ದಾವಣಗೆರೆ: ಮಗಳೊಂದಿಗೆ ತಾಯಿಯೂ ನಾಪತ್ತೆಯಾಗಿರುವ ಪ್ರಕರಣ ತಾಲೂಕಿನ ಆವರಗೊಳ್ಳ ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಪುತ್ರಿ ಜೊತೆ ತಾಯಿಯೂ ನಾಪತ್ತೆ: ಹತ್ತು ತಿಂಗಳ ನಂತರ ಪ್ರಕರಣ ಬೆಳಕಿಗೆ - ದಾವಣಗೆರೆಯಲ್ಲಿ ಪುತ್ರಿ ಜೊತೆ ತಾಯಿ ನಾಪತ್ತೆ
ದಾವಣಗೆರೆಯ ಆವರಗೊಳ್ಳ ಗ್ರಾಮದಲ್ಲಿ ಮಗಳೊಂದಿಗೆ ತಾಯಿಯೂ ನಾಪತ್ತೆಗಿರುವ ಪ್ರಕರಣ ಸುಮಾರು ಹತ್ತು ತಿಂಗಳ ನಂತರ ಬೆಳಕಿಗೆ ಬಂದಿದೆ.

ಶಂಕ್ರಮ್ಮ ಹಾಗೂ ಪುತ್ರಿ ದೀಪ ಕಾಣೆಯಾದವರು
ತಾಯಿ ಶಂಕ್ರಮ್ಮ ಹಾಗೂ ಪುತ್ರಿ ದೀಪ (8) ಕಾಣೆಯಾದವರು. ಕಳೆದ ವರ್ಷ ಮಾರ್ಚ್ 2ರಂದು ರಾತ್ರಿ ಇವರಿಬ್ಬರೂ ಮನೆಯಿಂದ ಹೊರ ಹೋದವರು ಇದುವರೆಗೆ ವಾಪಸ್ ಆಗಿಲ್ಲ ಎಂದು ತಿಳಿದು ಬಂದಿದೆ.
ಇವರ ಸುಳಿವು ಸಿಕ್ಕರೆ ಮಾಹಿತಿ ನೀಡುವಂತೆ ಗ್ರಾಮಾಂತರ ಪೊಲೀಸರು ಮನವಿ ಮಾಡಿದ್ದಾರೆ.