ದಾವಣಗೆರೆ:ಸ್ವಾಮಿ ಮಾಸ್ಕ್ ಕೊಡ್ಬೇಕ್ರಿ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯರಿಗೆ ವ್ಯಕ್ತಿಯೊಬ್ಬರು ಕೇಳಿದ್ದಾರೆ. ಇದಕ್ಕೆ "ಮಾಸ್ಕ್ ಬೇಕಲ್ಲೋ, ಸ್ವಲ್ಪ ತಡ್ಕಳ್ಳಿ ಬರ್ತವೆ, ಈಗ ಬಟ್ಟೆ ಕಟ್ಕೊಳ್ಳಿ' ಎಂದು ರೇಣುಕಾಚಾರ್ಯ ಹೇಳಿರುವ ಸ್ವಾರಸ್ಯಕರ ಘಟನೆ ಹೊನ್ನಾಳಿ ತಾಲೂಕಿನ ಕೆಂಗಟ್ಟೆ ಗ್ರಾಮದಲ್ಲಿ ನಡೆದಿದೆ.
"ಮಾಸ್ಕ್ ಬೇಕಲ್ವಾ, ಸ್ವಲ್ಪ ತಡ್ಕಳ್ಳಿ ಬರ್ತವೆ, ಈಗ ಬಟ್ಟೆ ಕಟ್ಕೊಳ್ಳಿ : ಎಂ.ಪಿ. ರೇಣುಕಾಚಾರ್ಯ - MP Renukacharya raised awareness
ಬೆಳಗ್ಗೆಯಿಂದಲೇ ಹೊನ್ನಾಳಿ ಹಾಗೂ ನ್ಯಾಮತಿ ತಾಲೂಕಿನ ಹಲವು ಗ್ರಾಮಗಳಿಗೆ ರೇಣುಕಾಚಾರ್ಯ ಭೇಟಿ ನೀಡಿ ಕೊರೊನಾ ವೈರಸ್ ಸೋಂಕಿನ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಿದರು. ಗ್ರಾಮ ಗ್ರಾಮಗಳಿಗೆ ತೆರಳಿ ಕೈಜೋಡಿಸಿ ಯಾರೂ ಮನೆಯಿಂದ ಹೊರಬಾರದು ಎಂದು ಮನವಿ ಮಾಡಿಕೊಂಡರು.

ಅದೇ ರೀತಿಯಲ್ಲಿ ಕೆಂಗಟ್ಟೆ ಗ್ರಾಮದಲ್ಲಿಯೂ ಮನೆ ಮನೆಗೆ ತೆರಳಿ ಮನವಿ ಮಾಡುತ್ತಾ ಕಾರಿನತ್ತ ತೆರಳುವಾಗ ವ್ಯಕ್ತಿಯೊಬ್ಬರು ಬಂದರು. ಆಗ ರೇಣುಕಾಚಾರ್ಯ ಮಾಸ್ಕ್ ಸಿಗಲ್ಲ ಅಪ್ಪಾ.. ಕಷ್ಟವಾಗಿಬಿಟ್ಟಿದೆ. ಟವಲ್ ಇಲ್ಲವೇ ಬಟ್ಟೆ ಕಟ್ಕೊಳ್ಳಿ ಎಂದರು. ಈ ವೇಳೆ, ಆ ವ್ಯಕ್ತಿ ನಮಗೆ ಮಾಸ್ಕ್ ಕೊಡಿಸಿ ಎಂದ್ರು. ತಡ್ಕಳ್ರಪ್ಪಾ ಬರುತ್ತೆ. ಈಗ ಬಟ್ಟೆ ಕಟ್ಕೊಳ್ಳಿ ಎಂದು ಹೇಳಿದ್ದಕ್ಕೆ ಜನರೇ ಶಾಕ್ ಆಗಿದ್ದಾರೆ. ಎಲ್ಲರೂ ಮಾಸ್ಕ್ ಧರಿಸಬೇಕು ಎಂದು ಜಿಲ್ಲಾಡಳಿತ ಹೇಳಿದ್ದರೂ, ಗ್ರಾಮೀಣ ಭಾಗದಲ್ಲಿ ಜನರಿಗೆ ಮಾಸ್ಕ್ ಸಿಗುತ್ತಿಲ್ಲ ಎಂಬುದು ಈ ಮೂಲಕ ಸಾಬೀತಾಗಿದೆ.