ಮರ ಇದ್ದಂತೆ. ಅದರ ನೆರಳಿನಲ್ಲಿರುವವರು ನಾವು, ಕೆಲಸ ಮಾಡಪ್ಪ ಎಂದ್ರೆ, ಸ್ವಾರ್ಥಕ್ಕಾಗಿ ಹೋಮ-ಹವನ ಮಾಡಿಸ್ತಿದ್ದಾನೆ ಎಂದು ಸಿ ಪಿ ಯೋಗೇಶ್ವರ್‌ಗೆ ರೇಣುಕಾಚಾರ್ಯ ಟಾಂಗ್ ನೀಡಿದರು.