ಕರ್ನಾಟಕ

karnataka

ETV Bharat / state

ಯಾವುದೇ ಭ್ರಷ್ಟಾಚಾರ ಮಾಡಿಲ್ಲ, ಪ್ರಾಮಾಣಿಕವಾಗಿ ದುಡಿದು ಆಸ್ತಿ ಮಾಡಿದ್ದೇನೆ: ಸಂಸದ ಸಿದ್ದೇಶ್ವರ್​ ತಿರುಗೇಟು

ನಾನು ಭ್ರಷ್ಟಾಚಾರ ಮಾಡಿಲ್ಲ, ದುಡ್ಡು ಹೊಡೆದಿಲ್ಲ, ನಮ್ಮ ಮನೆಯಲ್ಲಿ ಆರು ಜನ ದುಡಿಯುತ್ತೇವೆ. ಅದಕ್ಕೆ ಆಸ್ತಿ ಇದೆ ಎಂದು ಸಂಸದ ಜಿ ಎಂ ಸಿದ್ದೇಶ್ವರ್​ ಹೇಳಿದ್ದಾರೆ.

MP Siddeshwar spoke at the press conference.
ಸುದ್ದಿಗೋಷ್ಠಿಯಲ್ಲಿ ಸಂಸದ ಸಿದ್ದೇಶ್ವರ್ ಮಾತನಾಡಿದರು.

By

Published : Jul 14, 2023, 8:30 PM IST

ಸಚಿವ ಎಸ್​ ಎಸ್​ ಮಲ್ಲಿಕಾರ್ಜುನ , ಸಂಸದ ಜಿ ಎಂ ಸಿದ್ದೇಶ್ವರ್

ದಾವಣಗೆರೆ: ’’ಆನೆ ಹೋಗ್ತಾ ಇರುತ್ತೆ ನಾಯಿ ಬೊಗಳುತ್ತಾ ಇರುತ್ತೆ, ಬೊಗಳುವ ನಾಯಿ ಕಚ್ಚಲ್ಲ, ಕಚ್ಚುವ ನಾಯಿ ಬೊಗಳುವುದಿಲ್ಲ. ಆದರೆ ಆನೆ ತೂಕ ಆನೆಗೆ,ನಾಯಿ ತೂಕ ನಾಯಿಗೆ‘‘ ಎಂದು ಹೇಳುವ ಮೂಲಕ, ಗಣಿ ಮತ್ತು ಭೂವಿಜ್ಞಾನ ಸಚಿವರ ವಿರುದ್ಧ ಸಂಸದ ಜಿ ಎಂ ಸಿದ್ದೇಶ್ವರ್ ಕಿಡಿಕಾರಿದ್ದಾರೆ.

ದಾವಣಗೆರೆಲ್ಲಿ ಸಂಸದ ಜಿ ಎಂ ಸಿದ್ದೇಶ್ವರ್ ಮಾಧ್ಯಮದವರ ಜೊತೆಗೆ ಮಾತನಾಡಿ, ಎಸ್​ ಎಸ್ ಮಲ್ಲಿಕಾರ್ಜುನ್ ಅವರು, ನನ್ನ ಮೇಲೆ ಅಕ್ರಮ ಗಣಿಗಾರಿಕೆ ಮಾಡುವುದರೊಂದಿಗೆ ಕಮೀಷನ್ ಪಡೆದು ಇಷ್ಟು ಆಸ್ತಿ ಮಾಡಿದ್ದಾರೆ ಎಂದು ಆರೋಪಿಸಿದ್ದು, ಯಾವುದೇ ಭ್ರಷ್ಟಾಚಾರ ಮಾಡಿಲ್ಲ. ಪ್ರಾಮಾಣಿಕವಾಗಿ ದುಡಿದು ಆಸ್ತಿ ಮಾಡಿದ್ದೇನೆ ಎಂದು ತಿರುಗೇಟು ನೀಡಿದ್ದಾರೆ.

1994 ರಲ್ಲಿ ಮಲ್ಲಿಕಾರ್ಜುನ್ ತಂದೆ ಶಾಮನೂರು ಶಿವಶಂಕರಪ್ಪಗೆ ‌ಸಾಲ‌ ಕೊಟ್ಟಿದ್ದೇನು, ನಾನು ಶಾಮ‌ನೂರು ಮಾವ ಚನ್ನಾಗಿದ್ವಿ,‌ 1996 ರಲ್ಲೂ ಶಿವಶಂಕರಪ್ಪ ಅವರು ಸಾಲ‌ ಇಸ್ಕೊಂಡಿದ್ರು,‌ 1997 ರಲ್ಲಿ ಆಸ್ತಿ ಸೆಲ್ಫ್ ಡಿಕ್ಲರೆಷ‌ನ್ ಮಾಡಿಕೊಳ್ಳಲು ಸರ್ಕಾರ ಅವಕಾಶ ನೀಡಿತ್ತು. ಆಗ ನಾನು 6 ಕೋಟಿ ಡಿಕ್ಲೆಯರ್ ಮಾಡ್ಕೊಂಡು, 1.80 ಕೋಟಿ ತೆರಿಗೆ ಕಟ್ಟಿದ್ದೆನು. ಆಗ ಶಾಮ‌ನೂರು ಶಿವಶಂಕರಪ್ಪ ಮಾವನೂ ಟ್ಯಾಕ್ಸ್ ಕಟ್ಟೊಕೆ ಅಂತ ಸಾಲ‌ ಇಸ್ಕೊಂಡಿದ್ರು, ಚುನಾವಣೆ ವೇಳೆ ಸಮಯಕ್ಕೆ ಸರಿಯಾಗಿ ಸಾಲ ವಾಪಸ್ ಕೊಡಲಿಲ್ಲ. ನಂತರ ಬಡ್ಡಿ ಸಮೇತ ವಸೂಲಿ ಮಾಡಿರುವೆ, ಕಾಲೇಜು ಮೇಲೆ‌‌ ಕಾಲೇಜು, ಜಮೀನ ಮೇಲೆ ಜಮೀನು ತೆಗೆದುಕೊಳ್ತಾ ಇದ್ದೀನಿ ಅಂತ ಆರೋಪ ಮಾಡಿದ್ದಾರೆ ಎಂದು ಮಲ್ಲಿಕಾರ್ಜುನ್​​ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದರು.

