ಕರ್ನಾಟಕ

karnataka

ETV Bharat / state

ಸಿಎಂ ಬದಲಾವಣೆ ಇಲ್ಲ ಅನ್ನೋದು ನನ್ನ ವಿಶ್ವಾಸ: ಶಾಮನೂರು ಶಿವಶಂಕರಪ್ಪ - ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ

ಹೈಕಮಾಂಡ್ ಹೇಳಿದಂತೆ ಬಿಜೆಪಿಯವರು ಕೇಳ್ತಾರೆ ಎಂದು ಪರೋಕ್ಷವಾಗಿ ಸಚಿವ ಸಿ.ಪಿ.ಯೋಗೇಶ್ವರ್‌ ಕುರಿತು ಲೇವಡಿ ಮಾಡಿದ್ದಾರೆ..

ಶಾಮನೂರು ಶಿವಶಂಕರಪ್ಪ
ಶಾಮನೂರು ಶಿವಶಂಕರಪ್ಪ

By

Published : May 28, 2021, 6:40 PM IST

Updated : May 28, 2021, 8:12 PM IST

ದಾವಣಗೆರೆ : ರಾಜ್ಯದಲ್ಲಿ ಸಿಎಂ ಬದಲಾವಣೆ ಚರ್ಚೆ ಹೆಚ್ಚಾಗುತ್ತಿದ್ದು, ಬಿಜೆಪಿಯಲ್ಲಿ ಬಿರುಗಾಳಿ ಎಬ್ಬಿಸಿದೆ. ಇದರ ಮಧ್ಯೆ ಮಾಜಿ ಸಚಿವ ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ರಾಜ್ಯದಲ್ಲಿ ಸಿಎಂ ಬದಲಾವಣೆ ಇಲ್ಲ ಎಂದು ಭವಿಷ್ಯ ನುಡಿದಿದ್ದಾರೆ.

ಬಿಜೆಪಿ ನಾಯಕತ್ವ ಬದಲಾವಣೆ ಕುರಿತು ಶಾಮನೂರು ಶಿವಶಂಕರಪ್ಪ ಪ್ರತಿಕ್ರಿಯೆ

ದಾವಣಗೆರೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಸಿಎಂ ಬಿ.ಎಸ್ ಯಡಿಯೂರಪ್ಪ ಬದಲಾವಣೆಯಾಗಲ್ಲ, ನೂರಕ್ಕೆ ನೂರಷ್ಟು ಯಡಿಯೂರಪ್ಪನವರೇ ಸಿಎಂ ಆಗಿ ಮುಂದುವರಿಯುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಿಎಂ ಬದಲಾವಣೆ ಮಾಡೋಕೆ ದೆಹಲಿಗೆ ಹೋದವರು 3 ನಾಮ ಹಾಕ್ಕೊಂಡು ಬಂದಿದ್ದಾರೆ, ಹೈಕಮಾಂಡ್ ಹೇಳಿದಂತೆ ಬಿಜೆಪಿಯವರು ಕೇಳ್ತಾರೆ ಎಂದು ಪರೋಕ್ಷವಾಗಿ ಸಚಿವ ಸಿ.ಪಿ.ಯೋಗೇಶ್ವರ್‌ ಕುರಿತು ಲೇವಡಿ ಮಾಡಿದರು.

ಇದನ್ನೂ ಓದಿ:ಸಿ.ಟಿ.ರವಿ ಮನೆಗೆ ನಳಿನ್​ ಕುಮಾರ್​ ಕಟೀಲ್​​​ ದಿಢೀರ್ ಭೇಟಿ!

Last Updated : May 28, 2021, 8:12 PM IST

ABOUT THE AUTHOR

...view details