ದಾವಣಗೆರೆ: ಮೇಲ್ಮನೆಯನ್ನು ಚಿಂತಕರ ಚಾವಡಿ, ಬುದ್ಧಿವಂತರ ಮನೆ ಎಂದು ಹೇಳುತ್ತಾರೆ. ಅಂತಹ ಸ್ಥಳದಲ್ಲಿ ಕಾಂಗ್ರೆಸ್ ಹಿರಿಯ ನಾಯಕ ಅಶ್ಲೀಲ ಚಿತ್ರವನ್ನು ನೋಡಿರುವುದನ್ನು ನಾನು ಖಂಡಿಸುತ್ತೇನೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಶಾಸಕ ರೇಣುಕಾಚಾರ್ಯ ಆಕ್ರೋಶ ಹೊರಹಾಕಿದರು.
ಮೇಲ್ಮನೆಯಲ್ಲಿ ಅಶ್ಲೀಲ ಚಿತ್ರ ನೋಡಿರುವುದು ಖಂಡನೀಯ: ರೇಣುಕಾಚಾರ್ಯ - ಬೈಕ್ ಹಾಗೂ ಟ್ರಾಕ್ಟರ್ ನಲ್ಲಿ ಮರಳು ಸಾಗಾಣಿಕೆ
ನಮ್ಮ ಪಕ್ಷದ ಶಾಸಕರಿಗೆ ಯಾರೋ ಕಳಿಸಿದ್ದು ಬಂದಿದ್ದನ್ನು ನೋಡಿದ್ದರು. ಅದನ್ನು ಕಾಂಗ್ರೆಸ್ನವರು ಬ್ಲೂ ಫಿಲ್ಮ್ ನೋಡಿದ್ರು ಅಂತ ಹೇಳಿದ್ದರು. ಈಗ ನಿಮ್ಮ ಪಕ್ಷದ ಹಿರಿಯ ನಾಯಕರು ನೋಡಿದ್ದಾರೆ. ಅದಕ್ಕೆ ಏನ್ ಆಂತೀರಾ ಸಿದ್ದರಾಮಯ್ಯ, ಡಿಕೆಶಿಯವರೇ ಎಂದು ಪ್ರಶ್ನಿಸಿದರು.
ದಾವಣಗೆರೆಯಲ್ಲಿ ಮಾತನಾಡಿದ ಅವರು, ನಮ್ಮ ಪಕ್ಷದ ಶಾಸಕರಿಗೆ ಯಾರೋ ಕಳಿಸಿದ್ದು ಬಂದಿದ್ದನ್ನು ನೋಡಿದ್ದರು. ಅದನ್ನು ಕಾಂಗ್ರೆಸ್ನವರು ಬ್ಲೂ ಫಿಲ್ಮ್ ನೋಡಿದ್ರು ಅಂತ ಹೇಳಿದ್ದರು. ಈಗ ನಿಮ್ಮ ಪಕ್ಷದ ಹಿರಿಯ ನಾಯಕರು ನೋಡಿದ್ದಾರೆ. ಅದಕ್ಕೆ ಏನ್ ಆಂತೀರಾ ಸಿದ್ದರಾಮಯ್ಯ, ಡಿಕೆಶಿಯವರೇ ಎಂದು ಪ್ರಶ್ನಿಸಿದರು.
ನಮ್ಮ ಪಕ್ಷದ ಸಚಿವರು ತಪ್ಪು ಮಾಡದಿದ್ದರೂ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ್ದರು. ಇದೀಗ ಯಾವ ಕ್ರಮ ಕೈಗೊಳ್ತಾರೆ ಎಂದು ಕಾಂಗ್ರೆಸ್ ನಾಯಕರಿಗೆ ರೇಣುಕಾಚಾರ್ಯ ಪ್ರಶ್ನಿಸಿದರು. ಇನ್ನು ಅಕ್ರಮ ಮರಳುಗಾರಿಕೆ ಬಗ್ಗೆ ಮಾತನಾಡಿದ ಅವರು, ಎತ್ತಿನ ಗಾಡಿ, ಬೈಕ್ ಹಾಗೂ ಟ್ರ್ಯಾಕ್ಟರ್ನಲ್ಲಿ ಮರಳು ಸಾಗಾಣಿಕೆ ಮಾಡಿದರೆ ಅದು ಅಕ್ರಮ ಅಲ್ಲ.
ರಾಜ್ಯ ಸರ್ಕಾರ ಮರಳು ನೀತಿ ಬದಲಾವಣೆ ಮಾಡಲಿದ್ದು, ಈ ವಿಚಾರವಾಗಿ ಸಚಿವ ಮುರಗೇಶ್ ನಿರಾಣಿ ಅವರ ಜೊತೆ ಮಾತಾಡಿರುವೆ. ಬಡ ರೈತರ ಎತ್ತಿನ ಗಾಡಿಯಲ್ಲಿ ಮರಳು ತೆಗೆದುಕೊಂಡು ಹೋಗುವುದು ಅಪರಾಧ ಆಗಬಾರದು. ನಮ್ಮ ಕ್ಷೇತ್ರದ ತುಂಗಭದ್ರಾ ನದಿಯಲ್ಲಿ ಎತ್ತಿನಗಾಡಿ, ಬೈಕ್, ಟ್ರ್ಯಾಕ್ಟರ್ನಲ್ಲಿ ಮರಳು ತೆಗೆದುಕೊಂಡು ಹೋದರೆ ಅಕ್ರಮ ಮರಳುಗಾರಿಕೆ ಅಲ್ಲ ಎಂದು ಶಾಸಕ ಎಂ.ಪಿ.ರೇಣುಕಾಚಾರ್ಯ ಸ್ಪಷ್ಟಪಡಿಸಿದರು.