ದಾವಣಗೆರೆ : ಅಚ್ಛೇ ದಿನ್ ದೇಶದ ಜನ್ರೀಗೆ ಬಂದಿಲ್ಲ, ಬದಲಾಗಿ ಅಂಬಾನಿ-ಅದಾನಿಗೆ ಅಚ್ಛೇ ದಿನ್ ಬಂದಿದೆ ಎಂದು ಶಾಸಕಿ ಸೌಮ್ಯ ರೆಡ್ಡಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಅಚ್ಛೇ ದಿನ್ ದೇಶದ ಜನ್ರೀಗೆ ಬಂದಿಲ್ಲ, ಅಂಬಾನಿ-ಅದಾನಿಗೆ ಬಂದಿದೆ : ಶಾಸಕಿ ಸೌಮ್ಯ ರೆಡ್ಡಿ - ದಾವಣಗೆರೆಯಲ್ಲಿ ಸೌಮ್ಯ ರೆಡ್ಡಿ ಹೇಳಿಕೆ
ಪ್ರಧಾನಿಯವರು ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡುವುದಾಗಿ ಹೇಳಿದ್ರು ಅದು ಆಗಿಲ್ಲ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ ಪ್ರಕರಣಗಳು ಹೆಚ್ಚಾಗಿವೆ ಎಂದು ಕಿಡಿಕಾರಿದರು..
ದಾವಣಗೆರೆಯಲ್ಲಿ ಸೌಮ್ಯ ರೆಡ್ಡಿ ಹೇಳಿಕೆ
ಹರಿಹರ ಪಟ್ಟಣದಲ್ಲಿ ಬೆಲೆ ಏರಿಕೆ ಖಂಡಿಸಿ ಕೇಂದ್ರ ಸರ್ಕಾರದ ವಿರುದ್ಧ ನಡೆದ ಪ್ರತಿಭಟನೆ ಬಳಿಕ ಮಾತನಾಡಿದ ಅವರು, ನಮ್ಮ ಸ್ವಾತಂತ್ರ್ಯ ಚಳವಳಿ ರೈತರಿಂದ ಪ್ರಾರಂಭವಾಗಿದೆ. ಆದ್ರೇ, ದೆಹಲಿಯಲ್ಲಿ ಹತ್ತು ತಿಂಗಳಿನಿಂದ ರೈತರು ಪ್ರತಿಭಟನೆ ಮಾಡುತ್ತಿದ್ದಾರೆ, ಆ ಪ್ರತಿಭಟನೆಗೆ ಪ್ರಧಾನಿ ಮೋದಿಯವರ ಕಿವಿಗೆ ಬೀಳುತ್ತಿಲ್ಲ ಎಂದು ನಮಗೆ ನೋವಾಗುತ್ತಿದೆ.
ಪ್ರಧಾನಿಯವರು ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡುವುದಾಗಿ ಹೇಳಿದ್ರು ಅದು ಆಗಿಲ್ಲ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ ಪ್ರಕರಣಗಳು ಹೆಚ್ಚಾಗಿವೆ ಎಂದು ಕಿಡಿಕಾರಿದರು.