ಕರ್ನಾಟಕ

karnataka

ETV Bharat / state

ದಾವಣಗೆರೆಯಲ್ಲಿ 3 ವರ್ಷದ ಕಂದಮ್ಮನೊಂದಿಗೆ ಕಾನ್ಸ್​ಟೇಬಲ್ ಪತ್ನಿ​ ಆತ್ಮಹತ್ಯೆ

ಕೌಟುಂಬಿಕ ಕಲಹ ಶಂಕೆ ಹಿನ್ನೆಲೆ ಪೊಲೀಸ್ ಕಾನ್ಸ್​ಟೇಬಲ್​ ಪತ್ನಿ ತನ್ನ ಮೂರು ವರ್ಷದ ಮಗುವಿನೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದಾವಣಗೆರೆ ಜಿಲ್ಲೆಯಲ್ಲಿ ಈ ಪ್ರಕರಣ ನಡೆದಿದೆ.

3 ವರ್ಷದ ಕಂದಮ್ಮನ ಜೊತೆ ಕಾನ್ಸ್​ಟೇಬಲ್​ ಪತ್ನಿ ನೇಣಿಗೆ ಶರಣು
3 ವರ್ಷದ ಕಂದಮ್ಮನ ಜೊತೆ ಕಾನ್ಸ್​ಟೇಬಲ್​ ಪತ್ನಿ ನೇಣಿಗೆ ಶರಣು

By

Published : Jul 3, 2021, 12:16 PM IST

ದಾವಣಗೆರೆ: ಕೌಟುಂಬಿಕ ಕಲಹ ಶಂಕೆ ಹಿನ್ನೆಲೆ ಮೂರು ವರ್ಷದ ಮಗುವಿನೊಂದಿಗೆ ತಾಯಿ ನೇಣಿಗೆ ಶರಣಾಗಿರುವ ದಾರುಣ ಘಟನೆ ಜಿಲ್ಲೆಯ ಹರಿಹರ ತಾಲೂಕಿನ ಬನ್ನಿಕೋಡು ಗ್ರಾಮದಲ್ಲಿ ನಡೆದಿದೆ. ಹರ್ಷಿತಾ(3), ಚಂದ್ರಮ್ಮ (25) ಆತ್ಮಹತ್ಯೆಗೆ ಶರಣಾದವರು.

ಮೃತರಾದ ಚಂದ್ರಮ್ಮನ ಪತಿ ಮಂಜಪ್ಪ ಡಿ.ಆರ್. ಪೊಲೀಸ್ ಕಾನ್ಸ್‌ಟೇಬಲ್ ಆಗಿ ಸೇವೆ ಸಲ್ಲಿಸುತ್ತಿದ್ದು, ಇಂದು ಬೆಳಗ್ಗೆ ಕೆಲಸ ಮುಗಿಸಿ ಮನೆಗೆ ಬಂದಾಗ ಪತ್ನಿ ಮಗು ಸಹಿತ ನೇಣಿಗೆ ಶರಣಾಗಿರುವುದು ತಿಳಿದುಬಂದಿದೆ. ಪೊಲೀಸ್ ಕಾನ್ಸ್​ಟೇಬಲ್ ಮಂಜಪ್ಪ ಹಾಗೂ ಪತ್ನಿ ಚಂದ್ರಮ್ಮನ ಮಧ್ಯೆ ಕೆಲ ದಿನಗಳ ಹಿಂದೆ ಜಗಳ ನಡೆದಿತ್ತು ಎನ್ನಲಾಗ್ತಿದೆ. ಇದೇ ಆಕೆಯ ಆತ್ಮಹತ್ಯೆಗೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ. ಸ್ಥಳಕ್ಕೆ ಹರಿಹರ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಹೆಣ್ಣು ಮಗು ಹರ್ಷಿತಾ
ತಾಯಿ ಚಂದ್ರಮ್ಮ

ಓದಿ:ದಾವಣಗೆರೆ SP ಹೆಸರಲ್ಲಿ ನಕಲಿ ಫೇಸ್​ಬುಕ್​ ಖಾತೆ ಸೃಷ್ಟಿಸಿದ ಖದೀಮರು!

ABOUT THE AUTHOR

...view details