ಕರ್ನಾಟಕ

karnataka

ETV Bharat / state

ಬಂಡಾಯ ಏನೂ ಇಲ್ಲ, ನಾವೇ ಅಧಿಕಾರಕ್ಕೆ ಬರೋದು: ಸಂಸದ ಸಿದ್ದೇಶ್ವರ್ ವಿಶ್ವಾಸ

ಮಹಾನಗರ ಪಾಲಿಕೆಗೆ ಮತದಾನ ನಡೆಯುತ್ತಿದ್ದು, ದಾವಣಗೆರೆಯಲ್ಲಿ ಸಂಸದ ಸಿದ್ದೇಶ್ವರ್ ತಮ್ಮ ಪತ್ನಿ ಗಾಯತ್ರಿ ಅವರೊಂದಿಗೆ ಆಗಮಿಸಿ ವಿದ್ಯಾನಗರದ 39ನೇ ವಾರ್ಡ್​ ಮತಗಟ್ಟೆಯಲ್ಲಿ ಮತ ಚಲಾಯಿಸಿದ್ದಾರೆ.

ಸಂಸದ ಸಿದ್ದೇಶ್ವರ್

By

Published : Nov 12, 2019, 12:51 PM IST

ದಾವಣಗೆರೆ:ವಿದ್ಯಾನಗರದ 39ನೇ ವಾರ್ಡ್​ನ ಮತಗಟ್ಟೆಗೆ ಸಂಸದ ಸಿದ್ದೇಶ್ವರ್ ತಮ್ಮ ಪತ್ನಿ ಗಾಯತ್ರಿ ಜೊತೆ ಆಗಮಿಸಿ ಹಕ್ಕು ಚಲಾಯಿಸಿದರು.

ಮತ ಚಲಾಯಿಸಿದ ಸಂಸದ ಜಿ. ಎಂ. ಸಿದ್ದೇಶ್ವರ್ ದಂಪತಿ

ಬಳಿಕ ಮಾತನಾಡಿದ ಅವರು, ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಸಂಪೂರ್ಣ ಬಹುಮತ ಪಡೆಯಲಿದೆ. 30 ರಿಂದ 32 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯಭೇರಿ ಬಾರಿಸಲಿದ್ದಾರೆ. ಇದರಲ್ಲಿ ಅನುಮಾನ ಬೇಡ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿಯ ಎಲ್ಲಾ ಬೂತ್​ಗಳ ಏಜೆಂಟರಿಗೆ ಬೆಳಗ್ಗೆಯಿಂದಲೇ ಮಾಹಿತಿ ನೀಡಲು ಸೂಚನೆ ನೀಡಿದ್ದೆ. ಬಿಜೆಪಿಗೆ ಬಂಡಾಯದ ಬಿಸಿ ಏನೂ ತಟ್ಟುವುದಿಲ್ಲ. ಇದು ಚುನಾವಣೆಯಲ್ಲಿ ಯಾವ ರೀತಿಯ ಪ್ರಭಾವ ಬೀರದು. ಎರಡನೇ ಬಾರಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಬವಿಷ್ಯ ನುಡಿದರು.

ಇನ್ನು, ಅಯೋಧ್ಯೆ ತೀರ್ಪು ಚುನಾವಣೆ ಮೇಲೆ ಪ್ರಭಾವ ಬೀರುವುದಿಲ್ಲ.‌ ತೀರ್ಪು ಬಂದು ಮೂರು ದಿನವಾದರೂ ಯಾವುದೇ ಗಲಾಟೆ ಆಗಿಲ್ಲ. ಮುಂಬರುವ ವರ್ಷಗಳಲ್ಲಿ ರಾಮ ಮಂದಿರ ಕಟ್ಟುತ್ತೇವೆ. ಮುಸ್ಲಿಂರಿಗೆ ನೀಡಿದ ಜಾಗದಲ್ಲಿ ಮಸೀದಿಯನ್ನು ಕಟ್ಟಲಿ. ಈ ತೀರ್ಪನ್ನು ಇಡೀ ದೇಶದ ಜನರು ಸ್ವಾಗತಿಸಿದ್ದಾರೆ ಎಂದು ಸಿದ್ದೇಶ್ವರ್ ಹೇಳಿದರು.

ABOUT THE AUTHOR

...view details