ಕರ್ನಾಟಕ

karnataka

ETV Bharat / state

ಚಡ್ಡಿ ತಂಟೆಗೆ ಬಂದ್ರೆ ಸರ್ವನಾಶ ಆಗ್ತಾರೆ : ಕಾಂಗ್ರೆಸ್ ನಾಯಕರ ವಿರುದ್ಧ ಸಚಿವ ಭೈರತಿ ಗರಂ - Minister of Urban Development Bharathi Basavaraj statement against Siddaramaiahs campaing

ಸಿದ್ದರಾಮಯ್ಯ ಅವರ ಚಡ್ಡಿ ಸುಡುವ ಅಭಿಯಾನಕ್ಕೆ ಕಿಡಿಕಾರಿರುವ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಅವರು ಚಡ್ಡಿಯ ವಿಷಯಕ್ಕೆ ಬಂದರೆ ಸರ್ವನಾಶ ಆಗುತ್ತಾರೆ ಎಂದು ಹೇಳಿದ್ದಾರೆ..

minister-bharathi-basavaraj-statement-against-siddaramaiahs-campaign
ಚಡ್ಡಿ ತಂಟಗೆ ಬಂದ್ರೆ ಸರ್ವನಾಶ ಆಗ್ತಾರೆ: ಕಾಂಗ್ರೆಸ್ ನಾಯಕರ ವಿರುದ್ಧ ಭೈರತಿ ಗರಂ...!

By

Published : Jun 5, 2022, 3:15 PM IST

ದಾವಣಗೆರೆ : ಚಡ್ಡಿಯ ವಿಷಯಕ್ಕೆ ಬಂದರೆ ಸರ್ವನಾಶ ಆಗುತ್ತಾರೆ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಕಾಂಗ್ರೆಸ್ ನಾಯಕರ ವಿರುದ್ಧ ಕಿಡಿ ಕಾರಿದ್ದಾರೆ. ಸಿದ್ದರಾಮಯ್ಯ ಚಡ್ಡಿ ಸುಡುವ ಅಭಿಯಾನ ಮಾಡ್ತೀವಿ ಅನ್ನೋ ಹೇಳಿಕೆ ವಿಚಾರವಾಗಿ ದಾವಣಗೆರೆಯಲ್ಲಿ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್‌ನವರಿಗೆ ಬುದ್ಧಿ ಭ್ರಮಣೆ ಆಗಿದೆ.

ಚಡ್ಡಿ ಸುಡುವ ಅಭಿಯಾನ ಮಾಡುವುದಾಗಿ ಹೇಳಿದ ಸಿದ್ದರಾಮಯ್ಯ ಅವರಿಗೆ ಬುದ್ದಿ ಇಲ್ಲ. ವಿರೋಧ ಪಕ್ಷದ ನಾಯಕರಾಗಿ ಈ ರೀತಿ ಮಾತನಾಡುವುದು ಸರಿಯಲ್ಲ. ಚಡ್ಡಿ ವಿಷಯಕ್ಕೆ ಬಂದರೆ ಸರ್ವನಾಶ ಆಗುತ್ತಾರೆ. ಬೇರೆ ರಾಜ್ಯದಲ್ಲಿ ಆದ ಪರಿಸ್ಥಿತಿಯೇ ಇಲ್ಲಿ ಆಗುತ್ತದೆ ಎಂದು ಭೈರತಿ ಬಸವರಾಜ್ ಅವರು ಸಿದ್ದರಾಮಯ್ಯನವರ ವಿರುದ್ಧ ಕಿಡಿಕಾರಿದರು.

ಆರ್‌ಎಸ್‌ಎಸ್ ಸಂಸ್ಥೆ ಸಂಸ್ಕೃತಿ ಉಳಿಸುವ ಮತ್ತು ದೇಶ ಕಟ್ಟು ಕೆಲಸ ಮಾಡುತ್ತಿದೆ. ಈ ಸಂದಭರ್ದಲ್ಲಿ ಈ ರೀತಿಯಾಗಿ ಹೇಳಿಕೆ ನೀಡುವುದು ಸರಿಯಲ್ಲ. ಇದನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದರು. ಇನ್ನು ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ ಮಾತನಾಡಿದ ಅವರು, ಅದು ಸಿಎಂಗೆ ಬಿಟ್ಟ ಪರಮಾಧಿಕಾರ. ಸಂಪುಟ ವಿಸ್ತರಣೆ ಆಗದೆ ಇದ್ದರೆ ಚುನಾವಣೆಗೆ ಹೋಗ್ತೇವೆ. ನಮ್ಮೆಲ್ಲ ಶಾಸಕರು ಇದಕ್ಕೆ ಸಿದ್ಧರಾಗಿದ್ದಾರೆ ಎಂದರು.

ಓದಿ :ಪರಿಷ್ಕೃತ ಪಠ್ಯಕ್ರಮವನ್ನು ಕಸದ ಬುಟ್ಟಿಗೆ ಎಸೆಯಿರಿ: ಸಿದ್ದರಾಮಯ್ಯ

For All Latest Updates

TAGGED:

ABOUT THE AUTHOR

...view details