ದಾವಣಗೆರೆ : ಸಿದ್ದರಾಮಯ್ಯ ಅವರಂತಹ ಮೋಸಗಾರ ಇನ್ನೊಬ್ಬ ಇಲ್ಲ, ಸಿದ್ದರಾಮಯ್ಯರ ಕಣ ಕಣದಲ್ಲೂ ಮೋಸ ಇದೆ, ದೇವೇಗೌಡರಿಗೆ ಮೋಸ ಮಾಡಿ ಕಾಂಗ್ರೆಸ್ಗೆ ಬಂದರೂ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆಎಸ್ ಈಶ್ವರಪ್ಪ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.
ಜಿಲ್ಲೆಯ ಹೊನ್ನಾಳಿ ತಾಲೂಕಿನ ಕುಂದೂರು ಗ್ರಾಮದಲ್ಲಿ ಹಮ್ಮಿಕೊಂಡಿದ್ದ ವಿಧಾನ ಪರಿಷತ್ ಚುನಾವಣೆ ಪ್ರಚಾರ ಸಭೆಯಲ್ಲಿ ಭಾಗಿಯಾಗುವ ಮುನ್ನ ಮಾತನಾಡಿದ ಅವರು, ಸಿದ್ದರಾಮಯ್ಯ ಇನ್ಯಾವುದೋ ಪಕ್ಷ ಕಟ್ಟಿ ಮೋಸ ಮಾಡಿ ಬಂದರು, ವಿರೋಧ ಪಕ್ಷ ಸ್ಥಾನ ಇಲ್ಲ ಅಂದರೆ ಕಾಂಗ್ರೆಸ್ನಲ್ಲೂ ಅವರು ಇರುತ್ತಿರಲ್ಲ. ಕಾಂಗ್ರೆಸ್ ಪಕ್ಷ ಕಟ್ಟಲು ಬಂದಿಲ್ಲ, ಅಹಿಂದ ಬಳಸಿ ಮೋಸ ಮಾಡಲು ಬಂದಿದ್ದಾರೆ. ಮಾಜಿ ಸಚಿವ ಬಿಬಿ ಚಿಮ್ಮನ ಕಟ್ಟಿ ಅವರಿಗೆ ಎಂಎಲ್ಸಿ ಮಾಡುತ್ತೇವೆ ಅಂದು ಬಾದಾಮಿ ಕ್ಷೇತ್ರ ಕಸಿದುಕೊಂಡು ಮೋಸ ಮಾಡಿದರು ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ಗೆ ತಂದ ಎಚ್ ಎಂ ರೇವಣ್ಣ, ವಿಶ್ವನಾಥ್ ಗತಿ ಏನಾಗಿದೆ, ಮುಂದಿನ ದಿನಗಳಲ್ಲಿ ಇವರಿಗೆ ಚಾಮುಂಡೇಶ್ವರಿ ಕ್ಷೇತ್ರನೂ ಇಲ್ಲ, ಬಾದಾಮಿ ಕ್ಷೇತ್ರದಲ್ಲಿ ಚುನಾವಣೆ ಸ್ಪರ್ಧಿಸಲು ಅವಕಾಶ ಇರಲ್ಲ. ಆಗ ಚಾಮರಾಜಪೇಟೆಯಲ್ಲಿ ಚುನಾವಣೆ ಸ್ಪರ್ಧಿಸಲು ಜಮೀರ್ ಕೈ ಕಾಲು ಹಿಡಿಯಬೇಕು ಅವರಿಗೆ ಮುಸ್ಲಿಮರ ಮತಗಳೇ ಗತಿಯಾಗಲಿದ್ದು, ಜನ ಸಿದ್ದರಾಮಯ್ಯ ಅವರನ್ನ ನಂಬಲ್ಲ ಎಂದರು.
ಡಿಕೆಶಿ ಹೇಳಿಕೆಗೆ ಈಶ್ವರಪ್ಪ ಗರಂ :