ಕರ್ನಾಟಕ

karnataka

ETV Bharat / state

ಮದುವೆ ಮನೆ ಪಾಯಸ ಸೇವಿಸಿ 30ಕ್ಕೂ ಹೆಚ್ಚು‌ ಜನ ಅಸ್ವಸ್ಥ: ಆಸ್ಪತ್ರೆಗೆ ದಾಖಲು

ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಗೌಡಗೊಂಡನ ಗ್ರಾಮದಲ್ಲಿ ಶಾವಿಗೆ ಪಾಯಸ ಸೇವಿಸಿ 30ಕ್ಕೂ ಹೆಚ್ಚು ಜನ ಅಸ್ವಸ್ಥರಾಗಿದ್ದಾರೆ.

ದಾವಣಗೆರೆ
ದಾವಣಗೆರೆ

By

Published : Jun 9, 2022, 8:00 AM IST

ದಾವಣಗೆರೆ: ಮದುವೆ ಮನೆಯಲ್ಲಿ ಉಣಬಡಿಸುವ ಶಾವಿಗೆ ಪಾಯಸ ಸೇವಿಸಿ 30ಕ್ಕೂ ಹೆಚ್ಚು ಜನ ಅಸ್ವಸ್ಥರಾಗಿರುವ ಘಟನೆ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಗೌಡಗೊಂಡನ ಗ್ರಾಮದಲ್ಲಿ ನಡೆದಿದೆ. ‌

ಮದುವೆಗೆ ಆಗಮಿಸಿದ್ದ ಒಂಬತ್ತು ಮಕ್ಕಳು ಸೇರಿದಂತೆ ಒಟ್ಟು 30 ಜನ ಅಸ್ವಸ್ಥರಾಗಿದ್ದು, ಅವರನ್ನು ಸಾರ್ವಜನಿಕ ಆಸ್ಪತ್ರೆ ಗೆ ದಾಖಲು ಮಾಡಲಾಗಿದೆ. ಚಿಕಿತ್ಸೆ ನೀಡಿದ ಬೆನ್ನಲ್ಲೇ ಸ್ವಲ್ಪಮಟ್ಟಿಗೆ ಚೇತರಿಸಿಕೊಂಡಿದ್ದಾರೆಂದು ತಿಳಿದು ಬಂದಿದೆ. ಮದುವೆ ಮನೆಯಲ್ಲಿ ಊಟ ಮಾಡಿದ ಕೆಲವರು‌ ಭೇದಿ, ವಾಂತಿ,‌ ತಲೆ‌ಸುತ್ತು ಬಂದ ಪರಿಣಾಮ ತಕ್ಷಣವೇ ಎಲ್ಲರನ್ನು ಆಸ್ಪತ್ರೆಗೆ ಸಾಗಿಸಲಾಯಿತು.

ಇನ್ನು ತೀವ್ರವಾಗಿ ಅಸ್ವಸ್ಥರಾದ 23 ಜನರನ್ನ ಜಗಳೂರಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಅದರಲ್ಲಿ ಏಳು ಜನರನ್ನು ಮನೆಗೆ ಕಳುಹಿಸಲಾಗಿದೆ. ‌ಈ ಕುರಿತು ಜಗಳೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಕಲೆ ಹಾಕುತ್ತಿದ್ದಾರೆ.‌ ಘಟನೆಗೆ ಶಾವಿಗೆ ಪಾಯಸವೇ ಕಾರಣ ಎಂದು ಜಗಳೂರು ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಬಿ.ವಿ.ನೀರಜ್ ಸ್ಪಷ್ಟನೆ ನೀಡಿದ್ದಾರೆ.

ಇದನ್ನು ಓದಿ:ಇಂದಿನಿಂದ ಪಿಯು ಕಾಲೇಜು​ ಆರಂಭ: ತರಗತಿಗಳಲ್ಲಿ ಸಮವಸ್ತ್ರ ಕಡ್ಡಾಯ, ಹಿಜಾಬ್​ಗೆ ನಿರ್ಬಂಧ

ABOUT THE AUTHOR

...view details