ಕರ್ನಾಟಕ

karnataka

ETV Bharat / state

ಡಿ.15 ರಿಂದ ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿ ಕೇಂದ್ರ ಆರಂಭ: ಡಿಸಿ ಮಹಾಂತೇಶ್ ಬೀಳಗಿ - Davanagere District Secretariat Office Hall

ದಾವಣಗೆರೆ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಬೆಂಬಲ ಬೆಲೆ ಯೋಜನೆಯಡಿ ರಾಗಿ ಮತ್ತು ಬಿಳಿ ಜೋಳ ಖರೀದಿ ಟಾಸ್ಕ್​ ಫೋರ್ಸ್ ಸಭೆಯ ಅಧ್ಯಕ್ಷತೆ ವಹಿಸಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಾತನಾಡಿದರು. ಈ ವೇಳೆ, ಅವರು ಮಧ್ಯವರ್ತಿಗಳು ಇದರ ಲಾಭ ಪಡೆಯದಂತೆ ಯೋಜನೆಯ ಪ್ರಯೋಜನ ಅರ್ಹ ರೈತರಿಗೆ ಮಾತ್ರ ದೊರೆಯುವಂತೆ ಇಲಾಖೆಗಳು ನೋಡಿಕೊಳ್ಳಬೇಕು ಎಂದು ಸೂಚಿಸಿದರು.

Millet Purchase Center under Support Price Scheme starts from Dec. 15: DC Mahantesh
ಡಿ.15 ರಿಂದ ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿ ಕೇಂದ್ರ ಆರಂಭ: ಡಿಸಿ ಮಹಾಂತೇಶ್ ಬೀಳಗಿ

By

Published : Dec 14, 2020, 4:46 PM IST

Updated : Dec 14, 2020, 5:07 PM IST

ದಾವಣಗೆರೆ: ಡಿ. 15 ರಿಂದ ಜಿಲ್ಲೆಯಲ್ಲಿ ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿ ಕೇಂದ್ರವನ್ನು ಆರಂಭಿಸಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದರು.

ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಬೆಂಬಲ ಬೆಲೆ ಯೋಜನೆಯಡಿ ರಾಗಿ ಮತ್ತು ಬಿಳಿ ಜೋಳ ಖರೀದಿ ಟಾಸ್ಕ್​ ಫೋರ್ಸ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಾಗಿಗೆ ಸರ್ಕಾರದ ಕನಿಷ್ಠ ಬೆಂಬಲ ಬೆಲೆ ರೂ.3295/- ಇದ್ದು ಮಾರುಕಟ್ಟೆ ಬೆಲೆಗಿಂತ ಹೆಚ್ಚಾಗಿದೆ. ಹಾಗಾಗಿ ಮಧ್ಯವರ್ತಿಗಳು ಇದರ ಲಾಭ ಪಡೆಯದಂತೆ ಯೋಜನೆಯ ಪ್ರಯೋಜನ ಅರ್ಹ ರೈತರಿಗೆ ಮಾತ್ರ ದೊರೆಯುವಂತೆ ಇಲಾಖೆಗಳು ನೋಡಿಕೊಳ್ಳಬೇಕು ಎಂದರು.

ಜಿಲ್ಲೆಯ ಐದು ತಾಲೂಕುಗಳಾದ ಜಗಳೂರು, ದಾವಣಗೆರೆ, ಹರಿಹರ, ಚನ್ನಗಿರಿ ಹಾಗೂ ಹೊನ್ನಾಳಿ ಇಲ್ಲಿ ರಾಗಿ ಖರೀದಿ ಕೇಂದ್ರಗಳನ್ನು ಆರಂಭಿಸಲಾಗುತ್ತಿದ್ದು, ಪ್ರತಿ ರೈತರು ಎಕರೆಗೆ 10 ಕ್ವಿಂಟಾಲ್‍ನಂತೆ ಗರಿಷ್ಠ 50 ಕ್ವಿಂಟಾಲ್ ರಾಗಿಯನ್ನು ಮಾರಾಟ ಮಾಡಬಹುದಾಗಿದೆ. ನಮ್ಮಲ್ಲಿರುವ ರಾಗಿ ಬೆಳೆಯುವ ಪ್ರದೇಶದ ಅಂದಾಜಿನಂತೆ 1 ಲಕ್ಷ ಕ್ವಿಂಟಾಲ್ ರಾಗಿ ಬರಬಹುದು. ಇದಕ್ಕಿಂತ ಹೆಚ್ಚಾದಲ್ಲಿ ಮಧ್ಯವರ್ತಿಗಳು, ದಲ್ಲಾಳಿಗಳು ಲಾಭ ಪಡೆಯುವ ಸಾಧ್ಯತೆ ಇರುತ್ತದೆ. ಹಾಗಾಗಿ ಖರೀದಿ ಕೇಂದ್ರಗಳಲ್ಲಿ ಕಾರ್ಯ ನಿರ್ವಹಿಸುವವರು ಎಚ್ಚರದಿಂದ ನೋಡಿಕೊಳ್ಳಬೇಕು. ಸಂಬಂಧಿಸಿದ ತಾಲೂಕುಗಳ ತಹಶೀಲ್ದಾರ್​ಗಳು ಖರೀದಿ ಕೇಂದ್ರಗಳಿಗೆ ಆಗಾಗ್ಗೆ ಭೇಟಿ ನೀಡಬೇಕು. ನಾನೂ ಕೂಡ ಆಗಾಗ ಮಾರುವೇಷದಲ್ಲಿ ಭೇಟಿ ನೀಡಲಿರುವೆ. ಬಹಳ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಬೇಕು ಎಂದು ತಿಳಿಸಿದರು.

ದಾವಣಗೆರೆ ತಾಲೂಕಿನಲ್ಲಿ 404 ಹೆಕ್ಟೇರ್, ಹರಿಹರದ 110, ಜಗಳೂರಿನ 1655, ಹೊನ್ನಾಳಿಯ 370, ಚನ್ನಗಿರಿಯ 2155, ನ್ಯಾಮತಿಯ 90 ಹೆಕ್ಟೇರ್​ಗಳಲ್ಲಿ ರಾಗಿ ಬೆಳೆಯಲಾಗುತ್ತಿದೆ ಎಂದರು.

Last Updated : Dec 14, 2020, 5:07 PM IST

ABOUT THE AUTHOR

...view details