ದಾವಣಗೆರೆ: ಸಿದ್ದರಾಮಯ್ಯ ಅವರು ಜಿಂದಾಲ್ ಪ್ರಕೃತಿ ಚಿಕಿತ್ಸೆಗೆ ತೆರಳುತ್ತಿದ್ದಾರೆ. ಅಲ್ಲಿಂದ ಬಂದ ಮೇಲಾದ್ರೂ ಅರಿತು ಮಾತನಾಡಲಿ ಎಂದು ಸಚಿವ ವಿ ಸೋಮಣ್ಣ ಸರ್ಕಾರ ಟೇಕಾಫ್ ಆಗಿಲ್ಲ ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಕ್ಕೆ ಟಾಂಗ್ ನೀಡಿದರು.
ಸಿದ್ದರಾಮಯ್ಯ ವಿರುದ್ಧ ಸಚಿವ ವಿ ಸೋಮಣ್ಣ ಪ್ರತಿಕ್ರಿಯೆ ನೀಡಿರುವುದು.. ನಗರದಲ್ಲಿ ಮಾತನಾಡಿದ ಅವರು, ವಿಪಕ್ಷ ನಾಯಕ ಸಿದ್ದರಾಮಯ್ಯ ಚಿಕಿತ್ಸೆ ಪಡೆದ ಮೇಲಾದ್ರೂ ಸರಿಯಾಗಿ ಮಾತನಾಡೋದು ಕಲಿಯಲಿ. ಸಿಎಂ ಬಸವರಾಜ್ ಬೊಮ್ಮಾಯಿ ಟೇಕಾಫ್ ಆಗ್ತಾ ಇದ್ದಾರೆ, ಎಲ್ಲವನ್ನು ನಿಭಾಯಿಸಿ ಕೆಲಸ ಮಾಡುತ್ತಿದ್ದಾರೆ.
ವಿರೋಧ ಪಕ್ಷದವರು ಸುಖಾಸುಮ್ಮನೆ ಹೇಳ್ತಾನೆ ಇರ್ತಾರೆ. ನಾವು ನಮ್ಮ ಕೆಲಸ ಮಾಡ್ತೇವೆ, 20 ತಿಂಗಳ ನಂತರ ಜನಾದೇಶ ಬರುತ್ತೆ, ಜನ ತೀರ್ಮಾನ ಮಾಡ್ತಾರೆ. ನಾವು ನಿಂತ ನೀರಲ್ಲ, ಕೆಲಸ ಮಾಡ್ತಾನೇ ಇದೀವಿ ಎಂದರು.
ಜಾತಿ ಗಣತಿ ಚರ್ಚೆ :ಸಿದ್ದರಾಮಯ್ಯನವರೇ ಜಾತಿ ಗಣತಿ ಮಾಡಿದ್ದು, ಬಳಿಕ ವರದಿ ಬರದಂತೆ ಅವರೇ ನೋಡ್ಕೊಂಡ್ರು, ಇದರಿಂದ ನಮಗೇನು ತೊಂದರೆ ಇಲ್ಲ, ಎಲ್ಲಾ ವರ್ಗದ ಬಡವರಿಗೆ ನೋವಾಗದಂತೆ ಬುದ್ಧಿವಂತಿಕೆಯಿಂದ ಸಿಎಂ ಬಸವರಾಜ್ ಬೊಮ್ಮಾಯಿ ನೆರವಾಗಲಿ ಎಂದರು.
ಇದನ್ನೂ ಓದಿ:ಶಿಕ್ಷಕರಿಗೆ ಇನ್ನೂ ಲಸಿಕೆಯ ಸೆಕೆಂಡ್ ಡೋಸ್ ಏಕೆ ಕೊಡಿಸಿಲ್ಲ : ಶಾಸಕ ಸಿ.ಎಸ್. ಪುಟ್ಟರಾಜು ಆಕ್ರೋಶ
ಜನಾರ್ದನ್ ರೆಡ್ಡಿ ಬಳ್ಳಾರಿಗೆ ತೆರಳಲು ಕೋರ್ಟ್ ಅನುಮತಿ:ಮಾಜಿ ಸಚಿವ ಜನಾರ್ದನ ರೆಡ್ಡಿ ಬಳ್ಳಾರಿಗೆ ಹೋಗ್ಬರೋದು ತಪ್ಪಾ, ಕೋರ್ಟ್ ಅವಕಾಶ ನೀಡಿದೆ. ಅವರು ಕಳೆದ ದಿನ ಕುಟುಂಬ ಸಮೇತ ಮಹಾಲಕ್ಷ್ಮಿ ಹಬ್ಬ ಮಾಡಿದ್ದಾರೆ.
ಕೋರ್ಟ್ ತುಂಬಾ ವರ್ಷಗಳ ಬಳಿಕ ಬಳ್ಳಾರಿಗೆ ತೆರಳಲು ಎರಡು ತಿಂಗಳು ಅವಕಾಶ ನೀಡಿದೆ. ಮುಂದಿನ ದಿನಗಳಲ್ಲಿ ಅಲ್ಲೇ ನೆಲೆಸಲು ಕೋರ್ಟ್ ಅವಕಾಶ ನೀಡಲಿ. ಅವರು ನಮ್ಮ ಆತ್ಮೀಯರು, ಪಕ್ಷಕ್ಕೆ ಬರುವುದರ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತೆ ಎಂದರು.