ಕರ್ನಾಟಕ

karnataka

ETV Bharat / state

ನಾವು 17 ಜನ ಪರೀಕ್ಷೆ ಬರೆದು ಪಾಸ್​ ಆಗಿದ್ದೇವೆ, ಅವರು ಯಾವ ಎಕ್ಸಾಂ ಬರೆದಿದ್ದಾರೆ ಗೊತ್ತಿಲ್ಲ : ಸಚಿವ ಕೆ. ಸುಧಾಕರ್ - ಸಚಿವ ಸುಧಾಕರ್

ರಮೇಶ್ ಜಾರಕಿಹೊಳಿ, ಮುನಿರತ್ನ ಅವರಿಗೆ ಸಚಿವ ಸ್ಥಾನ ಕೊಡೋದರ ಬಗ್ಗೆ ಸಿಎಂ ನಿರ್ಧಾರ ಮಾಡ್ತಾರೆ. ರಮೇಶ್ ಜಾರಕಿಹೊಳಿ ರಾಜೀನಾಮೆ ಕೊಡಲ್ಲ ಅಂತಾ ಹೇಳಿದ್ದೆ, ಕೊಟ್ಟಿಲ್ಲ ಎಂದು ಸ್ಪಷ್ಟಪಡಿಸಿದರು. ಲಸಿಕೆ ಹೆಚ್ಚು ನೀಡಿ ಎಂದು ಕೇಳುವುದಕ್ಕೆಕ್ಕೆ ನಾನು ದೆಹಲಿ‌ಗೆ ಹೋಗಿದ್ದೆ, ದೆಹಲಿಗೆ ಹೋಗಿದ್ದರ ಬಗ್ಗೆ ಬೇರೆ ಅರ್ಥ ಕಲ್ಪಿಸುವುದು ಬೇಡ..

ಸಿ.ಪಿ. ಯೋಗೇಶ್ವರ್​ಗೆ ಪರೋಕ್ಷವಾಗಿ ಟಾಂಗ್ ಕೊಟ್ಟ ಸಚಿವ ಸುಧಾಕರ್
ಸಿ.ಪಿ. ಯೋಗೇಶ್ವರ್​ಗೆ ಪರೋಕ್ಷವಾಗಿ ಟಾಂಗ್ ಕೊಟ್ಟ ಸಚಿವ ಸುಧಾಕರ್

By

Published : Jul 10, 2021, 5:50 PM IST

ದಾವಣಗೆರೆ :ನಾವು 17 ಜನ ರಾಜೀನಾಮೆ ಕೊಟ್ಟು ಪರೀಕ್ಷೆ ಬರೆದಿದ್ದೆವು. ಅವರು ಯಾವ ಎಕ್ಸಾಂ ಬರೆದಿದ್ದಾರೆಯೋ ಗೊತ್ತಿಲ್ಲ ಎಂದು ಆರೋಗ್ಯ ಸಚಿವ ಸುಧಾಕರ್ ಅವರು ಸಚಿವ ಸಿ ಪಿ ಯೋಗೇಶ್ವರ್​ಗೆ ಅವರಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ.

ಪರೀಕ್ಷೆ ಬರೆದಿದ್ದೀವಿ, ಫಲಿತಾಂಶಕ್ಕೆ ಕಾಯುತ್ತಿದ್ದೇವೆ ಎಂಬ ಸಚಿವ ಯೋಗೇಶ್ವರ್ ಹೇಳಿಕೆಗೆ ಪ್ರತಿಕ್ರಿಸಿದ ಅವರು, ನಾವು 17 ಜನ ರಾಜೀನಾಮೆ ಕೊಟ್ಟು ಪರೀಕ್ಷೆ ಬರೆದಿದ್ದೆವು. ಬಳಿಕ ಪಾಸ್ ಆಗಿ ಸಚಿವರಾಗಿದ್ದೇವೆ, ಯೋಗೇಶ್ವರ್ ಯಾವ ಪರೀಕ್ಷೆ ಬರೆದಿದ್ದಾರೋ ಗೊತ್ತಿಲ್ಲ ಎಂದು ಸುಧಾಕರ್ ವ್ಯಂಗ್ಯವಾಡಿದರು.

ಸಿ.ಪಿ. ಯೋಗೇಶ್ವರ್​ಗೆ ಪರೋಕ್ಷವಾಗಿ ಟಾಂಗ್ ಕೊಟ್ಟ ಸಚಿವ ಸುಧಾಕರ್

ಇನ್ನು, ರಮೇಶ್ ಜಾರಕಿಹೊಳಿ, ಮುನಿರತ್ನ ಅವರಿಗೆ ಸಚಿವ ಸ್ಥಾನ ಕೊಡೋದರ ಬಗ್ಗೆ ಸಿಎಂ ನಿರ್ಧಾರ ಮಾಡ್ತಾರೆ. ರಮೇಶ್ ಜಾರಕಿಹೊಳಿ ರಾಜೀನಾಮೆ ಕೊಡಲ್ಲ ಅಂತಾ ಹೇಳಿದ್ದೆ, ಕೊಟ್ಟಿಲ್ಲ ಎಂದು ಸ್ಪಷ್ಟಪಡಿಸಿದರು. ಲಸಿಕೆ ಹೆಚ್ಚು ನೀಡಿ ಎಂದು ಕೇಳುವುದಕ್ಕೆಕ್ಕೆ ನಾನು ದೆಹಲಿ‌ಗೆ ಹೋಗಿದ್ದೆ, ದೆಹಲಿಗೆ ಹೋಗಿದ್ದರ ಬಗ್ಗೆ ಬೇರೆ ಅರ್ಥ ಕಲ್ಪಿಸುವುದು ಬೇಡ. 250 ಪಿಹೆಚ್‌ಸಿ ಮೇಲ್ದರ್ಜೆಗೆ ಏರಿಸಲಾಗುವುದು, ಐದು ವರ್ಷದಲ್ಲಿ ಮೇಲ್ದರ್ಜೆಗೇರಿಸುವ ಉದ್ದೇಶ ಹೊಂದಲಾಗಿದೆ. ಇದರ ಬಗ್ಗೆ ಚರ್ಚಿಸಲು ದೆಹಲಿಗೆ ತೆರಳಿದ್ದೆ ಎಂದರು.

ಲಸಿಕೆ ಸುಳ್ಳು ಲೆಕ್ಕ ಕೊಡ್ತಿದ್ದಾರೆ ಎಂಬ ಸಿದ್ದರಾಮಯ್ಯ ಆರೋಪ‌ಕ್ಕೆ‌ ಪ್ರತಿಕ್ರಿಯೆ ನೀಡಿದ ಅವರು, ಕರ್ನಾಟಕಕ್ಕೆ ಎರಡುವರೆ ಕೋಟಿ‌ ಲಸಿಕೆ ಸುಳ್ಳು ಲೆಕ್ಕಾನಾ, ದೇಶದಲ್ಲಿ 38 ಕೋಟಿ ಜನಕ್ಕೆ ಲಸಿಕೆ ನೀಡಲಾಗಿದ್ದು, ಅಮೆರಿಕದಲ್ಲಿ ಎಷ್ಟು ಕೊಟ್ಟಿದ್ದಾರೆ ಕೇಳಿ ಒಮ್ಮೆ, ಸಿದ್ದರಾಮಯ್ಯಗೆ ಸುಳ್ಳು ಲೆಕ್ಕ ಹೇಳೋ ಅಭ್ಯಾಸ ಇರಬೇಕು ಎಂದು ಟಾಂಗ್ ಕೊಟ್ಟರು.

ABOUT THE AUTHOR

...view details