ದಾವಣಗೆರೆ: ಜಿಲ್ಲೆಯ ಉತ್ತರ ವಿಧಾನಸಭಾ ಕ್ಷೇತ್ರದಿಂದ ಮತ್ತೆ ಸ್ಪರ್ಧೆ ಮಾಡ್ತೀನಿ. 75 ವರ್ಷವಾದರೆ ಏನಾಯಿತು. ಪಕ್ಷ ಹೇಳಿದಂತೆ ಕೇಳ್ತಿನಿ ಎಂದು ದಾವಣಗೆರೆ ಉತ್ತರ ಮತ ಕ್ಷೇತ್ರದ ಹಿರಿಯ ಬಿಜೆಪಿ ಶಾಸಕ ಎಸ್ ಎ ರವೀಂದ್ರನಾಥ್ ಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದರು.
ದಾವಣಗೆರೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ನಿಂದ ಯಾರು ಸ್ಪರ್ಧೆ ಮಾಡ್ತಾರೆ ಎಂಬುದನ್ನು ನೋಡಿಕೊಂಡು ಸ್ಪರ್ಧೆ ಮಾಡ್ತೀವಿ. 2023 ರ ಚುನಾವಣೆಗೆ ಸ್ಪರ್ಧಿಸುವ ಒಲವಿದೆ. ಪಕ್ಷ ಹೇಳಿದರೆ ಖಂಡಿತ ನಾನು ಸ್ಪರ್ಧೆ ಮಾಡುವೆ. ಯಡಿಯೂರಪ್ಪ ಬಿಟ್ಟು ನಾನೇನು ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ. 75 ವರ್ಷ ಆಗಿದ್ದರೆ ಏನಾಯಿತು. ಸದ್ಯ ವಯಸ್ಸಿನ ಪ್ರಶ್ನೆ ಬರುವುದಿಲ್ಲ. ಪಕ್ಷದಿಂದ ಮತ್ತೆ ನನಗೆ ಟಿಕೆಟ್ ನೀಡ್ತಾರೆ, ನಾನಂತೂ ಮತ್ತೆ ಚುನಾವಣೆಗೆ ಸ್ಪರ್ಧೆ ಮಾಡುವೆ ಎಂದು ಇಂಗಿತ ವ್ಯಕ್ತಪಡಿಸಿದರು.