ದಾವಣಗೆರೆ: ಮಾನಸಿಕ ಅಸ್ವಸ್ಥೆ ಲಾಂಗ್ ಹಿಡಿದು ಮಾರುಕಟ್ಟೆಯಲ್ಲಿ ಓಡಾಡಿದ್ದರಿಂದ ಜನ ಆತಂಕಗೊಂಡಿರುವ ಘಟನೆ ದಾವಣಗೆರೆ ಜಿಲ್ಲೆ ಚನ್ನಗಿರಿ ಪಟ್ಟಣದಲ್ಲಿ ನಡೆದಿದೆ.
ಲಾಂಗ್ ಹಿಡಿದು ಮಾರುಕಟ್ಟೆಯಲ್ಲಿ ಓಡಾಡಿದ ಮಾನಸಿಕ ಅಸ್ವಸ್ಥೆ: ಆತಂಕದಲ್ಲಿ ಜನ - ಮಚ್ಚು ಹಿಡಿದು ಮಾರುಕಟ್ಟೆಗೆ ಬಂದ ಮಾನಸಿಕ ಅಸ್ವಸ್ಥೆ
ಮಾನಸಿಕ ಅಸ್ವಸ್ಥೆಯೊಬ್ಬರು ಮಚ್ಚು ಹಿಡಿದು ಮಾರುಕಟ್ಟೆ ರಸ್ತೆಯಲ್ಲೆಲ್ಲಾ ಓಡಾಡಿದ್ದು, ಈ ಮಹಿಳೆಯನ್ನು ಕಂಡ ಜನ ಭಯಭೀತರಾಗಿರುವ ಘಟನೆ ದಾವಣಗೆರೆಯಲ್ಲಿ ಜರುಗಿದೆ.
![ಲಾಂಗ್ ಹಿಡಿದು ಮಾರುಕಟ್ಟೆಯಲ್ಲಿ ಓಡಾಡಿದ ಮಾನಸಿಕ ಅಸ್ವಸ್ಥೆ: ಆತಂಕದಲ್ಲಿ ಜನ mentaly disabled woman roaming with weapon](https://etvbharatimages.akamaized.net/etvbharat/prod-images/768-512-11220822-thumbnail-3x2-neww.jpg)
ಲಾಂಗ್ ಹಿಡಿದು ಮಾರುಕಟ್ಟೆಯಲ್ಲಿ ಓಡಾಡಿದ ಮಹಿಳೆ
ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕು ಚಿಕ್ಕಜಾಜೂರು ಗ್ರಾಮದ ನಿವಾಸಿ ರುಕ್ಮಿಣಿ (34), ಲಾಂಗ್ ಹಿಡಿದು ಓಡಾಡಿದ ಅಸ್ವಸ್ಥ ಮಹಿಳೆ. ಜೀನ್ಸ್ ಪ್ಯಾಂಟ್, ಕೆಂಪು ಜರ್ಕಿನ್ ಧರಿಸಿ ಮಚ್ಚು ಹಿಡಿದು ಓಡಾಡುತ್ತಿದ್ದ ಮಹಿಳೆಗೆ 3 ಮಕ್ಕಳಿದ್ದಾರೆ ಎನ್ನಲಾಗುತ್ತಿದೆ. ಇನ್ನು ಮಹಿಳೆಯ ಬಳಿ ಇದ್ದ ಮಾರಕಾಸ್ತ್ರವನ್ನು ಸ್ಥಳೀಯ ಆಟೋ ಚಾಲಕರು ಉಪಾಯವಾಗಿ ಪಡೆದುಕೊಂಡ ಬೆನ್ನಲ್ಲೇ ಸ್ಥಳೀಯರು ಆಕೆಯನ್ನು ಪೊಲೀಸರಿಗೆ ಒಪ್ಪಿಸಿದರು.
ಚನ್ಮಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದ್ದು, ಮಾನಸಿಕ ಅಸ್ವಸ್ಥೆಯ ಬಳಿ ಲಾಂಗ್ ಎಲ್ಲಿಂದ ಬಂತು ಎಂಬುದರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.