ಕರ್ನಾಟಕ

karnataka

ETV Bharat / state

ಸರ್ಕಾರ ಟೇಕಾಫ್‌ ಆಗಲು ವಿಮಾನವಲ್ಲ : ಸಿದ್ದರಾಮಯ್ಯನವರಿಗೆ ರೇಣುಕಾಚಾರ್ಯ ಟಾಂಗ್ - ಸಿದ್ದರಾಮಯ್ಯಗೆ ರೇಣುಕಾಚಾರ್ಯ ಟಾಂಗ್ ಸುದ್ದಿ

2023ರ ವಿಧಾನಸಭೆ ಚುನಾವಣೆಯಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರುತ್ತೆ. ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್‌, ಜಿ.ಪರಮೇಶ್ವರ್, ಮಲ್ಲಿಕಾರ್ಜುನ್‌ ಖರ್ಗೆ ಕಾಂಗ್ರೆಸ್​ನಲ್ಲಿ ಮೂರ್ನಾಲ್ಕು ಜನ ಸಿಎಂ ಅಭ್ಯರ್ಥಿಗಳಿದ್ದಾರೆ. ಕಾಂಗ್ರೆಸ್‌ನಲ್ಲಿ A ಯಿಂದ Zವರೆಗೂ ಸಿಎಂ ಅಭ್ಯರ್ಥಿಗಳಿದ್ದಾರೆ. ಆದ್ರೆ, ಬಿಜೆಪಿಯಲ್ಲಿ ಒಗ್ಗಟ್ಟಾಗಿ ಒಬ್ಬ ಸಿಎಂ ಆಯ್ಕೆ ಮಾಡುತ್ತೇವೆ..

MLA MP Renukacharya Tang to Opposition party leader Siddaramaiah
ಸಿದ್ದರಾಮಯ್ಯಗೆ ರೇಣುಕಾಚಾರ್ಯ ಟಾಂಗ್

By

Published : Aug 21, 2021, 5:10 PM IST

Updated : Aug 21, 2021, 5:29 PM IST

ದಾವಣಗೆರೆ :ಸರ್ಕಾರ ಟೇಕಾಫ್‌ ಆಗಿಲ್ಲ ಎಂಬಮಾಜಿ ಸಿಎಂ ಸಿದ್ದರಾಮಯ್ಯನವರ ಹೇಳಿಕೆಗೆ ಶಾಸಕ ಎಂ ಪಿ ರೇಣುಕಾಚಾರ್ಯ ತಿರುಗೇಟು ನೀಡಿದ್ದಾರೆ. ಸರ್ಕಾರ ಟೇಕಾಫ್‌ ಆಗಲು ವಿಮಾನವಲ್ಲ. ನಮ್ಮ ಸರ್ಕಾರ ನೆಲಮಟ್ಟಕ್ಕಿಳಿಯುತ್ತದೆ. ಜನರಿಗೆ ಅಗತ್ಯ ಯೋಜನೆಗಳನ್ನು ಮನೆ ಬಾಗಿಲಿಗೆ ಮುಟ್ಟಿಸುತ್ತದೆ ಎಂದು ಹೇಳಿದರು.

ಸಿದ್ದರಾಮಯ್ಯನವರಿಗೆ ರೇಣುಕಾಚಾರ್ಯ ಟಾಂಗ್

ನಗರದಲ್ಲಿ ಮಾತನಾಡಿದ ಅವರು, 2013-18 ಸಿದ್ದರಾಮಯ್ಯ ಸಿಎಂ ಆಗಿದ್ದು, ಬಿಜೆಪಿ ತಪ್ಪಿನಿಂದ. ಬಿಜೆಪಿ, ಬಿಎಸ್‌ಆರ್‌, ಕೆಜೆಪಿ, ಮೂರು ಗುಂಪಾಗಿತ್ತು. ನಮ್ಮ ತಪ್ಪಿನಿಂದ ಅವರು ಅಧಿಕಾರಕ್ಕೆ ಬಂದ್ರು.

ಕಾಂಗ್ರೆಸ್‌ ನಾಯಕರು ದೇವೇಗೌಡ್ರ ಮನೆಗೆ ಹೋಗಿ ಮಂಡಿ ಊರಿದರು. ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಕಾಂಗ್ರೆಸ್‌ ನಾಯಕರು, ಮಾಜಿ ಪ್ರಧಾನಿ ದೇವೇಗೌಡ್ರ ಮನೆಗೆ ತೆರಳಿ ಮಂಡಿ ಊರಿ ಕುಮಾರಸ್ವಾಮಿಯವನ್ನು ಸಿಎಂ ಮಾಡಿದ್ರು ಎಂದು ವ್ಯಂಗ್ಯವಾಡಿದರು.

