ಕರ್ನಾಟಕ

karnataka

ETV Bharat / state

ಕಾಂಗ್ರೆಸ್​​ನವರು ಕರ್ನಾಟಕವನ್ನ ತಾಲಿಬಾನ್ ಮಾಡಲು ಹೊರಟಿದ್ದಾರೆ : ರೇಣುಕಾಚಾರ್ಯ ಆರೋಪ - ದಾವಣಗೆರೆಯಲ್ಲಿ ಶಾಸಕ ರೇಣುಕಾಚಾರ್ಯ ಹೇಳಿಕೆ

ವೋಟಿಗಾಗಿ ಕಾಂಗ್ರೆಸ್​​ನವರು ಮುಗ್ದ ಮಕ್ಕಳನ್ನು ಬಳಸಿಕೊಳ್ಳುತ್ತಿದ್ದಾರೆ. ಹಿಂದೂ-ಮುಸ್ಲಿಂ ಮಕ್ಕಳಲ್ಲಿ ಸಂಘರ್ಷ ಇಲ್ಲ, ಸಂಘರ್ಷ ಆದ್ರೆ ಕಾಂಗ್ರೆಸ್ ಕಾರಣ. ಕಾಂಗ್ರೆಸ್​​ನವರು ತಾಲಿಬಾನ್ ಮಾಡಲು ಹೊರಟಿದ್ದಾರೆ..

ರೇಣುಕಾಚಾರ್ಯ
ರೇಣುಕಾಚಾರ್ಯ

By

Published : Feb 6, 2022, 4:33 PM IST

Updated : Feb 6, 2022, 4:50 PM IST

ದಾವಣಗೆರೆ : ಹಿಜಾಬ್ ವಿವಾದ ಕುಂದಾಪುರದ ಆರು ವಿದ್ಯಾರ್ಥಿಗಳಿಂದ ಪ್ರಾರಂಭವಾಗಿದೆ. ಹಿಜಾಬ್ ವಿವಾದದ ಹಿಂದೆ ದೊಡ್ಡ ಷಡ್ಯಂತ್ರ ಇದೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಹಾಗೂ ಶಾಸಕ ಎಂ ಪಿ ರೇಣುಕಾಚಾರ್ಯ ಆಕ್ರೋಶ ವ್ಯಕ್ತಪಡಿಸಿದರು.

ಈ ಕುರಿತು ಹೊನ್ನಾಳಿಯಲ್ಲಿ ಪ್ರತಿಕ್ರಿಯಿಸಿದ ಅವರು, ಸಮವಸ್ತ್ರ ಧರಿಸುವಂತೆ ನಮ್ಮ ಸರ್ಕಾರ ಕಟ್ಟುನಿಟ್ಟಿನ ಆದೇಶ ನೀಡಿದೆ. ರಾಹುಲ್ ಗಾಂಧಿಯನ್ನು ಯಾವ ಬಾಯಲ್ಲಿ ರಾಷ್ಟ್ರೀಯ ನಾಯಕ ಎಂದು ಹೇಳುತ್ಥಾರೋ ಭಗವಂತನಿಗೆ ಗೊತ್ತು.

ಕರ್ನಾಟಕದಲ್ಲಿ ಆದ ಬೆಳವಣಿಗೆ ಬಗ್ಗೆ ಅವರು ಪ್ರತಿಕ್ರಿಯೆ ನೀಡುತ್ತಿದ್ದಾರೆ. ಇದರ ಹಿಂದೆ ರಾಜಕೀಯ ಷಡ್ಯಂತ್ರ ಇದೆ, ಅಂತಾರಾಷ್ಟ್ರೀಯ ಉಗ್ರಗಾಮಿಗಳ ಸಂಘಟನೆ ಇದರ ಹಿಂದೆ ಇದೆ ಎಂದು ದೂರಿದರು.

ಹಿಜಾಬ್‌-ಕೇಸರಿ ಶಾಲು ವಿವಾದದ ಕುರಿತಂತೆ ಶಾಸಕ ರೇಣುಕಾಚಾರ್ಯ ಮಾತನಾಡಿರುವುದು..

ವೋಟಿಗಾಗಿ ಕಾಂಗ್ರೆಸ್​​ನವರು ಮುಗ್ದ ಮಕ್ಕಳನ್ನು ಬಳಸಿಕೊಳ್ಳುತ್ತಿದ್ದಾರೆ. ಹಿಂದೂ-ಮುಸ್ಲಿಂ ಮಕ್ಕಳಲ್ಲಿ ಸಂಘರ್ಷ ಇಲ್ಲ, ಸಂಘರ್ಷ ಆದ್ರೆ ಕಾಂಗ್ರೆಸ್ ಕಾರಣ, ಕಾಂಗ್ರೆಸ್​​ನವರು ತಾಲಿಬಾನ್ ಮಾಡಲು ಹೊರಟಿದ್ದಾರೆ, ಇಲ್ಲಿರುವ ಮುಸ್ಲಿಮರನ್ನು ಪಾಕಿಸ್ತಾನದವರು ನಂಬಲ್ಲ.

ನಾವು ನಂಬಿ ಸಹೋದರರ ರೀತಿ ಬಾಳ್ವೆ ಮಾಡುತ್ತಿದ್ದೇವೆ. ನೀವು ಕರ್ನಾಟಕವನ್ನು ತಾಲಿಬಾನ್ ಮಾಡಲು ಹೊರಟರೇ ನಾವು ಸಹಿಸುವುದಿಲ್ಲ ಎಂದು ರೇಣುಕಾಚಾರ್ಯ ಕಾಂಗ್ರೆಸ್​​ಗೆ ಎಚ್ಚರಿಸಿದರು.

