ದಾವಣಗೆರೆ :ಯುವಕನನ್ನು ಪ್ರೀತಿಸಿದ್ದ ಬಾಲಕಿಯೋರ್ವಳು ಮದುವೆಯಾಗುವಂತೆ ಒತ್ತಾಯಿಸುತ್ತಿದ್ದ ಆತನ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಬಾಲಕಿ ಮನೆಯಲ್ಲಿ ಬೇರೊಬ್ಬನೊಂದಿಗೆ ಮದುವೆ ಮಾಡಲು ಆಕೆಯನ್ನು ಒಪ್ಪಿಸಿದ್ದರು. ಈ ವಿಚಾರ ತಿಳಿದ ಯುವಕ ಬಾಲಕಿಗೆ ಮದುವೆಯಾಗುವಂತೆ ಕಿರುಕುಳ ನೀಡಿದ್ದಾನೆ ಎನ್ನಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ.
ದಾವಣಗೆರೆ ಹೊರವಲಯದಲ್ಲಿ ಪೋಷಕರೊಂದಿಗೆ ವಾಸವಿದ್ದ ಬಾಲಕಿಗೆ ಅದೇ ಪ್ರದೇಶದ ಯುವಕನೊಂದಿಗೆ ಪರಿಚಯವಾಗಿ, ಬಳಿಕ ಅದು ಪ್ರೇಮಕ್ಕೆ ತಿರುಗಿತ್ತು. ಇವರಿಬ್ಬರ ಪ್ರೀತಿ ವಿಚಾರ ಬಾಲಕಿಯ ಮನೆಯವರಿಗೆ ಗೊತ್ತಾಗಿದೆ. ನಂತರ ಬಾಲಕಿಯ ತಂದೆ ಬುದ್ದಿವಾದ ಹೇಳಿದ್ದು, ಕೆಲ ತಿಂಗಳು ಪ್ರೇಮಿಗಳು ದೂರವಾಗಿದ್ದರು.