ಕರ್ನಾಟಕ

karnataka

ETV Bharat / state

ಕಾಂಗ್ರೆಸ್‌ ದೇಶದ್ರೋಹಿಗಳನ್ನು ರಕ್ಷಿಸುವ ಕೆಲಸ ಮಾಡ್ತಿದೆ: ರೇಣುಕಾಚಾರ್ಯ

ಕಾಂಗ್ರೆಸ್ ಮುಖಂಡರು ದೇಶದ್ರೋಹಿಗಳ ರಕ್ಷಣೆಗೆ ಮುಂದಾಗಿದ್ದಾರೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಆರೋಪಿಸಿದರು.

ಎಂ ಪಿ ರೇಣುಕಾಚಾರ್ಯ
ಎಂ ಪಿ ರೇಣುಕಾಚಾರ್ಯ

By

Published : Apr 29, 2022, 4:36 PM IST

ದಾವಣಗೆರೆ:ಎಲ್ಲಾ ಮುಸ್ಲಿಮರು ಭಯೋತ್ಪಾದಕರಲ್ಲ. ದೇಶದ್ರೋಹಿಗಳನ್ನು ಬೆಂಬಲಿಸುವ ಕೃತ್ಯ ಕಾಂಗ್ರೆಸ್ ಮಾಡುತ್ತಿದೆ ಎಂದು ಎಂ.ಪಿ.ರೇಣುಕಾಚಾರ್ಯ ವಾಗ್ದಾಳಿ ನಡೆಸಿದರು. ಜಿಲ್ಲೆಯ ಜಗಳೂರ ಪಟ್ಟಣದಲ್ಲಿ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು.


ಎಲ್ಲರೂ ಒಂದಾಗಿ ಬಾಳಬೇಕು ಎಂಬುದು ಬಿಜೆಪಿ ಸಿದ್ಧಾಂತ. ಹುಬ್ಬಳ್ಳಿ ಗಲಭೆಯಲ್ಲಿ ಭಾಗಿಯಾದವರಿಗೆ ಫುಡ್ ಕಿಟ್ ಕೊಡುವುದು ಯಾವ ನ್ಯಾಯ?. ಕಾಂಗ್ರೆಸ್ ಮುಖಂಡ ಜಮೀರ್ ಅಹ್ಮದ್ ಶಿಷ್ಯರು ಇದನ್ನು ಮಾಡುತ್ತಿದ್ದಾರೆ ಎಂದರು.

ಮುಗ್ಧ ಪಿಯುಸಿ ಯುವಕ ಸ್ಟೇಟಸ್ ಹಾಕಿದ ತಕ್ಷಣ ಹುಬ್ಬಳಿಯ ಪೊಲೀಸ್ ಠಾಣೆ ಮುಂದೆ ಅರ್ಧ ಗಂಟೆಯಲ್ಲಿ ಅಷ್ಟೊಂದು ಜನರು ಸೇರ್ತಾರಲ್ಲ?. ಕಾನೂನಿನ ಪ್ರಕಾರ ಸ್ಟೇಟಸ್ ಹಾಕಿದವನಿಗೆ ಶಿಕ್ಷೆ ಆಗುತ್ತಿತ್ತು. ಕಾಂಗ್ರೆಸ್ ಪಕ್ಷದವರು ಈಗ ಹೇಳಲಿ, ನಿಮಗೆ ಅಲ್ಪಸಂಖ್ಯಾತರು ಬೇಕೋ, ಕುರ್ಚಿ ಬೇಕೋ, ಇಲ್ಲ ಹಿಂದೂಗಳು ಬೇಕೋ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗಲಭೆ ಮಾಡಿದವರನ್ನು ಮುಗ್ದರು ಎಂದು ಸದನದಲ್ಲಿ ಈ ಕಾಂಗ್ರೆಸ್ ನಾಯಕರು ಹೇಳ್ತಾರೆ. ಕೆ.ಜಿ ಹಳ್ಳಿ ಡಿ.ಜೆ ಹಳ್ಳಿ, ಪಾದರಾಯನಪುರದ ಗಲಭೆಕೋರರನ್ನು ಅದ್ಧೂರಿಯಾಗಿ ಸ್ವಾಗತ ಮಾಡ್ತಾರೆ. ಚಂದ್ರು ಹತ್ಯೆಯಾದಾಗ ಈ ಜಮೀರ್ ಏನ್ ಮಾಡಿದ ಎನ್ನುವುದು ಗೊತ್ತಿದೆ. ಕುರ್ಚಿಗಾಗಿ ಕಾಂಗ್ರೆಸ್ ಪಕ್ಷದವರು ಏನ್​ ಬೇಕಾದ್ರೂ ಮಾಡ್ತಾರೆ ಎಂದು ವಾಗ್ದಾಳಿ ನಡೆಸಿದರು.

ಪಿಎಸ್​ಐ ನೇಮಕಾತಿ ಅಕ್ರಮದ ರೂವಾರಿಯಾಗಿರುವ ದಿವ್ಯಾ ಹಾಗರಗಿ ಬಿಜೆಪಿ ಕಾರ್ಯಕರ್ತೆಯಲ್ಲ. ಬಿಜೆಪಿ ಕಾರ್ಯಕರ್ತೆ ಆಗಿದ್ರೆ ನಾವು ರಕ್ಷಣೆ ಮಾಡುತ್ತಿದ್ದೆವಲ್ಲ?. ಈಗಾಗಲೇ ದಿವ್ಯಾ ಬಂಧನವಾಗಿದೆ. ಜೊತೆಗೆ ಬಂಧನ ವಿಳಂಬವಾದ್ರೆ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಸರ್ಕಾರ ನಿರ್ಧರಿಸಿತ್ತು ಎಂದು ಹೇಳಿದರು.

ಇದನ್ನೂ ಓದಿ:ಮಗು ಚಿವುಟಿ ತೊಟ್ಟಿಲು ತೂಗೋ ಕೆಲಸ ಮಾಡುತ್ತಿದ್ದಾರೆ: ಜಮೀರ್​​ ಕೆಲಸಕ್ಕೆ ಸಿ.ಟಿ ರವಿ ಟಾಂಗ್

For All Latest Updates

ABOUT THE AUTHOR

...view details