ಕರ್ನಾಟಕ

karnataka

ETV Bharat / state

ಸ್ವಂತ ಖರ್ಚಿನಲ್ಲಿ ಶಾಮನೂರು ಲಸಿಕೆ ವಿತರಣೆ.. ಮೊದಲ ಹಂತದ 10 ಸಾವಿರ ಡೋಸ್​ಗೆ ಚಾಲನೆ - ಪಿಟಿ ಪರಮೇಶ್ವರ ನಾಯ್ಕ್

6 ಕೋಟಿ ರೂಪಾಯಿ ವೆಚ್ಚದಲ್ಲಿ ಪುಣೆಯಿಂದ ಒಟ್ಟು 2 ಲಕ್ಷ ಡೋಸ್ ತರಿಸಲು ನಿರ್ಧರಿಸಲಿದ್ದರು. ಈ ಭಾಗವಾಗಿ ಮೊದಲ ಹಂತದ 10 ಸಾವಿರ ಡೋಸ್ ದಾವಣಗೆರೆಗೆ ಬಂದಿದೆ.

ಸ್ವಂತ ಖರ್ಚಿನಲ್ಲಿ ಶಾಮನೂರು ಲಸಿಕೆ ವಿತರಣೆ
ಸ್ವಂತ ಖರ್ಚಿನಲ್ಲಿ ಶಾಮನೂರು ಲಸಿಕೆ ವಿತರಣೆ

By

Published : Jun 4, 2021, 5:41 PM IST

ದಾವಣಗೆರೆ: ಶಾಸಕ ಶಾಮನೂರು ಶಿವಶಂಕರಪ್ಪ ತಮ್ಮ ಸ್ವಂತ ಹಣದಲ್ಲಿ 10 ಸಾವಿರ ಡೋಸ್​​​ ಲಸಿಕೆ ತರಿಸಿ ಕ್ಷೇತ್ರದ ಜನತೆಗೆ ವಿತರಿಸುವ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ. 6 ಕೋಟಿ ರೂಪಾಯಿ ವೆಚ್ಚದಲ್ಲಿ ಪುಣೆಯಿಂದ ಒಟ್ಟು 2 ಲಕ್ಷ ಡೋಸ್ ತರಿಸಲು ನಿರ್ಧರಿಸಿದ್ದರು. ಈ ಭಾಗವಾಗಿ ಮೊದಲ ಹಂತದ 10 ಸಾವಿರ ಡೋಸ್ ದಾವಣಗೆರೆಗೆ ಬಂದಿದೆ.

ಈ ಖಾಸಗಿ ಉಚಿತ ಕೊರೊನಾ ಲಸಿಕ ವಿತರಣೆ ಕಾರ್ಯಕ್ರಮವನ್ನು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ತಮ್ಮ 2ನೇ ಡೋಸ್ ಹಾಕಿಸಿಕೊಳ್ಳಲು ಮೂಲಕ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಮಾಜಿ ಸಚಿವ ಈಶ್ವರ್ ಖಂಡ್ರೆ, ಪಿಟಿ ಪರಮೇಶ್ವರ ನಾಯ್ಕ್, ಎಸ್ ಎಸ್ ಮಲ್ಲಿಕಾರ್ಜುನ್ , ಶಾಸಕ ಶಾಮನೂರು ಶಿವಶಂಕರಪ್ಪ ಭಾಗಿ‌‌ಯಾಗಿದ್ದರು.

ಲಸಿಕೆ ಹಾಕಿಸಿಕೊಂಡ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್

ಕೊರೊನಾ ನಿಯಮ ಉಲ್ಲಂಘನೆ

ನಗರದ ದುಗ್ಗಮ್ಮನ‌ ದೇವಸ್ಥಾನದ ಆವರಣದಲ್ಲಿ ಲಸಿಕೆ ವಿತರಣೆ ಕಾರ್ಯಕ್ರಮಕ್ಕೆ ಜನಜಂಗುಳಿ ಏರ್ಪಟ್ಟಿತ್ತು. ಕಾಂಗ್ರೆಸ್ ನಾಯಕರೂ ಸೇರಿದಂತೆ ಅಲ್ಲಿ ಸೇರಿದ್ದ ಜನತೆ ಅಂತರ ಕಾಪಾಡಿಕೊಳ್ಳದೇ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು ಕಂಡು ಬಂತು.

ABOUT THE AUTHOR

...view details