ದಾವಣಗೆರೆ: ಕೋವಿಡ್ ಕೇರ್ ಸೆಂಟರ್ನಲ್ಲಿ ಕೆಲಸಗಾರರು ಒಳ ಬರುತ್ತಿಲ್ಲ, ಕಸ ಹಾಗೇಯೇ ಉಳಿದುಕೊಂಡಿದೆ ಎಂದು ಆರೋಪಿಸಿದ ಸೋಂಕಿತನಿಗೆ ಶಾಸಕ ರೇಣುಕಾಚಾರ್ಯ ಪ್ರತಿಕ್ರಿಯಿಸಿ ನನಗೆ ಸೋಂಕು ತಗುಲಿದಾಗ ನಾನೇ ಟಾಯ್ಲೆಟ್ ಕ್ಲೀನ್ ಮಾಡ್ಕೊಂಡಿದ್ದೇನೆ, ನಾನೇ ಬಟ್ಟೆ ಒಗೆದುಕೊಂಡಿದ್ದೇನೆ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದರು.
ಸಿಸಿ ಸೆಂಟರ್ನಲ್ಲಿ ವ್ಯವಸ್ಥೆ ಸರಿ ಇಲ್ಲ ಎಂದು ಸೋಂಕಿತ ಗರಂ - ಈ ಬಗ್ಗೆ ರೇಣುಕಾಚಾರ್ಯ ಹೇಳಿದ್ದೇನು? - MP Renukacharya latest news
ನನಗೆ ಸೋಂಕು ತಗುಲಿದಾಗ ನಾನೇ ಟಾಯ್ಲೆಟ್ ಕ್ಲೀನ್ ಮಾಡ್ಕೊಂಡಿದ್ದೇನೆ, ನಾನೇ ಬಟ್ಟೆ ಒಗೆದುಕೊಂಡಿದ್ದೇನೆ ಎಂದು ಶಾಸಕ ಎಂಪಿ ರೇಣುಕಾಚಾರ್ಯ ಆಕ್ರೋಶಗೊಂಡ ಸೋಂಕಿತನೋರ್ವನಿಗೆ ತಿಳಿಸಿ ಸಮಾಧಾನ ಪಡಿಸಿದರು.
ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಮಾದನಬಾವಿ ಗ್ರಾಮದ ಬಳಿ ಇರುವ ಕೋವಿಡ್ ಕೇರ್ ಸೆಂಟರ್ ಬಳಿ ಸಚಿವ ಭೈರತಿ ಬಸವರಾಜ್ಗೆ ಕೋವಿಡ್ ಸೋಂಕಿತ ಯುವಕನೋರ್ವ ಏರು ಧ್ವನಿಯಲ್ಲಿ ತರಾಟೆಗೆ ತೆಗೆದುಕೊಂಡರು. ನಿನ್ನೆ ರಾತ್ರಿ ನಮಗೆ ಸರಿಯಾಗಿ ಊಟ ಕೊಟ್ಟಿಲ್ಲ. ವ್ಯವಸ್ಥೆ ಏನೂ ಸರಿ ಇಲ್ಲ, ವೈದ್ಯರನ್ನು ಕರೆದರೆ ಯಾರೂ ಕೂಡ ಸರಿಯಾಗಿ ಪ್ರತಿಕ್ರಿಯಿಸಲ್ಲ, ಮಾಡುವ ಕೆಲಸವನ್ನು ಅಚ್ಚು ಕಟ್ಟಾಗಿ ಮಾಡಿದ್ರೆ ನಾವೂ ಕೂಡ ಸಪೋರ್ಟ್ ಮಾಡುತ್ತೇವೆ. ಕೆಲಸದವರು ಕಸ ತೆಗೆದುಕೊಂಡು ಹೋಗೋದಿಲ್ಲ ಎಂದ ಯುವಕನನ್ನು ಸಮಾಧಾನ ಪಡಿಸಿದ ಶಾಸಕ ಎಂಪಿ ರೇಣುಕಾಚಾರ್ಯ, ನನಗೆ ಎರಡು ಬಾರಿ ಪಾಸಿಟಿವ್ ಬಂದಿತ್ತು. ನಾನೇ ಪಾತ್ರೆ ತೊಳೆದುಕೊಂಡೆ, ನಾನೇ ಟಾಯ್ಲೆಟ್ ಕ್ಲೀನ್ ಮಾಡಿಕೊಂಡೆ ಎಂದು ತಿಳಿಸಿದರು.
ಇದನ್ನೂ ಓದಿ:ರೆಮ್ಡೆಸಿವಿರ್ ಕಾಳಸಂತೆಯಲ್ಲಿ ಮಾರಾಟವಾಗುವುದು ಹೇಗೆ: ರಾಮಲಿಂಗಾ ರೆಡ್ಡಿ ಪ್ರಶ್ನೆ