ದಾವಣಗೆರೆ: ಬಿಜೆಪಿ ಅಣ್ಣ ತಮ್ಮರಂತೆ ಇರುವ ಕುಟುಂಬ, ಒಂದು ಮಾತು ಬರುತ್ತೇ, ಒಂದು ಮಾತು ಹೋಗುತ್ತೆ ಸುಧಾರಿಸಿಕೊಳ್ಳಬೇಕು ಎಂದು ಸಂಸದ ಜಿ.ಎಂ ಸಿದ್ದೇಶ್ವರ್ ನಾಯಕತ್ವ ಬದಲಾವಣೆ ಕುರಿತು ಪ್ರತಿಕ್ರಿಯಿಸಿದರು.
ನಗರದಲ್ಲಿ ಮಾತನಾಡಿದ ಅವರು, ಇದರ ಬಗ್ಗೆ ಮಾತನಾಡ್ಬೇಡಿ ಎಂದು ಹೇಳಿದ್ದಾರೆ. ಆದ್ರೂ ಕೂಡ ಎರಡು ವರ್ಷ ಬಿಎಸ್ವೈ ಅವರೇ ಸಿಎಂ ಆಗಿರ್ತಾರೆ. ಬಿಜೆಪಿ ಒಂದು ಕುಟುಂಬ ಇದ್ದಂತೆ, ಭಿನ್ನಮತ ಇಲ್ಲ, ಕುಟುಂಬದಲ್ಲಿ ಸಣ್ಣಪುಟ್ಟ ಮನಸ್ತಾಪ ಇದ್ದಿದ್ದೆ, ಎಲ್ಲವನ್ನು ಸರಿ ಮಾಡಿಕೊಳ್ಳುತ್ತೇವೆ ಎಂದರು.