ಕರ್ನಾಟಕ

karnataka

ETV Bharat / state

ಬಿಎಸ್​ವೈ ವಿರುದ್ಧ ಮಾತನಾಡಿದ್ರೆ ಸಹಿಸೋಲ್ಲ: ರೇಣುಕಾಚಾರ್ಯ - ರೇಣುಕಾಚಾರ್ಯ ಲೇಟಸ್ಟ್ ಸುದ್ದಿ

ಯಡಿಯೂರಪ್ಪನವರ ವಿರುದ್ಧ ಮಾತನಾಡಿದರೆ ಬಿಜೆಪಿ ಬಗ್ಗೆ ಮಾತನಾಡಿದಂತೆ. ಅವರ ನಾಲಿಗೆಗೂ, ಮೆದುಳಿಗೂ ಸಂಬಂಧ ಇಲ್ಲ, ಬುದ್ಧಿ ಸ್ಥಿಮಿತ ಇಲ್ಲ ಎಂದು ಅರ್ಥ ಎಂದು ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದಾರೆ.

MLA renukacharya on cp  yogeshwar
ಬಿಎಸ್​ವೈ ವಿರುದ್ಧ ಮಾತನಾಡಿದ್ರೆ ಸಹಿಸೋಲ್ಲ: ರೇಣುಕಾಚಾರ್ಯ

By

Published : Jul 7, 2021, 4:41 PM IST

ದಾವಣಗೆರೆ:ಸಿಎಂ ಬಿಎಸ್​​ವೈ ಅವರ ಬಗ್ಗೆ ಮಾತನಾಡಿದರೆ ನಾನು ಸಹಿಸೋದಿಲ್ಲ. ನಾಯಕತ್ವದ ವಿರುದ್ಧ ಮಾತನಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಶಾಸಕ ರೇಣುಕಾಚಾರ್ಯ ಒತ್ತಾಯಿಸಿದರು.

ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಬಸವನಹಳ್ಳಿಯಲ್ಲಿ ಸಿ.ಪಿ.ಯೋಗೇಶ್ವರ್ ವಿರುದ್ಧ ಮಾತನಾಡಿದ ಅವರು 'ನೀನು ಮರಿಯಾನೆಯೂ ಅಲ್ಲ, ಏನೂ ಅಲ್ಲ' ಎಂದು ಕುಟುಕಿದರು.

ಶಾಸಕ ರೇಣುಕಾಚಾರ್ಯ

ಅಷ್ಟೇ ಅಲ್ಲದೇ ನಿನಗೆ ಸಿಎಂ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ, ನಿನ್ನ ಪಕ್ಷಾಂತರಿ ರಾಜಕೀಯದ ಬಗ್ಗೆ ಮಾತನಾಡಲು ನನಗೆ ಅಸಹ್ಯವಾಗುತ್ತಿದೆ. ಯಡಿಯೂರಪ್ಪನವರ ಬಗ್ಗೆ ಮಾತನಾಡಿದರೆ ದೊಡ್ಡವರಾಗ್ತೀವಿ ಎಂದು ಕೆಲವರು ಅಂದುಕೊಂಡಿದ್ದಾರೆ. ಯಡಿಯೂರಪ್ಪನವರ ವಿರುದ್ಧ ಮಾತನಾಡಿದರೆ ಬಿಜೆಪಿ ಬಗ್ಗೆ ಮಾತನಾಡಿದಂತೆ. ಅವರ ನಾಲಿಗೆಗೂ, ಮೆದುಳಿಗೂ ಸಂಬಂಧ ಇಲ್ಲ, ಬುದ್ಧಿ ಸ್ಥಿಮಿತ ಇಲ್ಲ ಎಂದು ಅರ್ಥ ಎಂದು ರೇಣುಕಾಚಾರ್ಯ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ:ಖೂಬಾ ಸೇರಿ ಕರ್ನಾಟಕದ ಈ ನಾಲ್ವರಿಗೆ ಮೋದಿ ಸಂಪುಟದಲ್ಲಿ ಮಂತ್ರಿಗಿರಿ ಬಹುತೇಕ ಖಚಿತ

ನಾಳೆ ಬೆಂಗಳೂರಿನಲ್ಲಿ ಸಿಎಂ ಹಾಗೂ ರಾಜ್ಯಾಧ್ಯಕ್ಷರನ್ನು ಭೇಟಿ ಮಾಡುತ್ತೇನೆ, ಯಡಿಯೂರಪ್ಪ ಕುಟುಂಬ ರಾಜಕಾರಣ ಎಂದೂ ಮಾಡಿಲ್ಲ, ಯಡಿಯೂರಪ್ಪ ಭ್ರಷ್ಟಾಚಾರ ಮಾಡಿದ್ರೆ, ಅದನ್ನು ಬಹಿರಂಗಪಡಿಸಲಿ ಎಂದು ಆಗ್ರಹಿಸಿದರು.

ABOUT THE AUTHOR

...view details