ದಾವಣಗೆರೆ: ಆಶಾ ಕಾರ್ಯಕರ್ತೆಯರ ಜೊತೆ ಸಾಮಾಜಿಕ ಅಂತರ ಉಲ್ಲಂಘನೆ ಮಾಡಿ ಚರ್ಚೆಗೆ ಗ್ರಾಸವಾಗಿದ್ದ ಹೊನ್ನಾಳಿ ಶಾಸಕ ಎಂ. ಪಿ. ರೇಣುಕಾಚಾರ್ಯ ಈಗ ಎಚ್ಚೆತ್ತುಕೊಂಡಿದ್ದಾರೆ.
ಕೊನೆಗೂ ಎಚ್ಚೆತ್ತುಕೊಂಡ ರೇಣುಕಾಚಾರ್ಯ: ಆಶಾ ಕಾರ್ಯಕರ್ತೆಯರ ಸಭೆಯಲ್ಲಿ ಸಾಮಾಜಿಕ ಅಂತರ
ಹೊನ್ನಾಳಿ ತಾಲೂಕಿನ ಒಡೆಯೂರು ಹತ್ತೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಶಾ ಕಾರ್ಯಕರ್ತೆಯರ ಸಭೆ ನಡೆಸಿದ ರೇಣುಕಾಚಾರ್ಯ, ಮಾಸ್ಕ್ ವಿತರಣೆ ಮಾಡಿದರು. ಬಳಿಕ ಮಧ್ಯಾಹ್ನದ ಊಟವನ್ನು ಬಡಿಸಿದರು. ಈ ವೇಳೆ ಅವರು ಸಾಮಾಜಿಕ ಅಂತರ ಕಾಪಾಡಿಕೊಂಡರು.
ಹೊನ್ನಾಳಿ ತಾಲೂಕಿನ ಒಡೆಯೂರು ಹತ್ತೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಶಾ ಕಾರ್ಯಕರ್ತೆಯರ ಸಭೆ ನಡೆಸಿದ ರೇಣುಕಾಚಾರ್ಯ, ಮಾಸ್ಕ್ ವಿತರಿಸಿದರು. ಬಳಿಕ ಮಧ್ಯಾಹ್ನದ ಊಟವನ್ನು ಬಡಿಸಿದರು.
ಸಭೆಯಲ್ಲಿ ಮಾತನಾಡಿದ ಅವರು, ಒಂದು ಸಣ್ಣ ಸಮಸ್ಯೆಯನ್ನು ಆಶಾ ಕಾರ್ಯಕರ್ತೆಯರಿಗೆ ಯಾರಾದರೂ ಮಾಡಿದರೆ ರಾಜ್ಯ ಸರ್ಕಾರ ಸಹಿಸುವುದಿಲ್ಲ. ಬೆಳಗಾವಿಯಲ್ಲಿ ನರ್ಸ್ ಸುನಂದಾ ತನ್ನ ಮಗುವನ್ನು ಹದಿನಾಲ್ಕು ದಿನಗಳ ಬಳಿಕ ಎತ್ತಿ ಮುದ್ದಾಡಿದ್ದು ನಿಜಕ್ಕೂ ಹೃದಯ ಸ್ಪರ್ಶಿಯಾದದ್ದು. ಇದು ಕೊರೊನಾ ವಿರುದ್ಧ ಹೋರಾಟ ಮಾಡುತ್ತಿರುವವರ ಬದುಕಿನ ಚಿತ್ರಣಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಮಹಾಮಾರಿ ವಿರುದ್ಧದ ಸೆಣಸಾಡುತ್ತಿರುವ ಆಶಾ ಕಾರ್ಯಕರ್ತೆಯರ ಬಲ ಹೆಚ್ಚಿಸುವ ಕೆಲಸ ಆಗಬೇಕಿದೆ ಎಂದು ಶಾಸಕ ರೇಣುಕಾಚಾರ್ಯ ಹೇಳಿದ್ರು.