ಕರ್ನಾಟಕ

karnataka

ETV Bharat / state

ಯಾರು ಬ್ಲ್ಯಾಕ್ ಮೇಲ್​ ಮಾಡಿದ್ದಾರೋ, ಯಾರು ವೈಟ್ ಮೇಲ್ ಮಾಡಿದ್ದಾರೋ ಗೊತ್ತಿಲ್ಲ: ಸಚಿವ ಬಿ ಸಿ ಪಾಟೀಲ್ - ಬಿಸಿ ಪಾಟೀಲ್

ಸಿಡಿ ವಿಚಾರವಾಗಿ ಸಚಿವ ಬಿಸಿ ಪಾಟೀಲ್​ ಪ್ರತಿಕ್ರಿಯಿಸಿ, ಇಲ್ಲಿವರೆಗೂ ಇಲ್ಲದ ಸಿಡಿ ಇವಾಗ ಹೇಗೆ ಬರುತ್ತೆ, ಮಂತ್ರಿ ಸ್ಥಾನ ಸಿಗದಿದ್ದಾಗ ಸಿಡಿ ಬಾಂಬ್ ಅಂತ ಹೇಳ್ತಾರೆ. ಇದೊಂಥರ ಬ್ಲ್ಯಾಕ್ ಮೇಲ್ ಅಲ್ವಾ? ಎಂದು ಕೆಲ ರೆಬಲ್‌ ಶಾಸಕರಿಗೆ ಟಾಂಗ್ ನೀಡಿದ್ದಾರೆ.

BC Patil
ಬಿಸಿ ಪಾಟೀಲ್

By

Published : Jan 14, 2021, 5:45 PM IST

ದಾವಣಗೆರೆ: ಕೆಲ ಆಕಾಂಕ್ಷಿಗಳಿಗೆ ಹಾಗೂ ಶಾಸಕ ಮುನಿರತ್ನ ಅವರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಮುಖ್ಯಮಂತ್ರಿ ಅವರು ಎಲ್ಲ ಸರಿ ಮಾಡ್ತಾರೆ, ಮುಂದೆ ಎಲ್ಲಾ ಸರಿಯಾಗುತ್ತದೆ ಎಂದು ಸಚಿವ ಬಿ ಸಿ ಪಾಟೀಲ್ ಹೇಳಿದ್ದಾರೆ.

ಸಚಿವ ಬಿ ಸಿ ಪಾಟೀಲ್ ಪ್ರತಿಕ್ರಿಯೆ

ನಗರದಲ್ಲಿ ಮಾತನಾಡಿದ ಸಚಿವರು, ಸಿಡಿ ವಿಚಾರವಾಗಿ ಪ್ರತಿಕ್ರಿಯಿಸಿದರು. ಯಾರು ಬ್ಲ್ಯಾಕ್ ಮೇಲ್ ಮಾಡಿದ್ದಾರೋ, ಇನ್ಯಾರು ವೈಟ್ ಮೇಲ್ ಮಾಡಿದ್ದಾರೋ ಅನ್ನೋದು ನಂಗೆ ಗೊತ್ತಿಲ್ಲ. ಇಲ್ಲಿವರೆಗೂ ಇಲ್ಲದ ಸಿಡಿ ಇವಾಗ ಹೇಗೆ ಬರುತ್ತೆ, ಮಂತ್ರಿ ಸ್ಥಾನ ಸಿಗದಿದ್ದಾಗ ಸಿಡಿ ಬಾಂಬ್ ಅಂತ ಹೇಳ್ತಾರೆ. ಇದೊಂಥರ ಬ್ಲ್ಯಾಕ್ ಮೇಲ್ ಅಲ್ವಾ? ಎಂದು ಕೃಷಿ ಸಚಿವ ಬಿ ಸಿ‌ ಪಾಟೀಲ್ ಕೆಲ ರೆಬಲ್‌ ಶಾಸಕರಿಗೆ ಟಾಂಗ್ ನೀಡಿದರು.

ಓದಿ...ಮೂವರು ಬ್ಲ್ಯಾಕ್​ಮೇಲ್ ಮಾಡಿ ಸಚಿವರಾಗಿದ್ದಾರೆ: ಬಿ.ಎಲ್. ಶಂಕರ್

ನೂತನ ಸಚಿವ ಸಿ ಪಿ ಯೋಗೆಶ್ವರ್ ವಿರುದ್ಧ ವಿಶ್ವನಾಥ್ ವಾಗ್ದಾಳಿ ಬಗ್ಗೆ ಪ್ರತಿಕ್ರಿಯಿಸಿದ ಬಿಸಿಪಿ, ವಿಶ್ಬನಾಥ್ ಆ ರೀತಿ ಮಾತನಾಡಬಾರದು, ಬಿಎಸ್​ವೈ ವಿಶ್ವನಾಥ್ ಅವರನ್ನ ಮಿನಿಸ್ಟರ್ ಮಾಡ್ತಾ ಇದ್ದರು. ಆದರೆ ಕೋರ್ಟ್ ತೀರ್ಪು ಅವರ ವಿರುದ್ಧವಾಗಿ ಬಂದಿದೆ. ಸಿಎಂ ಮೊದಲೇ ಅವರಿಗೆ ವಾತಾವರಣ ಸರಿಯಿಲ್ಲ, ಚುನಾವಣೆಗೆ ಸ್ಪರ್ಧಿಸೋದು ಬೇಡ ಅಂದಿದ್ರು. ಆದರೂ ಸ್ಪರ್ಧೆ ಮಾಡಿ ಸೋತರು. ಆದರು ಕೂಡ ಸಿಎಂ ಬಿಎಸ್​ವೈ ದೊಡ್ಡ ಮನಸ್ಸು ಮಾಡಿ ಅವರನ್ನ ಎಂಎಲ್​ಸಿ ಮಾಡಿದ್ರು ಎಂದರು.

ABOUT THE AUTHOR

...view details