ಹರಿಹರ:ತಾಲೂಕಿನಲ್ಲಿ ಕೊರೊನಾ ಹೆಚ್ಚಾಗುತ್ತಿರುವುದನ್ನು ತಡೆಯಲು ಶಾಸಕ ಎಸ್.ರಾಮಪ್ಪ ಇಂದು ಮಧ್ಯಾಹ್ನದ ಮೇಲೆ ಅಂಗಡಿ ಬಂದ್ ಮಾಡಲು ವರ್ತಕರಿಗೆ ಮನವಿ ಮಾಡಿದ್ದರು. ಆದರೆ ಇದಕ್ಕೆ ವಿರುದ್ಧವಾಗಿ ನಗರದ ವ್ಯಾಪಾರಿಗಳು ಎಂದಿನಂತೆ ವಹಿವಾಟು ನೆಡೆಸಿದರು.
ಶಾಸಕ ಎಸ್. ರಾಮಪ್ಪ ನೇತೃತ್ವದಲ್ಲಿ ಅಧಿಕಾರಗಳು ಹಾಗೂ ವರ್ತಕರು ಸಭೆ ಕರೆದು ಇಂದು ಮಧ್ಯಾಹ್ನ ನಗರದ ಎಲ್ಲಾ ವರ್ತಕರು ಸ್ವಯಂ ಪ್ರೇರಿತವಾಗಿ ಅಂಗಡಿಗಳನ್ನು ಬಂದ್ ಮಾಡಿ ಕೊರೊನಾ ವೈರಸ್ ಹರಡದಂತೆ ತಡೆಯಲು ಸಹಕರಿಸಬೇಕೆಂದು ಮನವಿ ಮಾಡಿದ್ದರು. ಆದರೆ ಇದಕ್ಕೆ ವಿರುದ್ಧವಾಗಿ ನಗರದ ವ್ಯಾಪಾರಿಗಳು ಬೆಳಗ್ಗೆಯಿಂದಲೇ ವ್ಯಾಪಾರವನ್ನು ಆರಂಭಿಸಿದ್ದರು. ಕೆಲವೇ ಕೆಲವು ವ್ಯಾಪಾರಸ್ಥರು ಸ್ಪಂದಿಸಿ ತಮ್ಮ ವ್ಯಾಪಾರವನ್ನು ಬಂದ್ ಮಾಡಿದ್ದು, ಬಿಟ್ಟರೆ ಉಳಿದಂತೆ ಬಹುತೇಕ ವ್ಯಾಪಾರಸ್ಥರು ಮಧ್ಯಾಹ್ನದ ನಂತರವೂ ನಿರ್ಭಯವಾಗಿ ತಮ್ಮ ವ್ಯಾಪಾರ-ವಹಿವಾಟನ್ನು ನೆಡೆಸಿದರು.
ಮಾಹಿತಿ ಇಲ್ಲ: