ಕರ್ನಾಟಕ

karnataka

ETV Bharat / state

ಏಕಾಏಕಿ ಕುಸಿದ ಕೆರೆ ಏರಿ.. ರಸ್ತೆಯಿಂದ ಕೆರೆಗೆ ಬಿದ್ದ ನಂದಿನಿ ಹಾಲಿನ ವಾಹನ - ದಾವಣಗೆರೆ ಹಾಲಿನ ಟ್ಯಾಂಕರ್ ಮುಳುಗಡೆ

ಕುಸಿದ ಕೆರೆ ಏರಿ-ಕೆರೆಗೆ ಬಿತ್ತು ನಂದಿನಿ ಹಾಲಿನ ವಾಹನ-ದಾವಣಗೆರೆ ಜಿಲ್ಲೆಯಲ್ಲಿ ಘಟನೆ

Milk tanker drown over lake damage at Davanagere, Davanagee milk tanker drown, Davanagere news, ದಾವಣಗೆರೆಯಲ್ಲಿ ಕೆರೆ ಏರಿ ಕುಸಿದ ಹಿನ್ನೆಲೆ ನೀರಿನಲ್ಲಿ ಮುಳುಗಿದ ಹಾಲಿನ ಟ್ಯಾಂಕರ್, ದಾವಣಗೆರೆ ಹಾಲಿನ ಟ್ಯಾಂಕರ್ ಮುಳುಗಡೆ, ದಾವಣಗೆರೆ ಸುದ್ದಿ,
ರಸ್ತೆಯಿಂದ ಕೆರೆಗೆ ಬಿದ್ದ ನಂದಿನಿ ಹಾಲಿನ ವಾಹನ

By

Published : Jul 5, 2022, 1:45 PM IST

ದಾವಣಗೆರೆ: ಚಲಿಸುತ್ತಿದ್ದ ವಾಹನ ಕೆರೆ ಏರಿ ಕುಸಿದ ಪರಿಣಾಮ ನಂದಿನ ಹಾಲಿನ ವಾಹನ ನೀರಿಗೆ ಉರುಳಿ ಬಿದ್ದಿದ್ದು, ಚಾಲಕ ಸೇರಿದಂತೆ ವಾಹನದಲ್ಲಿದ್ದವರು ನಂದಿನಿ ಹಾಲು ಟ್ಯಾಂಕರ್​ನಿಂದ ಜಿಗಿದು ತಮ್ಮ ಪ್ರಾಣವನ್ನು ಉಳಿಸಿಕೊಂಡಿರುವ ಘಟನೆ ದೇವರಹಳ್ಳಿ ಹಾಗೂ ನಲ್ಲೂರ ಗ್ರಾಮಗಳ ಮಧ್ಯೆದ ಕೆರೆ ಏರಿ ಮೇಲೆ ಸಂಭವಿಸಿದೆ.

ರಸ್ತೆಯಿಂದ ಕೆರೆಗೆ ಬಿದ್ದ ನಂದಿನಿ ಹಾಲಿನ ವಾಹನ

ಎಂದಿನಂತೆ ಈ ಹಾಲಿನ ವಾಹನ ಚನ್ನಗಿರಿ ತಾಲೂಕಿ ದೇವರಹಳ್ಳಿ ಹಾಗೂ ನಲ್ಲೂರ ನಡುವೆ ಇರುವ ದೇವರಹಳ್ಳಿ ಕೆರೆ ಏರಿ ಮೇಲೆ ಸಾಗುವ ವೇಳೆ ಏಕಾಏಕಿ ರಸ್ತೆ ಕುಸಿದಿದೆ. ಪರಿಣಾಮ ಹಾಲಿನ ವಾಹನ ಕೆರೆಗೆ ಉರುಳಿದೆ. ವಾಹನ ಖಾಲಿ ಇದ್ದ ಹಿನ್ನೆಲೆ ದುರಂತ ತಪ್ಪಿದೆ.

ಕೆರೆ ರಸ್ತೆ ದುರಸ್ತಿ ಕಾರ್ಯ ಕೈಗೊಳ್ಳುವಂತೆ ಮನವಿ

ಓದಿ:ಕೆರೆಯಲ್ಲಿ ಮುಳುಗಿ ಇಬ್ಬರು ಯುವಕರ ಸಾವು

ಹಾಲಿನ ವಾಹನ ಕೆರೆಗೆ ಬಿದ್ದ ಪರಿಣಾಮ ಸ್ಥಳೀಯರ ಆಕ್ರೋಶಕ್ಕೆ ಕಾರಣ ಆಗಿದೆ. ಈ ರೀತಿಯ ಘಟನೆಗಳು ಪ್ರತಿದಿನ ನಡೆಯುತ್ತಿದ್ದರಿಂದ ಸ್ಥಳೀಯರು ರಸ್ತೆ ದುರಸ್ತಿ ಮಾಡುವಂತೆ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರಿಗೆ ಮನವಿ ಸಲ್ಲಿಸಿದ್ದರು. ಗ್ರಾಮಸ್ಥರ ಮನವಿಗೆ ಸ್ಪಂದಿಸಿದ ಶಾಸಕ ರಸ್ತೆ ದುರಸ್ತಿ ಮಾಡಿಸುವುದಾಗಿ ಭರವಸೆ ನೀಡಿದ್ರು.

ಕೆರೆ ರಸ್ತೆ ದುರಸ್ತಿ ಕಾರ್ಯ ಕೈಗೊಳ್ಳುವಂತೆ ಮನವಿ

ABOUT THE AUTHOR

...view details