ದಾವಣಗೆರೆ:ನಮ್ಮ ಜೊತೆ ಬಂದವರಿಗೆಲ್ಲಾ ಸಚಿವ ಸ್ಥಾನ ಸಿಗುತ್ತದೆ. ನಮ್ಮ ಜೊತೆ ಬಂದ 17 ಜನರಲ್ಲಿ ಯಾರನ್ನೂ ಸಿಎಂ ಯಡಿಯೂರಪ್ಪ ಕೈ ಬಿಡುವುದಿಲ್ಲ ಎಂಬ ವಿಶ್ವಾಸ ಇದೆ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ವಿಶ್ವಾಸ ವ್ಯಕ್ತಪಡಿಸಿದರು.
ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿ ವಾಲ್ಮೀಕಿ ಗುರು ಪೀಠದಲ್ಲಿ ಮಾತನಾಡಿದ ಅವರು, ಯಡಿಯೂರಪ್ಪನವರೇ ಎರಡೂವರೆ ವರ್ಷ ಸಿಎಂ ಆಗಿರುತ್ತಾರೆ. ಖಾತೆ ಬದಲಾವಣೆ, ವಿಸ್ತರಣೆ, ಪುನಾರಚನೆಗೆ ಸಿಎಂ ಗೆ ಪರಮಾಧಿಕಾರ ಇದೆ. ಇದೇ ತಿಂಗಳು 13 ಅಥವಾ 14 ಕ್ಕೆ ಸಚಿವ ಸಂಪುಟ ವಿಸ್ತರಣೆಯಾಗುತ್ತೆ ಎಂದರು.
ಶಾಸಕ ಯತ್ನಾಳ್ ಬಗ್ಗೆ ಮಾತನಾಡಲು ನಿರಾಕರಿಸಿದ ಸಚಿವರು, ಯತ್ನಾಳ್ ಹೇಳಿಕೆ ಅವರ ವೈಯಕ್ತಿಕ. ಅದರ ಬಗ್ಗೆ ಹೆಚ್ಚು ಪ್ರತಿಕ್ರಿಯೆ ಕೊಡುವುದಿಲ್ಲ ಎಂದು ಹೇಳಿದರು.
ಇದನ್ನೂ ಓದಿ: ಅನುಭವದ ಅಂಟಿಂದ ರಾಜಾಹುಲಿ ಕುರ್ಚಿ ಗಟ್ಟಿ.. ಉಡುಗಿದ 'ಭಿನ್ನ'ರಾಗ, ಸಂಪುಟ ವಿಸ್ತರಣೆ ದಾರಿ ಸರಾಗ!!
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾತನಾಡಿ, ಸತೀಶ್ ಜಾರಕಿಹೊಳಿ ಸಿಎಂ ಆಗುತ್ತಾರೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, 2023 ರ ವರೆಗೆ ಬಿಜೆಪಿ ಸರ್ಕಾರ ಇರುತ್ತದೆ. ಮುಂದೆ ಕಾಂಗ್ರೆಸ್ ಸರ್ಕಾರ ಬಂದರೆ ನೋಡೋಣ ಎಂದು ಕಿರುನಗೆ ಬೀರಿದರು.