ದಾವಣಗೆರೆ:ಕೋವಿಡ್ ಸೋಂಕಿನಿಂದ ಗುಣಮುಖರಾದವರಿಗೆ ಪುಷ್ಪವೃಷ್ಟಿ ಸುರಿದು ಶಾಸಕ ರೇಣುಕಾಚಾರ್ಯ ಸಿಹಿ ಹಂಚಿ ಸಂಭ್ರಮಿಸಿದರು.
ಕೊರೊನಾ ಗೆದ್ದವರ ಮೇಲೆ ರೇಣುಕಾಚಾರ್ಯ ಪುಷ್ಪವೃಷ್ಟಿ: ಮುಂದೆಯೂ ನೀವೇ ಶಾಸಕರಾಗಿ ಎಂದು ಹಾರೈಸಿದ ಮಹಿಳೆ - ಕೊರೊನಾದಿಂದ ಗುಣಮುಖರಾದವರಿಗೆ ರೇಣುಕಾಚಾರ್ಯ ಬೀಳ್ಕೊಡುಗೆ
ದಾವಣಗೆರೆಯಲ್ಲಿ ಕೋವಿಡ್ ಸೋಂಕಿನಿಂದ ಗುಣಮುಖರಾದವರಿಗೆ ಶಾಸಕ ರೇಣುಕಾಚಾರ್ಯ ಹೂವಿನ ಮಳೆಗರೆದು, ಸಿಹಿ ಹಂಚಿ ಅದ್ಧೂರಿಯಾಗಿ ಬೀಳ್ಕೊಡುಗೆ ನೀಡಿದ್ದಾರೆ.
davanagere
ಜಿಲ್ಲೆಯ ಹೊನ್ನಾಳಿ ತಾಲೂಕು ಆಸ್ಪತ್ರೆಯಲ್ಲಿಂದು 13 ಜನರು ಕೊರೊನಾದಿಂದ ಗುಣಮುಖರಾದ ಹಿನ್ನೆಲೆ ಅವರಿಗೆ ರೇಣುಕಾಚಾರ್ಯ ಅದ್ಧೂರಿಯಾಗಿ ಬೀಳ್ಕೊಡುಗೆ ನೀಡಿದರು. ಪ್ರತಿನಿತ್ಯ ಆಸ್ಪತ್ರೆಗೆ ತೆರಳಿ ಸೋಂಕಿತರಿಗೆ ಉಪಹಾರ ನೀಡಿ ಆತ್ಮಸ್ಥೈರ್ಯ ತುಂಬಿ ಆರೋಗ್ಯ ವಿಚಾರಿಸುತ್ತಿರುವ ಶಾಸಕರ ಕಾರ್ಯವೈಖರಿಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಕೊರೊನಾ ಸಮಯದಲ್ಲಿ ಶಾಸಕರ ಕೆಲಸ ಕಂಡು ಹೊನ್ನಾಳಿಯ ಸಾರ್ವಜನಿಕ ಆಸ್ಪತ್ರೆ ಮುಂಭಾಗ ಮಹಿಳೆಯೊಬ್ಬರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಮುಂದೆಯೂ ನೀವೇ ಶಾಸಕರಾಗಬೇಕೆಂದು ಹಾರೈಸಿದರು.
Last Updated : May 17, 2021, 5:41 PM IST