ದಾವಣಗೆರೆ :ಜಿಲ್ಲೆಯಲ್ಲಿ ಕೊರೊನಾ ಸೋಂಕಿತ ಪ್ರಕರಣ ಹೆಚ್ಚಾಗುತ್ತಿದ್ದರೂ ಗರ್ಭಿಣಿಯರಿಗೆ ಮಾತ್ರ ಸೋಂಕು ತಗುಲಿರುವುದು ಕಡಿಮೆ. ಸೋಂಕಿತ ಗರ್ಭಿಣಿಯರಿಗೆ ಎಲ್ಲಾ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡು ಹೆರಿಗೆ ಮಾಡಿಸಲಾಗಿದೆ.
ಏಪ್ರಿಲ್‌ನಿಂದ ಜುಲೈವರೆಗೆ ಸರ್ಕಾರಿ ಆಸ್ಪತ್ರೆಗಳಲ್ಲಿ 5,009 ಹೆರಿಗೆ ಆಗಿವೆ. ಖಾಸಗಿ ಆಸ್ಪತ್ರೆ ಹಾಗೂ ನರ್ಸಿಂಗ್ ಹೋಂಗಳಲ್ಲಿ ಕೇವಲ 1,696 ಹೆರಿಗೆ ಆಗಿವೆ. ಹೆರಿಗೆಗೆ ಬಂದ ಗರ್ಭಿಣಿಯರಿಗೆ ಜಿಲ್ಲಾಸ್ಪತ್ರೆಯಲ್ಲಿ ಅಗತ್ಯಬಿದ್ದರೆ ಶಸ್ತ್ರಚಿಕಿತ್ಸೆ ನಡೆಸಿ ಹೆರಿಗೆ ಮಾಡಿಸಲಾಗ್ತಿದೆ. ಈವರೆಗೆ ಯಾವ ಕೊರೊನಾ ಸೋಂಕಿತ ಗರ್ಭಿಣಿಗೆ ಸರ್ಕಾರಿ ಆಸ್ಪತ್ರೆ ಆಗಲಿ, ಖಾಸಗಿ ಆಸ್ಪತ್ರೆ ಆಗಲಿ ಚಿಕಿತ್ಸೆ ನಿರಾಕರಿಸಿಲ್ಲ ಎಂದು ತಿಳಿಸಿದರು.
ಜನ ಆರ್ಥಿಕವಾಗಿ ತೊಂದರೆಯಲ್ಲಿದ್ದು, ಸಾಧ್ಯವಾದಷ್ಟು ಕಡಿಮೆ ಶುಲ್ಕ ಪಡೆಯುವಂತೆ ಜಿಲ್ಲಾಧಿಕಾರಿಗಳು ಎಲ್ಲಾ ಆಸ್ಪತ್ರೆಗಳ ಮುಖ್ಯಸ್ಥರಿಗೆ ಮನವಿ ಮಾಡಿದ್ದಾರೆ. ಇದಕ್ಕೆ ಎಲ್ಲ ಖಾಸಗಿ ಆಸ್ಪತ್ರೆಗಳೂ ಸ್ಪಂದಿಸಿವೆ. ಬೆಂಗಳೂರು ಸೇರಿ ಬೇರೆ ಜಿಲ್ಲೆಗೆ ಹೋಲಿಸಿದ್ರೆ ಇಲ್ಲಿ ಹೆರಿಗೆಗೆ ಪಡೆಯುತ್ತಿರುವ ಹಣ ಕಡಿಮೆ ಅಂತಾ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಹೆಚ್ ಎಸ್ ರಾಘವೇಂದ್ರ ಸ್ವಾಮಿ ಮಾಹಿತಿ ಹೇಳಿದ್ದಾರೆ.