ದಾವಣಗೆರೆ: ಪಂಚಮಸಾಲಿ ಸಮಾಜಕ್ಕೆ ನೀಡುವ ಮೀಸಲಾತಿಯ ಸಿಹಿ ಸುದ್ದಿ ಸಿಗುವ ಸಾಧ್ಯತೆ ಇಲ್ಲ ಎಂದು ಶಾಸಕ ಅರವಿಂದ್ ಬೆಲ್ಲದ್ ಭವಿಷ್ಯ ನುಡಿದರು.
ಶಾಸಕ ಅರವಿಂದ್ ಬೆಲ್ಲದ್ ಮಾತು ದಾವಣಗೆರೆಯ ಪಂಚಮಸಾಲಿ ಪ್ರತಿಜ್ಞಾ ಪಂಚಾಯತ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಸ್ತುತ ಸಂದರ್ಭದಲ್ಲಿ ಪಂಚಮಸಾಲಿ ಕೃಷಿಕ ವರ್ಗ ಸಂಕಷ್ಟದಲ್ಲಿದ್ದು, ಕೃಷಿ ಲಾಭದಾಯಕವಾಗಿ ಕಾರ್ಯವಾಗಿ ಉಳಿದಿಲ್ಲ. ಪಂಚಮಸಾಲಿಗಳ ಕೂಗು ವಿಧಾನಸಭೆಯನ್ನು ಅಲುಗಾಡಿಸಿದೆ. ಮೊದಲು ಪಂಚಮಸಾಲಿ ಸಮುದಾಯ ಗುರುತಿಸುವರು ಇರಲಿಲ್ಲ, ಇಂದು ದೆಹಲಿಯಲ್ಲೂ ಪಂಚಮಸಾಲಿಗಳನ್ನು ಗುರುತಿಸುವಂತಾಗಿದೆ, ಇದು ಬಸವ ಜಯಮೃತ್ಯುಂಜಯ ಶ್ರೀ ನಿರಂತರ ಹೋರಾಟದ ಪ್ರತಿಫಲ ಎಂದರು.
ನಾಳೆ ಸಿಹಿ ಸುದ್ದಿ ಸಿಗುವ ಸಾಧ್ಯತೆ ಇಲ್ಲ:
ನಾಳೆ ಸಿಹಿ ಸುದ್ದಿ ಸಿಗುವ ಸಾಧ್ಯತೆ ಇಲ್ಲ, ಕಾರಣ ಈ ಬಗ್ಗೆ ಕುಲಶಾಸ್ತ್ರ ಅಧ್ಯಯನ ನಡೆಬೇಕಿದೆ. ಈ ಬಗ್ಗೆ ಸರ್ಕಾರ, ಅಗತ್ಯ ಪ್ರಕ್ರಿಯೆ ನಡೆಸುತ್ತಿದೆ. ಈ ಬಗ್ಗೆ ನನಗೆ ಸರ್ಕಾರದ ಮೇಲೆ ಸಂಪೂರ್ಣ ನಂಬಿಕೆ ಇದೆ. ತಡವಾದ್ರೂ ಸರಿ, 2ಎ ಮೀಸಲಾತಿ ದೊರೆಯುತ್ತದೆ ಎಂದು ಭರವಸೆ ವ್ಯಕ್ತಪಡಿಸಿದರು.
ನಮ್ಮ ಶ್ರೀಗಳನ್ನು ನೋಯಿಸಿದವರು ಯಾರೂ ಬದುಕುಳಿದಿಲ್ಲ:
ನಮ್ಮ ಶ್ರೀಗಳನ್ನು ನೋಯಿಸಿದವರು ಯಾರೂ ಬದುಕುಳಿದಿಲ್ಲ ಎಂದು ಅಖಿಲ ಭಾರತ ಪಂಚಮಸಾಲಿ ಮಹಸಭಾ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್ ಹೇಳಿದರು. ಪಂಚಮಸಾಲಿ ಪ್ರತಿಜ್ಞಾ ಪಂಚಾಯತ್ ಕಾರ್ಯಕ್ರಮದಲ್ಲಿ ಮಾತನಾಡಿ,ಶಾಸಕ ಅರವಿಂದ ಬೆಲ್ಲದ್ ಅವರು ಭಾವಿ ಮುಖ್ಯಮಂತ್ರಿ ಎಂದು ಸಂಬೋಧಿಸಿದರು. ದೇಶದ ಹೆಬ್ಬುಲಿ ಬಸವನಗೌಡ ಯತ್ನಾಳ್ ಅವರು ಅನಾರೋಗ್ಯದ ಹಿನ್ನೆಲೆ ಕಾರ್ಯಕ್ರಮದಲ್ಲಿ ಭಾಗವಹಿಸಿಲ್ಲ, ಅಧಿವೇಶನದಲ್ಲಿ ಪಂಚಮಸಾಲಿ ಮೀಸಲಿಗೆ ಧ್ವನಿ ಎತ್ತಿದ್ದಾರೆ, ಉತ್ತರ ಪಡೆಯುವವರೆಗೆ ಪಟ್ಟು ಹಿಡಿದಿದ್ರು, ಬಿಎಸ್‌ವೈ ಅಧಿಕಾರದಲ್ಲಿದ್ದಾಗ ಭರವಸೆ ನೀಡಿದ ಹಿನ್ನೆಲೆಯಲ್ಲಿ ಶ್ರೀಗಳು ತಾತ್ಕಾಲಿಕವಾಗಿ ಹೋರಾಟ ಸ್ಥಗಿತಗೊಳಿಸಿದ್ರು ಎಂದರು.
ಮಾಜಿ ಸಚಿವ ವಿಜಯಾನಂದ ಕಾಶಪ್ಪನವರ್ ಸಂದರ್ಭ ಬಂದ್ರೆ ರಾಜಕೀಯ ಜೀವನ ತ್ಯಾಗ ಮಾಡ್ತೀನಿ:
ಸಂದರ್ಭ ಬಂದ್ರೆ ರಾಜಕೀಯ ಜೀವನ ತ್ಯಾಗ ಮಾಡ್ತೀನಿ ವಿನಃ ಸಮಾಜದ ಹಿತವನ್ನು ತ್ಯಾಗ ಮಾಡುವುದಿಲ್ಲ, ಮೀಸಲಾತಿ ಸಿಗುವವರೆಗೂ ಯಾವ ತ್ಯಾಗಕ್ಕಾದ್ರೂ ನಾವು ಸಿದ್ಧ, ಶ್ರೀಮಂತ ಪಂಚಮಸಾಲಿಗಳಿಗೆ 2ಎ ಮೀಸಲಾತಿ ಬೇಕಿಲ್ಲ,ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ಅಗತ್ಯವಿದೆ ಎಂದರು.