ದಾವಣಗೆರೆ: ಇತ್ತೀಚಿನ ದಿನಗಳಲ್ಲಿ ಪ್ರತಿನಿತ್ಯ ಒಂದಲ್ಲ ಒಂದು ಜನಸೇವೆ ಮಾಡುತ್ತಾ ಗಮನ ಸೆಳೆಯುತ್ತಿರುವ ಶಾಸಕ ಎಂ.ಪಿ.ರೇಣುಕಾಚಾರ್ಯ ಇಂದು ಬೆಳ್ಳಂಬೆಳಗ್ಗೆಯೇ ಫೀಲ್ಡಿಗಿಳಿದು ಸ್ಯಾನಿಟೈಸಿಂಗ್ ಮಾಡಿದರು.
ಹೊನ್ನಾಳಿ ನಗರದ ಖಾಸಗಿ ಬಸ್ ನಿಲ್ದಾಣ, ಪ್ರಮುಖ ರಸ್ತೆಗಳಲ್ಲಿ ಶಾಸಕ ರೇಣುಕಾಚಾರ್ಯ ಸ್ಯಾನಿಟೈಸ್ ಮಾಡಿದರು. ಅಗ್ನಿಶಾಮ ದಳದ ಫೈರ್ ಇಂಜಿನ್ ಹತ್ತಿದ್ದ ರೇಣುಕಾಚಾರ್ಯ, ಖುದ್ದು ಪೈಪ್ ಹಿಡಿದು ಸ್ಯಾನಿಟೈಸ್ ಮಾಡಿದರು. ಇಂದು ಮತ್ತು ನಾಳೆ ಹೊನ್ನಾಳಿ ನಗರದಾದ್ಯಂತ ಸ್ಯಾನಿಟೈಸ್ ಮಾಡುವ ಕಾರ್ಯ ನಡೆಯುತ್ತಿದೆ.