ಕರ್ನಾಟಕ

karnataka

ETV Bharat / state

ಸೊಸೆ ವಿರುದ್ಧ ಗೆದ್ದು ಬೀಗಿದ ಅತ್ತೆ; ಸೋಲನ್ನು ಸಂತಸವಾಗಿಯೇ ಸ್ವೀಕರಿಸಿದ ಮುದ್ದಿನ ಸೊಸೆ - ಚನ್ನಗಿರಿ ತಾಲೂಕಿನ ಕರೆಕಟ್ಟೆ ಗ್ರಾಮ ಪಂಚಾಯತಿಯ ಫಲಿತಾಂಶ

ಇಂದಿನ ಫಲಿತಾಂಶದಲ್ಲಿ ಸೊಸೆ ಲಕ್ಷ್ಮಮ್ಮ 412 ಮತ ಪಡೆದು ಸೊಲು‌ಕಂಡರೆ, ಅತ್ತೆ ಪಾರ್ವತಮ್ಮ 502 ಮತಗಳನ್ನು ಪಡೆದು ಗೆಲುವಿನ ನಗೆ ಬೀರಿದ್ದಾರೆ. ಚನ್ನಗಿರಿ ತಾಲೂಕಿನ ಕರೆಕಟ್ಟೆ ಗ್ರಾಮ ಪಂಚಾಯತ್​​ನಲ್ಲಿ ಈ ಫಲಿತಾಂಶ ಬಂದಿದೆ.

Karnataka Local Body Election Results
Karnataka Local Body Election Results

By

Published : Dec 30, 2021, 2:46 PM IST

ದಾವಣಗೆರೆ: ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಗೆ ಈಗಾಗಲೇ ಫಲಿತಾಂಶ ಹೊರಬಿದ್ದಿದೆ. ಮತದಾರ ಆಯಾ ಅಭ್ಯರ್ಥಿಗಳ ಹಣೆ ಬರಹ ಕೂಡ ಬರೆದಿದ್ದು, ಕೆಲವರು ಗೆಲುವಿನ ನಗೆ ಬೀರಿದರೆ, ಇನ್ನೂ ಕೆಲ ಅಭ್ಯರ್ಥಿಗಳು ಸೋಲುಂಡಿದ್ದಾರೆ‌. ಚನ್ನಗಿರಿ ತಾಲೂಕು ವಿಶೇಷ ಫಲಿತಾಂಶಕ್ಕೆ ಸಾಕ್ಷಿಯಾಗಿದೆ.

ಅತ್ತೆ ಪಾರ್ವತಮ್ಮ

ಚನ್ನಗಿರಿ ತಾಲೂಕಿನ ಕರೆಕಟ್ಟೆ ಗ್ರಾಮ ಪಂಚಾಯತ್​ 2ನೇ ವಾರ್ಡ್​ನ ಉಪಚುನಾವಣೆಯಲ್ಲಿ ಸೊಸೆ ವಿರುದ್ಧ ಅತ್ತೆ ಗೆದ್ದು ಬೀಗಿದ್ದಾರೆ. ಒಂದೇ ಮನೆಯವರಾದ ಅತ್ತೆ ಮತ್ತು ಸೊಸೆಗೆ ಮತದಾರ ಬರೆದ ಭವಿಷ್ಯ ಹಲವರಿಗೆ ಅಚ್ಚರಿಗೆ ತಂದಿದೆ.

ಎರಡನೇ ವಾರ್ಡ್​ನ ಸದಸ್ಯೆಯೊಬ್ಬರು ಅಕಾಲಿಕವಾಗಿ ಮೃತಪಟ್ಟಿದ್ದರಿಂದ ತೆರವಾದ ಸ್ಥಾನಕ್ಕೆ ಉಪಚುನಾವಣೆ ನಡೆದಿತ್ತು. ತೆರವಾದ ಸ್ಥಾನಕ್ಕೆ ಸೊಸೆ ಲಕ್ಷ್ಮಮ್ಮ ಹಾಗೂ ಅತ್ತೆ ಪಾರ್ವತಮ್ಮ ಇಬ್ಬರು ಅಖಾಡಕ್ಕಿಳಿದಿದ್ದರು. ಚುನಾವಣೆ ನಡೆದ ಬಳಿಕ ಇಂದು ಮತ ಎಣಿಕೆ ಕಾರ್ಯ ಭರದಿಂದ ನಡೆದಿದ್ದು, ಇಂದು ಹೊರಬಿದ್ದ ಫಲಿತಾಂಶದಲ್ಲಿ ಅತ್ತೆ ಪಾರ್ವತಮ್ಮ ಸೊಸೆ ಲಕ್ಷ್ಮಮ್ಮಳ ವಿರುದ್ಧ 91 ಮತಗಳಿಂದ ಜಯಗಳಿಸಿದ್ದಾರೆ.

ಸೊಸೆ ಲಕ್ಷ್ಮಮ್ಮ

ಸೊಸೆ ಲಕ್ಷಮ್ಮ 412 ಮತ ಪಡೆದು ಸೊಲು‌ ಕಂಡರೆ, ಇತ್ತ ಅತ್ತೆ ಪಾರ್ವತಮ್ಮ 502 ಮತಗಳನ್ನು ಪಡೆದು ಗೆಲುವಿನ ನಗೆ ಬೀರಿದರು. ಪಾರ್ವತಮ್ಮ ಗೆಲುವಿನ ಬೆನ್ನಲ್ಲೇ ಪಟಾಕಿ ಸಿಡಿಸಿ ಸಿಹಿ ಹಂಚಿ ಅವರ ಕುಟುಂಬದವರು ಸಂತಸ ವ್ಯಕ್ತಪಡಿಸಿದರು. ಅತ್ತೆಯ ಗೆಲುವನ್ನು ಸೊಸೆ ಕೂಡ ಒಪ್ಪಿಕೊಂಡು ಸಂತಸ ವ್ಯಕ್ತಪಡಿಸಿದರು. ಇದಲ್ಲದೆ ನಮ್ಮಿಬ್ಬರಲ್ಲಿ ಯಾರೇ ಗೆದ್ದರು ಊರಿನ ಅಭಿವೃದ್ಧಿಗೆ ಶ್ರಮಿಸುತ್ತೇವೆ ಎಂದು ಸೊಸೆ ಲಕ್ಷ್ಮಮ್ಮ ತಿಳಿಸಿದ್ದಾರೆ.

ಇದನ್ನೂ ಓದಿ: ಕೋಲಾರ: ಮಾಲೂರು ಪುರಸಭೆ ಚುನಾವಣೆಯ ಮತ ಎಣಿಕೆ ವೇಳೆ ಕೈ-ಕಮಲ ಜಟಾಪಟಿ!

ABOUT THE AUTHOR

...view details