ಕರ್ನಾಟಕ

karnataka

ETV Bharat / state

ಸಚಿವ ಸ್ಥಾನ ನೀಡಿಲ್ಲ ಅಂತಾ ರಾಜೀನಾಮೆ ಕೊಟ್ಟು ಹೆದರಿಸಿದ್ದಾರೆ: ಶಾಮನೂರು - KN_DVG_02_SHAMANURU_REACT_KA10016

ಸಮ್ಮಿಶ್ರ ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ. ಬಿ.ಎಸ್. ಯಡಿಯೂರಪ್ಪಗೆ ಅವಸರವಾಗಿ ಸಿಎಂ ಆಗಬೇಕು ಎಂಬ ಆಸೆ ಇದೆ ಎಂದು ಬಿಎಸ್​ವೈ ವಿರುದ್ಧ ಶಾಮನೂರು ಶಿವಶಂಕರಪ್ಪ ಹರಿಹಾಯ್ದರು.

ಶಾಮನೂರು

By

Published : Jul 6, 2019, 7:04 PM IST

ದಾವಣಗೆರೆ: ಶಾಸಕರು ಮಂತ್ರಿ ಆಗಬೇಕು ಎಂದು ರಾಜೀನಾಮೆ ಮೂಲಕ ಹೆದುರಿಸುವ ಪ್ರಯತ್ನ ನಡೆಸುತ್ತಿದ್ದಾರೆ. ಯಾರು ಎಲ್ಲಿಗೂ ಹೋಗಲ್ಲ, ಎಲ್ಲಾ ವಾಪಾಸ್ ಬರ್ತಾರೆ ಎಂದು ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಶಾಮನೂರು ಶಿವಶಂಕರಪ್ಪ, ಕಾಂಗ್ರೆಸ್​ ಹಿರಿಯ ಶಾಸಕ

ಸರ್ಕಾರಕ್ಕೆ ಯಾವುದೇ ಧಕ್ಕೆ ಇಲ್ಲ, ರಾಜೀನಾಮೆ ಕೊಟ್ಟಿರುವವರು ಪುನಃ ವಾಪಸ್ ಪಡೆಯುತ್ತಾರೆ. ಸಚಿವ ಸ್ಥಾನ ನೀಡಿಲ್ಲ ಎಂದು ರಾಜೀನಾಮೆ ಕೊಟ್ಟು ಹೆದರಿಸಿದ್ದಾರೆ ಎಂದರು.

ಸಮ್ಮಿಶ್ರ ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ. ಬಿ.ಎಸ್. ಯಡಿಯೂರಪ್ಪಗೆ ಅವಸರವಾಗಿ ಸಿಎಂ ಆಗಬೇಕು ಎಂಬ ಆಸೆ ಇದೆ ಎಂದು ಬಿಎಸ್​ವೈ ವಿರುದ್ಧ ಹರಿಹಾಯ್ದರು.

For All Latest Updates

ABOUT THE AUTHOR

...view details