ದಾವಣಗೆರೆ: ಸಾರಿಗೆ ಸಂಸ್ಥೆಯ ಬಸ್ ಓಡಿಸುವ ಮೂಲಕ ಸಿಎಂ ರಾಜಕೀಯ ಕಾರ್ಯದರ್ಶಿಯೂ ಆದ ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಅವರು ಮತ್ತೆ ಚರ್ಚೆಗೆ ಕಾರಣರಾಗಿದ್ದಾರೆ.
ಉಜಿನಿಪುರ, ರಾಂಪುರ ರೈಟ್, ರೈಟ್... ಕೆಎಸ್ಆರ್ಟಿಸಿ ಬಸ್ ಡ್ರೈವರ್ ಆದ ರೇಣುಕಾಚಾರ್ಯ- ವಿಡಿಯೋ
ದಾವಣಗೆರೆ ಡಿಪೋ ಹಾಗೂ ಹೊನ್ನಾಳಿ ಡಿಪೋದ ಹೊಸ ಆರು ಬಸ್ಗಳಿಗೆ ಚಾಲನೆ ನೀಡಿದ ಬಳಿಕ ಸ್ವತಃ ರೇಣುಕಾಚಾರ್ಯ ಅವರೇ ನಗರದಲ್ಲಿ ಚಾಲನೆ ಮಾಡುವ ಪ್ರದಕ್ಷಿಣೆ ಹಾಕಿದರು. ಶಾಸಕರಿಗೆ ಬಿಜೆಪಿ ಮುಖಂಡರು ಸಾಥ್ ನೀಡಿದರು.
ಬಸ್ ಓಡಿಸಿದ ರೇಣುಕಾಚಾರ್ಯಗೆ ಸಿಕ್ತು ಪ್ರಚಾರ: ಡಿಪೋ ಮ್ಯಾನೇಜರ್ಗೆ ಎದುರಾಯ್ತು ಸಂಕಟ...!
ಹೊನ್ನಾಳಿ ಪಟ್ಟಣದ ಪದವಿ ಕಾಲೇಜಿಗೆ ಭೇಟಿ ನೀಡಿದ ಅವರು ಇಂದಿನಿಂದ ಆರಂಭಗೊಂಡಿರುವ ದಾವಣಗೆರೆ ವಿಶ್ವವಿದ್ಯಾಲಯದ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಆಲ್ ದ ಬೆಸ್ಟ್ ಹೇಳಿದರು. ಇದಕ್ಕೂ ಮುನ್ನ ಹೊನ್ನಾಳಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ತೆರಳಿ ವಿದ್ಯಾರ್ಥಿಗಳಿಗೆ ಮಾಸ್ಕ್ ನೀಡಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಮನವಿ ಮಾಡಿದರು.
ಬಸ್ ಚಾಲನೆ ಮಾಡುತ್ತಿರುವ ಶಾಸಕ ರೇಣುಕಾಚಾರ್ಯ ಈ ವೇಳೆ ಮಾತನಾಡಿದ ರೇಣುಕಾಚಾರ್ಯ, ಯುವ ಪೀಳೆಗೆ ದುಶ್ಚಟಗಳಿಗೆ ಬಲಿಯಾಗಬಾರದು. ಡ್ರಗ್ಸ್ ಮಾಫಿಯಾ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಯುವಕರು ಮಾದಕ ವಸ್ತುಗಳ ಸೇವನೆಗೆ ಮುಂದಾಗುತ್ತಿದ್ದಾರೆ. ಇದರಿಂದ ಯುವ ಸಮೂಹ ದಿಕ್ಕು ತಪ್ಪುತ್ತಿದೆ. ಯುವಕರು ದುಶ್ಚಟಗಳಿಂದ ದೂರ ಇರಬೇಕು ಎಂದು ಮನವಿ ಮಾಡಿದರು.
ಬಸ್ ಚಾಲನೆ ಮಾಡುತ್ತಿರುವ ಶಾಸಕ ರೇಣುಕಾಚಾರ್ಯ ವಿದ್ಯಾರ್ಥಿಗಳು ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಂಡು ಪರೀಕ್ಷೆ ಬರೆಯಿರಿ. ನೀವೂ ಬಳಸಿ, ಜನರಿಗೂ ಜಾಗೃತಿ ಮೂಡಿಸುವ ಕೆಲಸವನ್ನು ವಿದ್ಯಾರ್ಥಿಗಳು ಮಾಡಬೇಕು. ಭವಿಷ್ಯದಲ್ಲಿ ವಿದ್ಯಾರ್ಥಿಗಳಿಗೆ ಒಳಿತಾಗಲಿ ಎಂದರು.
ಬಸ್ ಚಾಲನೆ ಮಾಡುತ್ತಿರುವ ಶಾಸಕ ರೇಣುಕಾಚಾರ್ಯ