ದಾವಣಗೆರೆ:ಮಗಳು ಹಾಗು ಮೊಮ್ಮಗಳ ವಿವಾಹೇತರ ಸಂಬಂಧಕ್ಕೆ ಬಡ ಜೀವವೊಂದು ಬಲಿಯಾಗಿರುವ ಘಟನೆ ಹೊನ್ನಾಳಿ ತಾಲೂಕಿನ ಕುಳಗಟ್ಟೆಯಲ್ಲಿ ನಡೆದಿದೆ.
ಮಗಳು ಹಾಗು ಮೊಮ್ಮಗಳ ವಿವಾಹೇತರ ಸಂಬಂಧಕ್ಕೆ ಬಲಿಯಾದ ಬಡಜೀವ ವಿವಾಹೇತರ ಸಂಬಂಧಕ್ಕೆ ಜೋತುಬಿದ್ದಿದ್ದಾ ತಾಯಿ ಮತ್ತು ಮಗಳಿಗೆ ಅಜ್ಜ ಮಂಜಪ್ಪ ಎಲ್ಲದಕ್ಕೂ ಅಡ್ಡಿಯಾಗಿದ್ದ. ಈ ಅಜ್ಜ ಮಂಜಪ್ಪನನ್ನು ಮುಗಿಸಿದ್ರೆ ನಮ್ಮ ಆಟ ಸಲೀಸು ಎಂದು ತಾಯಿ ಉಷಾ ಮತ್ತು ಮಗಳು ಸಿಂಧು ಮತ್ತು ಆರೋಪಿ ಶ್ರೀನಿವಾಸ್ ಭಾವಿಸಿ ಕೊಲೆ ಮಾಡಿದ್ದರು.
ಗ್ರಾಮದ ನಿವಾಸಿ ಮಂಜಪ್ಪ ತನ್ನ ಮಗಳು ಉಷಾ ಮತ್ತು ಮೊಮ್ಮಗಳು ಸಿಂಧು ಜೊತೆ ಸುಂದರವಾಗಿಯೇ ಜೀವನ ಮಾಡುತ್ತಿದ್ದರು. ಅವರಿಬ್ಬರಿಗೆ ಮಂಜಪ್ಪ ಯಾವುದೇ ಕೊರತೆ ಮಾಡಿರಲಿಲ್ಲ. ಆದ್ರೆ ಮಂಜಪ್ಪನ ಮಗಳು ಉಷಾ ಹಾಗೂ ಮೊಮ್ಮಗಳು ಸಿಂಧು ಇಬ್ಬರು ಕೂಡ ಒಂದೇ ವ್ಯಕ್ತಿಯ ಜೊತೆ ವಿವಾಹೇತರ ಸಂಬಂಧ ಸಾಗಿಸುತ್ತಿದ್ದರು.
ಮಗಳು ಹಾಗು ಮೊಮ್ಮಗಳ ವಿವಾಹೇತರ ಸಂಬಂಧಕ್ಕೆ ಬಲಿಯಾದ ಬಡಜೀವ ಮಗಳು ಉಷಾ ಹಾಗೂ ಉಷಾಳ ಮಗಳು ಸಿಂಧು ಅದೇ ಗ್ರಾಮದ ನಿವಾಸಿ ಶ್ರೀನಿವಾಸ ಎಂಬ ವ್ಯಕ್ತಿಯ ಜೊತೆ ಸೇರಿಕೊಂಡು ಮಂಜಪ್ಪನನ್ನು ಅಮಾನುಷವಾಗಿ ಕೊಲೆ ಮಾಡಿ ಅಡಕೆ ತೋಟದ ನಾಲೆಯಲ್ಲಿ ಬೀಸಾಕಿ ಕೈ ತೊಳೆದುಕೊಂಡಿದ್ದರು.