ದುಡಿತಿದ್ದೀನಿ ಆಸ್ತಿ ತಗೋಳ್ತಿನಿ ಸಿದ್ದೇಶ್ವರ್ ಆಕ್ರೋಶ..:ಹೌದು.. ತಗೊಳ್ತಿನಿ, ದುಡಿದಿದ್ದೀನಿ ಆಸ್ತಿ ತೆಗೆದುಕೊಳ್ತಿನಿ, ನಾನು ಭ್ರಷ್ಟಾಚಾರ ಮಾಡಿಲ್ಲ, ದುಡ್ಡು ಹೊಡೆದಿಲ್ಲ, ನಮ್ಮ ಮನೆಯಲ್ಲಿ ಆರು ಜನ ದುಡಿಯುತ್ತೇವೆ ಅದಕ್ಕೆ ಆಸ್ತಿ ಇದೆ, ಆದರೆ ಮಲ್ಲಿಕಾರ್ಜುನ ಒಬ್ಬನೇ ದುಡಿಯೋದು ಅವನಿಗೆ ಅಷ್ಟೊಂದು ಆಸ್ತಿ ಎಲ್ಲಿಂದ ಬಂತು , ಆದಾಯ, ತೆರಿಗೆ ಇಲಾಖೆ ಇವೆ, ಅವರು ನೋಡಿಕೊಳ್ತಾವೆ, ದಾವಣಗೆರೆಯಲ್ಲಿ ಸ್ಮಾರ್ಟ್ ಸಿಟಿ, ಆಶ್ರಯ ಮನೆ ಹಂಚಿಕೆ ತನಿಖೆ ಮಾಡಿಸ್ತಾರಂತೆ. ಮಲ್ಲಿಕಾರ್ಜುನ್ ಹಿಂದೆ ಮಂತ್ರಿ ಆಗಿದ್ದನಲ್ಲ, ಆಗಿನಿಂದಲೂ ತನಿಖೆ ಮಾಡಬೇಕು. ಎಲ್ಲವೂ ತನಿಖೆ ಮಾಡಿದ್ರೂ ನನಗೇನು ಭಯ ಇಲ್ಲ ಎಂದು ವಾಗ್ದಾಳಿ ನಡೆಸಿದರು.

ರೇಣುಕಾಚಾರ್ಯರ ಸ್ಥಾನ ಭರ್ತಿ ಮಾಡುವೆ:ಮಾಜಿ ಶಾಸಕ ರೇಣುಕಾಚಾರ್ಯ ಎಂ ಪಿ ಟಿಕೆಟ್ ಆಕಾಂಕ್ಷಿ ವಿಚಾರಕ್ಕೆ ಸಂಬಂಧಿಸಿದಂತೆ ಸಂಸದ ಜಿ ಎಂ ಸಿದ್ದೇಶ್ವರ್ ಟಾಂಗ್ ಕೊಟ್ಟಿದ್ದಾರೆ. ರೇಣುಕಾಚಾರ್ಯ ಸಂಸದ ಸ್ಥಾನಕ್ಕೆ ಬಂದ್ರೆ, ನಾನು ಅವರ ಹೊನ್ನಾಳಿ ಕ್ಷೇತ್ರಕ್ಕೆ ಹೋಗುವೆ. ಅಲ್ಲಿಯೇ ಚುನಾವಣೆ ನಿಲ್ತಿನಿ ಎಂದು ಸಮುಜಾಯಿಷಿ ನೀಡಿದರು. ನಾನು ಹೊನ್ನಾಳಿಗೆ ಹೋಗಿ ಶಾಸಕ ಸ್ಥಾನಕ್ಕೆ ಸ್ಪರ್ಧಿಸಿ, ಮುಂದಿನ ಬಾರಿ ಮಂತ್ರಿಯಾಗ್ತಿನಿ. ಹೊನ್ನಾಳಿ ಕ್ಷೇತ್ರದಲ್ಲಿ ನಮ್ಮ ಸಮುದಾಯದ ಜನ ಹೆಚ್ಚಿನ ಸಂಖ್ಯೆಯಲ್ಲಿದ್ದು, ಹೊನ್ನಾಳಿಗೆ ಬನ್ನಿ ಎಂದು ಒತ್ತಡ ಹೇರುತ್ತಿದ್ದಾರೆ. ಅದಕ್ಕೆ ರೇಣುಕಾಚಾರ್ಯರನ್ನು ದಾವಣಗೆರೆಗೆ ಕಳ್ಸಿ ತಾವು ಹೊನ್ನಾಳಿಗೆ ಬನ್ನಿ ಎನ್ನುತ್ತಿದ್ದಾರೆ ಎಂದರು.

ಇದನ್ನೂಓದಿ:ರಾಯಚೂರು: ತಾಂತ್ರಿಕ ಸಮಸ್ಯೆಯಿಂದ ಆರ್‌ಟಿಪಿಎಸ್ ಕೇಂದ್ರದ 4 ವಿದ್ಯುತ್ ಉತ್ಪಾದನಾ​ ಘಟಕ ಸ್ಥಗಿತ

ABOUT THE AUTHOR

...view details