ದಾವಣಗೆರೆ:ನಗರದ ಸಮೀಪದ ಹಳೇ ಕುಂದುವಾಡದ ಪದವಿ ಪೂರ್ವ ಕಾಲೇಜಿನಲ್ಲಿ ಇಂಗ್ಲಿಷ್ ವಿಭಾಗವನ್ನು ಶಾಸಕ ಎಸ್ ಎ ರವೀಂದ್ರನಾಥ್ ಹಾಗೂ ಡಿಡಿಪಿಐ ಸಾವಿತ್ರಮ್ಮ ಉದ್ಘಾಟಿಸಿದರು.
ಬದುಕಲು ಹಾಗೂ ವೃತ್ತಿಗೆ ವಿದ್ಯಾಭ್ಯಾಸ ಅವಶ್ಯಕ : ಶಾಸಕ ಎಸ್ ಎ ರವೀಂದ್ರನಾಥ್ - kannada news
ಬದುಕಲು ಹಾಗೂ ವೃತ್ತಿಗೆ ವಿದ್ಯಾಭ್ಯಾಸ ಬೇಕು. ಹೀಗಾಗಿ ಎಲ್ಲರು ಉತ್ತಮ ಶಿಕ್ಷಣ ಪಡೆಯಿರಿ. ಕಾಲೇಜಿಗೆ ಏನೇನು ಸೌಲಭ್ಯ ಬೇಕೋ ಅದನ್ನು ನಾನು ಒದಗಿಸಿಕೊಡುತ್ತೇನೆ ಎಂದು ಶಾಸಕ ಎಸ್ ಎ ರವೀಂದ್ರನಾಥ್ ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಎಸ್ ಎ ರವೀಂದ್ರನಾಥ್, ಕುಂದುವಾಡ ಕೆರೆ ನೀರಿನಿಂದ ಬೆಳೆದ ಅಕ್ಕಿ ಇಡೀ ಜಿಲ್ಲೆಗೆ ಫೇಮಸ್ಸಾಗಿತ್ತು. ನಾವೂ ಸಹ ಇಲ್ಲಿಗೆ ಬಂದು ಅಕ್ಕಿ ಖರೀದಿಸುತ್ತಿದ್ದೆವು. ಅದೇ ರೀತಿ ಇಲ್ಲಿನ ಕಾಲೇಜು ಉತ್ತಮ ಫಲಿತಾಂಶದ ಮೂಲಕ ಹೆಸರುವಾಸಿಯಾಗಿದೆ. ಈಗ ವಿಜ್ಙಾನ ವಿಭಾಗ ಬಂದಿದೆ. ಈ ಮೂಲಕ ನೀವು ಕಾಲೇಜಿಗೆ ಇನ್ನಷ್ಟು ಹೆಸರು ಬರುವಂತೆ ಓದಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಬದುಕಲು ವಿದ್ಯಾಭ್ಯಾಸ ಬೇಕು. ಬಳಿಕ ವೃತ್ತಿಗೆ ವಿದ್ಯಾಭ್ಯಾಸ ಬೇಕು. ಹೀಗಾಗಿ ಎಲ್ಲರೂ ಉತ್ತಮ ಶಿಕ್ಷಣ ಪಡೆಯಿರಿ. ಕಾಲೇಜಿಗೆ ಏನೇನು ಸೌಲಭ್ಯ ಬೇಕೊ ಅದನ್ನು ನಾನು ಒದಗಿಸಿಕೊಡುತ್ತೇನೆ ಎಂದರು. ಇದೇ ವೇಳೆ ಡಿಡಿಪಿಐ ಎಸ್ ಟಿ ಸಾವಿತ್ರಮ್ಮ ಮಾತನಾಡಿ, ಸರ್ಕಾರಿ ಕಾಲೇಜುಗಳಲ್ಲಿ ವಿಜ್ಞಾನ ವಿಭಾಗ ಉಳಿಯುವುದು ಕಷ್ಟ ಎನ್ನುವ ಪರಿಸ್ಥಿತಿಯಾಗಿದೆ. ಇಂತಹ ಸಂದರ್ಭದಲ್ಲಿ ಹೊಸದಾಗಿ ಕುಂದುವಾಡದಲ್ಲಿ ಇಂಗ್ಲೀಷ್ ವಿಭಾಗ ಪ್ರಾರಂಭವಾಗಿದೆ. ಹೆಚ್ಚಿನ ನೋಂದಣಿಯಾಗುವಂತಾಗಲಿ ಎಂದು ಹೇಳಿದರು.