ಮದುವೆಯಾಗಿ ಒಂದು ಮಗುವಿರುವ ಶ್ರೀನಿವಾಸ ಜೊತೆ ಉಷಾ ಹಾಗೂ ಸಿಂಧು ಇಬ್ಬರು ವಿವಾಹೇತರ ಸಂಬಂಧ ಹೊಂದಿದ್ದರು. ಈ ಸುದ್ದಿ ತಿಳಿದ ಮಂಜಪ್ಪ ಮಗಳಿಗೆ ಮತ್ತು ಮೊಮ್ಮಗಳಿಗೆ ಬುದ್ಧಿ ಮಾತು ಹೇಳ್ತಿದ್ದ. ಈ ವಿಷಯವಾಗಿ ಮಂಜಪ್ಪನ ಮೇಲೆ ತಾಯಿ ಮತ್ತು ಮಗಳು ಕೊಪಗೊಂಡಿದ್ದರು. ಹೆತ್ತ ತಂದೆಯನ್ನೇ ಮುಗಿಸಲು ಉಷಾ ಸ್ಕೇಚ್ ಹಾಕಿದ್ದಳು.
ಪ್ಲಾನ್ ಪ್ರಕಾರ ಮಂಜಪ್ಪನನ್ನು ತೋಟಕ್ಕೆ ಕರೆದುಕೊಂಡು ಹೋಗಿ ಕುಡಿಸಿದ್ದಾರೆ. ಬಳಿಕ ಮತ್ತಿನಲ್ಲಿದ್ದ ಮಂಜಪ್ಪನ ತಲೆ ಮೇಲೆ ಆರೋಪಿ ಶ್ರೀನಿವಾಸ ಕಲ್ಲಿನಿಂದ ಹೊಡೆದು ಪಕ್ಕದ ಚಾನಲ್ ನೀರಿಗೆ ಹಾಕಿದ್ದ. ಬಳಿಕ ತನಗೆ ಏನೂ ಗೊತ್ತೇ ಇಲ್ಲದಂತೆ ಗ್ರಾಮದಲ್ಲಿ ಅಡ್ಡಾಡಿಕೊಂಡಿದ್ದನು.
ಇನ್ನು ಮಂಜಪ್ಪ ಎರಡ್ಮೂರು ವಾರಗಳಿಂದ ಅಂದ್ರೆ ಮಾರ್ಚ್ 3ರಿಂದ ಕಾಣ್ತಿಲ್ಲ ಎಂದು ಮೊದಲನೇ ಹೆಂಡ್ತಿಯ ಮಗಳು ಮತ್ತು ಮೊಮ್ಮಗಳು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನನ್ವಯ ತನಿಖೆ ಕೈಗೊಂಡ ಪೊಲೀಸರು ಎರಡನೇ ಹೆಂಡ್ತಿಯ ಮಗಳಾದ ಉಷಾ ಮತ್ತು ಆಕೆಯ ಮಗಳು ಸಿಂಧುವನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಪೊಲೀಸರ ವಿಚಾರಣೆ ವೇಳೆ ಮಂಜಪ್ಪನ ಕೊಲೆಗೆ ಉಷಾ ಹಾಗೂ ಸಿಂಧು ಇಬ್ಬರು ಮಾಸ್ಟರ್ ಪ್ಲಾನ್ ಮಾಡಿ ಶ್ರೀನಿವಾಸನಿಂದ ಕೊಲೆ ಮಾಡಿಸಿರುವುದರ ಬಗ್ಗೆ ತಿಳಿದಿದೆ.
ಈ ಪ್ರಕರಣವನ್ನು ಹೊನ್ನಾಳಿ ಸರ್ಕಲ್ ಇನ್ಸ್ಪೆಕ್ಟರ್ ದೇವರಾಜ್ ನೇತೃತ್ವದ ತಂಡ ಬೇಧಿಸಿದ್ದಾರೆ. ಮೂವರನ್ನು ವಶಕ್ಕೆ ಪಡೆದ ಪೊಲೀಸರು ಸ್ಥಳ ಮಹಜರ್ ನಡೆಸಿದ್ದು, ಗ್ರಾಮದಲ್ಲಿ ಇವರ ಕೃತ್ಯ ನೋಡಿ ಆರೋಪಿಗಳಿಗೆ ಸರಿಯಾದ ಶಿಕ್ಷೆ ಆಗಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.