ಹೊನ್ನಾಳಿಯಲ್ಲಿ ಕೂಡ ಹಿಜಾಬ್ ಶುರುವಾಗಿದೆ :ಹೊನ್ನಾಳಿಯಲ್ಲಿ ಕೂಡ ಹಿಜಾಬ್ ಶುರುವಾಗಿದೆ. ಮುಂದೆ ಪ್ರತಿ ಹಳ್ಳಿಯಲ್ಲ ಪ್ರಾರಂಭವಾಗುತ್ತದೆ. ಹಿಂದೂ-ಮುಸ್ಲಿಂ ಹೊಡೆದಾಡಿದರೆ ಆಸ್ತಿ ನಷ್ಟ ಆಗುತ್ತದೆ, ಭಯೋತ್ಪಾದನೆ, ಉಗ್ರಗಾಮಿ ಸಂಘಟನೆ ಕಾಂಗ್ರೆಸ್​​ಗೆ ಬೆಂಬಲ ನೀಡಿ ಅಧಿಕಾರಕ್ಕೆ ತರಲು ಈ ರೀತಿ ಮಾಡುತ್ತಿದೆ. ಯು ಟಿ ಖಾದರ್, ತನ್ವೀರ್ ಸೇಠ್​​ರನ್ನು ದೇಶದ್ರೋಹದ ಕೇಸ್ ಹಾಕಿ ಪಾಕಿಸ್ತಾನಕ್ಕೆ ಕಳಿಸಬೇಕು ಎಂದರು.

ಸಚಿವಸ್ಥಾನ ಮೇಲೆ ನನಗೆ ಆಸೆ ಇಲ್ಲ :ಸಚಿವ ಸ್ಥಾನದ ಮೇಲೆ ನನಗೆ ಆಸೆ ಇಲ್ಲ, 13 ಜಿಲ್ಲೆಗಳಿಗೆ ಸಚಿವ ಸ್ಥಾನ ಸಿಕ್ಕಿಲ್ಲ, ಭೌಗೋಳಿಕ ಅಸಮತೋಲನ ಇದೆ. ಎಲ್ಲೆಲ್ಲಿ ಅಸಮತೋಲನ ಇದೆ ಅಲ್ಲಿ ಸಚಿವ ಸ್ಥಾನ ನೀಡಿ ಸರಿಪಡಿಸಬೇಕಿದೆ.

ಎಲ್ಲಾ ಶಾಸಕರು ಕೂಡ ರಾಜ್ಯದ ಮತ್ತು ಕೇಂದ್ರ ವರಿಷ್ಠರಿಗೆ ಮನವಿ ಮಾಡಿಕೊಂಡಿದ್ದೇವೆ, ನಾನು ನಾಳೆ ಸಿಎಂ ಜೊತೆ ದೆಹಲಿಗೆ ಹೊರಟಿದ್ದೇನೆ, ಅಲ್ಲಿ ವರಿಷ್ಠರನ್ನು ಭೇಟಿ ಮಾಡಿ ಪ್ರಾದೇಶಿಕ ಅಸಮತೋಲನದ ಬಗ್ಗೆ ಚರ್ಚೆ ಮಾಡುತ್ತೇನೆ ಎಂದರು.

ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ರಾಜಕೀಯ ಷಡ್ಯಂತ್ರ :ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ರಾಜಕೀಯ ಷಡ್ಯಂತ್ರ. ಇದರ ಹಿಂದೆ ಕಾಂಗ್ರೆಸ್​​ನ ಕೈವಾಡವಿದೆ. ಕಾಂಗ್ರೆಸ್​​ನ ಯಾವ ಯಾವ ಮುಖಂಡರು ಇದ್ದಾರೆ ಇದರ ಹಿಂದೆ ಎಂದು ರಾಜ್ಯದ ಜನತೆಗೆ ಗೊತ್ತಾಗಿದೆ. ಕೆಪಿಸಿಸಿ ಅಧ್ಯಕ್ಷರು ಯಾವ ರೀತಿ ಷ್ಯಡ್ಯಂತ್ರ ಮಾಡಿದ್ದಾರೆ ಎನ್ನುವುದು ಗೊತ್ತಿದೆ.

ಇದು ನಾಚಿಕೆಗೇಡಿನ ಸಂಗತಿ, ರಮೇಶ್ ಜಾರಕಿಹೊಳಿಗೆ ಸಚಿವ ಸ್ಥಾನದ ಬಗ್ಗೆ ರಾಜ್ಯ, ಕೇಂದ್ರ ವರಿಷ್ಠರು ನಿರ್ಣಯ ಮಾಡುತ್ತಾರೆ. ಮುಂದಿನ ಸಚಿವ ಸಂಪುಟದಲ್ಲಿ ಹೊಸ ಮುಖಗಳಿಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿದ್ದೇವೆ, ಇದರಿಂದ ಸಿಎಂಗೆ ಯಾವುದೇ ಮುಜುಗರ ಇಲ್ಲ ಎಂದರು.

Last Updated : Feb 6, 2022, 4:50 PM IST

For All Latest Updates

TAGGED:

ABOUT THE AUTHOR

...view details