ಕರ್ನಾಟಕ

karnataka

ETV Bharat / state

ಹೈಕಮಾಂಡ್​​ ಏನು ತೀರ್ಮಾನ ತೆಗೆದುಕೊಳ್ಳುತ್ತೋ ಅದೇ ಫೈನಲ್‌ : ಸಚಿವ ಕೆ ಎಸ್ ಈಶ್ವರಪ್ಪ - ದಾವಣಗೆರೆಯಲ್ಲಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿಕೆ

ಹಾಲುಮತ ಮಹಾಸಭಾದಿಂದ ಈಶ್ವರಪ್ಪ ಸಿಎಂ ಆಗಲಿ ಎಂದು ಕುರುಬ ಸಮುದಾಯ ಮಾಡುತ್ತಿರುವ ಲಾಬಿ ಬಗ್ಗೆ ಪ್ರತಿಕ್ರಿಯಿಸಿದ ಅವರು, ನನ್ನ ಬಗ್ಗೆ ಆಸಕ್ತಿ ಹಾಗೂ ಪ್ರೀತಿಯಿಂದ ಕೇಳುತ್ತಾರೆ, ಅವರು ನನ್ನ ಮೇಲೆ ಇಟ್ಟಿರುವ ಪ್ರೀತಿಗೆ ಸಂತೋಷ ಪಡುತ್ತೇನೆ. ಇಂಥ ಪ್ರಯತ್ನ ಮಾಡಬೇಡಿ ಎಂದು ನಾನು ಹೇಳುತ್ತೇನೆ, ಕೇಂದ್ರದ ನಾಯಕರು ಏನು ತೀರ್ಮಾನ ಕೈಗೊಳ್ಳುತ್ತಾರೆಯೋ ಅದಕ್ಕೆ ರಾಜ್ಯದ ಎಲ್ಲಾ ಕಾರ್ಯಕರ್ತರು ಬದ್ಧ..

ಕೆ.ಎಸ್. ಈಶ್ವರಪ್ಪ
ಕೆ.ಎಸ್. ಈಶ್ವರಪ್ಪ

By

Published : Jul 23, 2021, 5:16 PM IST

Updated : Jul 23, 2021, 7:39 PM IST

ದಾವಣಗೆರೆ : ಸಿಎಂ ಯಡಿಯೂರಪ್ಪ ಹಾಗೂ ಕೇಂದ್ರದ ವರಿಷ್ಠರು ಏನು ತೀರ್ಮಾನ ಕೈಗೊಳ್ಳುತ್ತಾರೋ ಅದೇ ಫೈನಲ್‌. ಇನ್ನು, ಸಿಎಂ ಬದಲಾವಣೆ ತಮ್ಮ ಪ್ರಯತ್ನದ ಫಲ ಎನ್ನುತ್ತಿರುವ ಸಿಪಿವೈ, ಯತ್ನಾಳ್‌ ರವರು ಏನಾದ್ರೂ ಹೇಳಿಕೊಳ್ಳಲಿ, ನಾನು ಏನು ಮಾಡೋಕೆ ಆಗೋದಿಲ್ಲ. ಈ ಬಗ್ಗೆ ರಾಷ್ಟ್ರೀಯ ನಾಯಕರು ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪ ಹೇಳಿದ್ದಾರೆ.

ದಾವಣಗೆರೆಯಲ್ಲಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿಕೆ

ನಗರದಲ್ಲಿಂದು ರಾಜ್ಯದ ನಾಯಕತ್ವದ ಬದಲಾವಣೆ ಕುರಿತು ಮಾತನಾಡಿದ ಅವರು, ಲಿಂಗಾಯತ ಅಥವ ನಾನ್‌ ಲಿಂಗಾಯತ್‌ ಸಿಎಂ ಎಂಬುದು ಮಾಧ್ಯಮಗಳಲ್ಲಿ ಸೃಷ್ಟಿಯಾಗಿದ್ದು, ರಾಜ್ಯದ ಪ್ರಮುಖರು ಮುಖ್ಯಮಂತ್ರಿ ಆಗುತ್ತಾರೆ ಎಂದು ಸ್ಪಷ್ಟಪಡಿಸಿದರು.

ಇನ್ನು, ಹಾಲುಮತ ಮಹಾಸಭಾದಿಂದ ಈಶ್ವರಪ್ಪ ಸಿಎಂ ಆಗಲಿ ಎಂದು ಕುರುಬ ಸಮುದಾಯ ಮಾಡುತ್ತಿರುವ ಲಾಬಿ ಬಗ್ಗೆ ಪ್ರತಿಕ್ರಿಯಿಸಿದ ಅವರು, ನನ್ನ ಬಗ್ಗೆ ಆಸಕ್ತಿ ಹಾಗೂ ಪ್ರೀತಿಯಿಂದ ಕೇಳುತ್ತಾರೆ, ಅವರು ನನ್ನ ಮೇಲೆ ಇಟ್ಟಿರುವ ಪ್ರೀತಿಗೆ ಸಂತೋಷ ಪಡುತ್ತೇನೆ.

ಇಂಥ ಪ್ರಯತ್ನ ಮಾಡಬೇಡಿ ಎಂದು ನಾನು ಹೇಳುತ್ತೇನೆ, ಕೇಂದ್ರದ ನಾಯಕರು ಏನು ತೀರ್ಮಾನ ಕೈಗೊಳ್ಳುತ್ತಾರೆಯೋ ಅದಕ್ಕೆ ರಾಜ್ಯದ ಎಲ್ಲಾ ಕಾರ್ಯಕರ್ತರು ಬದ್ಧ ಎಂದು ಸಚಿವ ಕೆ ಎಸ್ ಈಶ್ವರಪ್ಪ ಸ್ಪಷ್ಟಪಡಿಸಿದರು.

ಇದನ್ನೂ ಓದಿ : ಹೈಕಮಾಂಡ್ ಜೊತೆಗಿನ ಒಪ್ಪಂದದಂತೆ ಬಿಎಸ್‌ವೈ ರಾಜೀನಾಮೆ : ಸಂಸದ ಶ್ರೀನಿವಾಸಪ್ರಸಾದ್ ಹೇಳಿಕೆ

Last Updated : Jul 23, 2021, 7:39 PM IST

ABOUT THE AUTHOR

...view details