ದಾವಣಗೆರೆ: ಮುಖ್ಯಮಂತ್ರಿಯವರ ಕುರ್ಚಿ ಅಲುಗಾಡುತ್ತಿದ್ದಂತೆ ವೀರಶೈವ ಲಿಂಗಾಯತರ ನೆನಪಾಯ್ತಾ? ಸಿಎಂ ಸ್ಥಾನದಿಂದ ಕೆಳಗಿಳಿಸುತ್ತಾರೆಂದು ಮನಗಂಡು ಲಿಂಗಾಯತರ ಅಭಿವೃದ್ಧಿ ನಿಗಮ ಮಾಡಿದರು ಎಂದು ಸಿಎಂ ಬಿ.ಎಸ್. ಯಡಿಯೂರಪ್ಪ ವಿರುದ್ಧ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ನಡೆಸಿದರು.
ದಾವಣಗೆರೆ ಜಿಲ್ಲೆಯ ಹರಿಹರ ಪಟ್ಟಣದಲ್ಲಿ ಪಂಚಮಸಾಲಿ 2A ಮೀಸಲಾತಿಗಾಗಿ ಪಂಚಲಕ್ಷ ಪಾದಯಾತ್ರೆ ಸಮಾವೇಶದಲ್ಲಿ ಮಾತನಾಡಿದ ಅವರು, ಆಯಾ ಮಠಗಳಿಗೆ ಕೋಟಿಗಟ್ಟಲೆ ಹಣ ನೀಡಿದರು. ಆದರೆ 10 ಕೋಟಿಗೆ ಮಠವನ್ನೇ ಮಾರಾಟ ಮಾಡಿದರು ಎಂದು ಹರಿಹರ ಪಂಚಮಸಾಲಿ ಮಠಕ್ಕೆ ನೀಡಿದ ಹಣದ ಕುರಿತಂತೆ ವ್ಯಂಗ್ಯವಾಡಿದರು.
ಬಿಎಸ್ವೈ ಕುರ್ಚಿ ಅಲುಗಾಡುತ್ತಿದೆ : ಯತ್ನಾಳ್ ನಮ್ಮ ಸಮಾಜವನ್ನು ಹಿಂದುಳಿದ ವರ್ಗಕ್ಕೆ ಸೇರಿಸಿ, ನಾನೇ ನಿಮಗೆ ಕೋಟಿಗಟ್ಟಲೆ ಹಣ ಕೊಡುತ್ತೇನೆ. ಮೀಸಲಾತಿ ಕೊಡುತ್ತೇನೆ ಎಂದು ಸುಮ್ಮನೆ ಯಾಕೆ ನಾಟಕ ಮಾಡುತ್ತೀರಿ? ನಾನು ಮಂತ್ರಿ ಆಗಬೇಕೆಂದು ಯಾರ ಕೈ-ಕಾಲು ಹಿಡಿಯುವವನಲ್ಲ, ನಮಗೆ ಸಿಎಂ ಕುರ್ಚಿ ಬರುವುದಿದೆ ಎಂದು ಹೇಳಿದರು.
ಇದನ್ನೂ ಓದಿ:ದೆಹಲಿ ಪ್ರತಿಭಟನೆ: ಸಂಸದ ಶಶಿ ತರೂರ್, 6 ಪತ್ರಕರ್ತರ ವಿರುದ್ಧ ದೇಶದ್ರೋಹ ಪ್ರಕರಣ
ಮಂತ್ರಿಗಳನ್ನು ಮಾಡುವ ಕುರ್ಚಿ ನಮಗೆ ನಮಗೆ ಬರುವುದಿದೆ. ಪಾದಯಾತ್ರೆ ಬೆಂಗಳೂರು ಸೇರುವ ಮುನ್ನ 2ಎ ಮೀಸಲಾತಿ ಘೋಷಿಸದಿದ್ದರೆ ನಿಮ್ಮ ಕುರ್ಚಿ ಖಾಲಿಯಾಗುತ್ತದೆ. ಮೊನ್ನೆ ನಮ್ಮಸಮಾಜದ ಕೆಲವರಿಗೆ ಸಣ್ಣಪುಟ್ಟ ಖಾತೆಗಳನ್ನು ನೀಡಿ, ಇಂಧನ, ಹಣಕಾಸು, ಬೆಂಗಳೂರು ನಗರಾಭಿವೃದ್ಧಿ ಖಾತೆಗಳನ್ನು ಸಿಎಂ ತಮ್ಮಲ್ಲೇ ಇಟ್ಟುಕೊಂಡಿದ್ದಾರೆ. ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಬದಲು, ಅವರನ್ನು ಕೆಳಗಿಳಿಸಿ ಮುಖ್ಯಮಂತ್ರಿ ಆಗತ್ತೇನೆ ಎಂದು ಸಿಎಂ ಟಾಂಗ್ ನೀಡಿದರು.
ನಾನು ಸಿಎಂ ವಿರುದ್ಧ ಮಾತನಾಡುತ್ತಿರುವುದರಿಂದ ನನಗೆ ನೀಡಿದ್ದ ಪೊಲೀಸ್ ಭದ್ರತೆ ವಾಪಸ್ ಪಡೆಯಲಾಗಿದೆ. ಯತ್ನಾಳ್ ವಿರುದ್ಧ ಎಷ್ಟು ಪ್ರಕರಣಗಳಿವೆ, ವಿಜಯಪುರದಲ್ಲಿರುವ ಅಧಿಕಾರಿಗಳನ್ನು ಬದಲಾವಣೆ ಮಾಡುತ್ತೇನೆ ಎಂದು ಸಿಎಂ ಹೇಳಿದರು. ಆದರೆ ನಾನು ಯಾರ ಹಣವನ್ನೂ ತಿಂದಿಲ್ಲ, ಯಾರೇ ಅಧಿಕಾರಿಗಳು ಬಂದರೂ ನನ್ನ ಮಾತನ್ನೇ ಕೇಳಬೇಕು. ಯಾಕೆಂದರೆ ನಾನು ಅಲ್ಲಿ ಶಾಸಕನಾಗಿದ್ದೇನೆ ಎಂದು ಸಿಎಂ ವಿರುದ್ಧ ವಾಗ್ದಾಳಿ ನಡೆಸಿದರು.