ಕರ್ನಾಟಕ

karnataka

ETV Bharat / state

ವಾಲ್ಮೀಕಿ ಸಮುದಾಯಕ್ಕೆ ಮೀಸಲಾತಿ ಕುರಿತು ಸಚಿವ ಶ್ರೀರಾಮುಲು ಪ್ರತಿಕ್ರಿಯೆ - ಸಚಿವ ಶ್ರೀರಾಮಲು

ಮೀಸಲಾತಿ ಹೆಚ್ಚಿಸಬೇಕು ಎಂದು ಸಮುದಾಯ ನಿರೀಕ್ಷಿಸಿದೆ, 7.5 ಮೀಸಲಾತಿ ಕೊಡಬೇಕು. ಪರಿಶಿಷ್ಟ ಜಾತಿ ಮೀಸಲಾತಿಯನ್ನು ಶೇ. 17ಕ್ಕೆ ಹೆಚ್ಚಿಸಬೇಕು ಎಂಬ ಬೇಡಿಕೆ ಇದ್ದು, ಅದಕ್ಕಾಗಿ ಸಬ್ ಕಮಿಟಿ ರಚನೆ ಮಾಡಲಾಗಿದೆ ಎಂದಿದ್ದಾರೆ.

MInister Sriramulu
ಸಚಿವ ಶ್ರೀರಾಮಲು

By

Published : Feb 9, 2021, 3:26 PM IST

ದಾವಣಗೆರೆ:ಈ ಸಮಾವೇಶದಲ್ಲಿ ವಾಲ್ಮೀಕಿ ಸಮುದಾಯಕ್ಕೆ 7.5ರಷ್ಟು ಮೀಸಲಾತಿ ಘೋಷಣೆಯಾಗುವುದಿಲ್ಲ ಎಂದು ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ತಿಳಿಸಿದ್ದಾರೆ. ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿ ವಾಲ್ಮೀಕಿ ಮಠದಲ್ಲಿ ಅವರು ಮಾತನಾಡಿದರು.

ಮೀಸಲಾತಿ ಹೆಚ್ಚಿಸಬೇಕು ಎಂದು ಸಮುದಾಯ ನಿರೀಕ್ಷಿಸಿದೆ. 7.5 ಮೀಸಲಾತಿ ಕೊಡಬೇಕು. ಪರಿಶಿಷ್ಟ ಜಾತಿ ಮೀಸಲಾತಿಯನ್ನು ಶೇ. 17ಕ್ಕೆ ಹೆಚ್ಚಿಸಬೇಕು ಎಂಬ ಬೇಡಿಕೆ ಇದ್ದು, ಅದಕ್ಕಾಗಿ ಸಬ್ ಕಮಿಟಿ ರಚನೆ ಮಾಡಲಾಗಿದೆ.

ವಾಲ್ಮೀಕಿ ಸಮಾಜದ ಮೀಸಲಾತಿ ಕುರಿತು ಸಚಿವರ ಪ್ರತಿಕ್ರಿಯೆ

ಪರಿಶಿಷ್ಟ ಜಾತಿಗೆ 17ರಷ್ಟು ಮೀಸಲಾತಿ ಹಾಗೂ ವಾಲ್ಮೀಕಿ ಸಮುದಾಯಕ್ಕೆ ಶೇ. 7.5ರಷ್ಟು ಮೀಸಲಾತಿ ನೀಡಲು ಸರ್ಕಾರ ಬದ್ಧವಾಗಿದೆ. ನಾನೇ ಸಬ್ ಕಮಿಟಿ ಚೇರ್ಮನ್ ಆಗಿರುವುದರಿಂದ ರಿಪೋರ್ಟ್ ಕೊಟ್ಟಿಲ್ಲ. ನಾನು ಎಲ್ಲಿಯವರೆಗು ವರದಿ ಕೊಡುವುದಿಲ್ವೋ ಅಲ್ಲಿಯವರೆಗು ಮೀಸಲಾತಿ ಘೋಷಣೆಯಾಗುವುದಿಲ್ಲ. ನಾನು ಇನ್ನು ಎರಡು ಮೂರು ಮೀಟಿಂಗ್ ಮಾಡಿ ನಂತರ ವರದಿ ಕ್ಯಾಬಿನೆಟ್ ಮುಂದಿಡುತ್ತೇನೆ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ:ದೆಹಲಿಯಲ್ಲಿ ನಕಲಿ ರೈತರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ: ಸಚಿವ ಈಶ್ವರಪ್ಪ ಆರೋಪ

ABOUT THE AUTHOR

...view details