ಅಂದು ಸಿದ್ದರಾಮಯ್ಯನವರಿಗೆ ಭ್ರಮನಿರಸನವಾಗಿತ್ತು :ಅಂದು ಸಿದ್ದರಾಮಯ್ಯನವರಿಗೆ ಭ್ರಮನಿರಸನವಾಗಿತ್ತು. ಜೆಡಿಎಸ್‌, ಕಾಂಗ್ರೆಸ್‌ ಒಳಜಗಳದಲ್ಲಿ ಸಿಎಂ ಆಗೋ ಕನಸು ಕಾಣುತ್ತಿದ್ದರು. ಕಾಂಗ್ರೆಸ್‌, ಜೆಡಿಎಸ್‌ ಶಾಸಕರು ಬೇಸತ್ತು ರಾಜೀನಾಮೆ ನೀಡಿ ಬಿಜೆಪಿಗೆ ಬಂದಿದ್ದರಿಂದ ಸಮ್ಮಿಶ್ರ ಸರ್ಕಾರ ಪತನವಾಯಿತು. ‌ಸರ್ಕಾರ ಟೇಕಾಫ್‌ ಆಗಲು ವಿಮಾನವಲ್ಲ.

2 ವರ್ಷ ಸಿಎಂ ಆಗಿದ್ದ ಬಿಎಸ್‌ವೈ ಸ್ವಯಂ ಪ್ರೇರಿತರಾಗಿ ಸಿಎಂ ಹುದ್ದೆಗೆ ರಾಜೀನಾಮೆ ನೀಡಿದ್ರು. ನಂತರ ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದಾರೆ. ಸರ್ಕಾರ ಉತ್ತಮ ಕೆಲಸ ಮಾಡುತ್ತಿದ್ದು, ಇನ್ನೂ 18 ತಿಂಗಳು ಬೊಮ್ಮಾಯಿ ಉತ್ತಮ ಆಡಳಿತ ನೀಡ್ತಾರೆ ಎಂದರು.

ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರುತ್ತೆ :2023ರ ವಿಧಾನಸಭೆ ಚುನಾವಣೆಯಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರುತ್ತೆ. ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್‌, ಜಿ.ಪರಮೇಶ್ವರ್, ಮಲ್ಲಿಕಾರ್ಜುನ್‌ ಖರ್ಗೆ ಕಾಂಗ್ರೆಸ್​ನಲ್ಲಿ ಮೂರ್ನಾಲ್ಕು ಜನ ಸಿಎಂ ಅಭ್ಯರ್ಥಿಗಳಿದ್ದಾರೆ. ಕಾಂಗ್ರೆಸ್‌ನಲ್ಲಿ A ಯಿಂದ Zವರೆಗೂ ಸಿಎಂ ಅಭ್ಯರ್ಥಿಗಳಿದ್ದಾರೆ. ಆದ್ರೆ, ಬಿಜೆಪಿಯಲ್ಲಿ ಒಗ್ಗಟ್ಟಾಗಿ ಒಬ್ಬ ಸಿಎಂ ಆಯ್ಕೆ ಮಾಡುತ್ತೇವೆ ಎಂದರು.

ಆನಂದ ಸಿಂಗ್‌ ಖಾತೆ ಕ್ಯಾತೆ :ಸಚಿವ ಆನಂದ್ ಸಿಂಗ್​ ಖಾತೆ ಕ್ಯಾತೆ ಯಾವುದು ಇಲ್ಲ. ಆನಂದ್‌ ಸಿಂಗ್‌ ಬಗ್ಗೆ ಸಿಎಂ ಅವರೊಂದಿಗೆ ನಾನೂ ರಾಜುಗೌಡ, ಶಂಕರ ಪಾಟೀಲ ಮುನೇನಕೊಪ್ಪ ಮಾತನಾಡಿದ್ದೇವೆ. ಸಿಎಂ ಅವರು ವರಿಷ್ಠರೊಂದಿಗೆ ಚರ್ಚಿಸಿ ಒಂದು ನಿರ್ಣಯಕ್ಕೆ ಬರುತ್ತಾರೆ. ಸದ್ಯದಲ್ಲಿ ಎಲ್ಲವೂ ಸರಿಯಾಗುತ್ತೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಇನ್ನೂ ಇದೇ ವೇಳೆ ತಮಗೆ ಸಚಿವ ಸ್ಥಾನದ ಬಗ್ಗೆ ಯಾವುದೇ ನಿರೀಕ್ಷೆ ಮಾಡುವುದಿಲ್ಲ ಎಂದರು.

ಇದನ್ನೂ ಓದಿ:ಮೈಸೂರು ರೋಡ್ ಟು ಕೆಂಗೇರಿ ಮೆಟ್ರೋ ಮಾರ್ಗ ಆ.29ರಿಂದ ಪ್ರಯಾಣಿಕರಿಗೆ ಮುಕ್ತ

Last Updated : Aug 21, 2021, 5:29 PM IST

ABOUT THE AUTHOR

...view details