ದಾವಣಗೆರೆ: ರೋಗಿಗಳು ಸೇರದಂತೆ ಹೆಚ್ಚಿನ ಗರ್ಭಿಣಿಯರು ಸರ್ಕಾರಿ ಆಸ್ಪತ್ರೆಯತ್ತ ಮುಖ ಮಾಡುತ್ತಿದ್ದಾರೆ. ಇದಕ್ಕೆ ಬೆಣ್ಣೆನಗರಿ ದಾವಣಗೆರೆ ಕೂಡ ಸಾಕ್ಷಿಯಾಗಿದೆ. ದಾವಣಗೆರೆಯ ಸರ್ಕಾರಿ ಆಸ್ಪತ್ರೆಯಲ್ಲಿ ದಿನಕ್ಕೆ 30ಕ್ಕೂ ಹೆಚ್ಚು ಹೆರಿಗೆಗಳು ನಡೆಯುತ್ತಿದೆ.
ಸರ್ಕಾರಿ ಆಸ್ಪತ್ರೆಗಳತ್ತ ಮುಖ ಮಾಡಿದ ಗರ್ಭಿಣಿಯರು - ಪ್ರತಿಕ್ರಿಯೆ ಚಿಗಟೇರಿ ಜಿಲ್ಲಾಸ್ಪತ್ರೆ ಸೇರಿದಂತೆ ಮಹಿಳೆ ಮತ್ತು ಮಕ್ಕಳ ಆಸ್ಪತ್ರೆ ಸೇರಿ ಒಟ್ಟು ಎರಡು ಸರ್ಕಾರಿ ಆಸ್ಪತ್ರೆಗಳು ಕಾರ್ಯ ನಿರ್ವಹಿಸುತ್ತಿದೆ. ಹೆಚ್ಚಿನ ಗರ್ಭಿಣಿಯರು, ಬಾಣಂತಿಯರು ಸರ್ಕಾರಿ ಆಸ್ಪತ್ರೆಗಳತ್ತ ಮುಖ ಮಾಡಿದ್ದಾರೆ.
ದಿನೇ ದಿನೆ ಗರ್ಭಿಣಿಯರ ಆಗಮನ ಹೆಚ್ಚುತ್ತಿದ್ದು, ಸಿಬ್ಬಂದಿಗೆ ಕೆಲಸ ಕೂಡ ಹೆಚ್ಚಾಗಿದೆ. ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ತಿಂಗಳಿಗೆ 800 ರಿಂದ 900 ಹೆರಿಗೆಗಳಾಗುತ್ತಿವೆ. ನಿತ್ಯ 30ಕ್ಕೂ ಹೆಚ್ಚು ಹೆರಿಗಳು ಆಗುತ್ತಿವೆ. ಮಹಿಳೆ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ದಿನವೂ 15 ಹೆರಿಗೆಗಳಾಗುತ್ತಿದ್ದು, ಬಾಣಂತಿಯರಿಗೆ ಹಾಗು ಗರ್ಭಿಣಿಯರಿಗೆ ಯಾವುದೇ ಸಮಸ್ಯೆಗಳಾಗದಂತೆ ವಿಶೇಷವಾಗಿ ನಿಗ ವಹಿಸಲಾಗುತ್ತಿದೆ.
ಇದನ್ನೂ ಓದಿ:ಗಣಿ ನಾಡಿನಲ್ಲಿ ಬಿಸಿಲಿನ ತಾಪ ತಗ್ಗಿದರೂ ಮುಂದುವರೆಯಲಿದೆ ಒಣಹವೆ: ಮುಂಜಾಗ್ರತೆ ಅನಿವಾರ್ಯ
ಇನ್ನು ಪ್ರತಿ ತಿಂಗಳು 09 ನೇ ದಿನಾಂಕದಂದು ಪ್ರಧಾನ ಮಂತ್ರಿ ಮಾತೃತ್ವ ಸುರಕ್ಷಾ ಅಭಿಯಾನದಡಿ ಎಲ್ಲ ಗರ್ಭಿಣಿಯರಿಗೆ ಚೆಕಪ್ ಮಾಡುತ್ತಿರುವುದು ಇಲ್ಲಿನ ವಿಶೇಷ. ಆರೋಗ್ಯದ ಬಗ್ಗೆ, ಔಷಧ ಉಪಾಚಾರ ನೀಡುವುದರ ಬಗ್ಗೆ, ಆಹಾರ ಸೇರಿದಂತೆ ಯಾವುದೇ ಸಮಸ್ಯೆ ಇದ್ದರೆ ತಕ್ಷಣ ಬಗೆಹರಿಸುವಲ್ಲಿ ಇಲ್ಲಿನ ವೈದ್ಯರು ಯಶಸ್ವಿಯಾಗಿದ್ದಾರೆ.